ದಾವಣಗೆರೆ ಅಂದನೂರು ಮಹಾಲಿಂಗಪ್ಪ (ಮೇಷ್ಟ್ರು) ಅವರ ಮೊಮ್ಮಗ ಹಾಗೂ ಹೆಸರಾಂತ ಕಿವಿ, ಮೂಗು, ಗಂಟಲು ವೈದ್ಯರಾದ ಡಾ.ಎ.ಎಂ.ಶಿವಕುಮಾರ್ ಅವರ ಪುತ್ರ ಚಿ|| ಎ.ಎಸ್. ಪೂರ್ಣಚಂದ್ರ ಅವರು, ದಿನಾಂಕ 06.08.2021ರ ಶುಕ್ರವಾರ ರಾತ್ರಿ 10.30ಕ್ಕೆ ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 34 ವರ್ಷ ವಯಸ್ಸಾಗಿತ್ತು. ತಂದೆ – ತಾಯಿ, ಅಪಾರ ಬಂಧು – ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 07.08.2021ರ ಶನಿವಾರ ಮಧ್ಯಾಹ್ನ 12 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 15, 2025