ದಾವಣಗೆರೆಯ ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆ 2ನೇ ಮುಖ್ಯ ರಸ್ತೆ, 1ನೇ ತಿರುವಿನ ಮನೆ ಸಂಖ್ಯೆ 391, `ಸುಚಿರ’ ನಿವಾಸಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಅಧೀಕ್ಷಕರಾಗಿದ್ದ ದಿ|| ಸಿ. ಮಲ್ಲಪ್ಪ ಅವರ ಧರ್ಮಪತ್ನಿ ಶ್ರೀಮತಿ ಕೆ.ಎ. ನಾಗರತ್ನಮ್ಮ ಅವರು ದಿನಾಂಕ 22.11.2021ರ ಸೋಮವಾರ ರಾತ್ರಿ 11 ಗಂಟೆಗೆೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 83 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಸೊಸೆಯಂದಿರು, ಇಬ್ಬರು ಪುತ್ರಿಯರು, ಅಳಿಯ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 23.11.2021ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಗ್ಲಾಸ್ ಹೌಸ್ ಬಳಿಯ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 8, 2025