ದಾವಣಗೆರೆ ಕೆ.ಟಿ.ಜೆ.ನಗರ 3ನೇ ಮೇನ್, 8ನೇ ಕ್ರಾಸ್ ವಾಸಿ ಕರ್ನಾಟಕದ ಮಧ್ಯಭಾಗ ದಾವಣಗೆರೆಗೆ ಶಾಮಿಯಾನ ಪರಿಚಯಿಸಿ ಸತತ 5 ದಶಕಗಳ ಕಾಲ ಸ್ಟಾರ್ ಶಾಮಿಯಾನ ಶಿರೋನಾಮದಡಿ ಅತ್ಯುತ್ತಮ ಸೇವೆಯನ್ನು ನೀಡಿದಂತಹ ಮತ್ತು ಅಂಜುಂ ಎಜುಕೇಶನ್ ಸೊಸೈಟಿ (ರಿ.), ದಾವಣಗೆರೆ. ಎಂಬ ವಿದ್ಯಾಸಂಸ್ಥೆಯನ್ನು 1980ರಲ್ಲಿ ಸ್ಥಾಪಿಸಿ, ನರ್ಸರಿಯಿಂದ ಪದವಿ ತರಗತಿವರೆಗೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ, ಸತತ 40 ವರ್ಷಗಳಿಂದ ಶೈಕ್ಷಣಿಕ ಸೇವೆ ನೀಡುತ್ತಿದ್ದ ಶಿಕ್ಷಣ ಪ್ರೇಮಿ, ಬಡವರ ಬಂಧು, ಖ್ಯಾತ ಕೈಗಾರಿಕೋದ್ಯಮಿ, ಪ್ರಖ್ಯಾತ ವಾಣಿಜ್ಯೋದ್ಯಮಿ ಹಾಗೂ ಅನೇಕ ಕಲ್ಯಾಣ ಮಂಟಪಗಳನ್ನು ದಾವಣಗೆರೆಗೆ ಪರಿಚಯಿಸಿದ ಸಮಾಜ ಸೇವಕರಾದ ಶ್ರೀ ಅಲ್ಹಾಜ್ ಹೆಚ್.ಕೆ.ಅಬ್ದುಲ್ ಜಬ್ಬಾರ್ ಸಾಹೇಬ್ ಅವರು ದಿನಾಂಕ : 23-3-21ರ ಮಂಗಳವಾರ ಬೆಳಿಗ್ಗೆ 10-30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾಗಿರುತ್ತಾರೆ. ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂದು- ಬಳಗವನ್ನು ಅಗಲಿರುವ ಶ್ರೀಯುತರ ಅಂತ್ಯಕ್ರಿಯೆಯು ದಿ : 23-3-2021ರ ಮಂಗಳವಾರ ರಾತ್ರಿ 8 ಗಂಟೆಗೆ ನಗರದ ಪಿ.ಬಿ.ರಸ್ತೆಯಲ್ಲಿರುವ ಹಳೇ ಖಬರಸ್ತಾನದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 26, 2025