ನಾಡಿನ ಹೆಸರಾಂತ ಕವಿ, ಆಧುನಿಕ ವಚನಕಾರ, ಹೋರಾಟಗಾರ, ವಿಧಾನ ಪರಿ ಷತ್ ಮತ್ತು ವಿಧಾನ ಸಭಾ ಮಾಜಿ ಸದಸ್ಯರಾಗಿದ್ದ ಡಾ. ಮಹಾದೇವ ಬಣಕಾರ ಅವರ ಪತ್ನಿ ಶ್ರೀಮತಿ ಪಾರ್ವತಮ್ಮ ಅವರು ಇಂದು ಮುಂಜಾನೆ 6 ಕ್ಕೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಸುಮಾರು 82 ವರ್ಷ ವಯಸ್ಸಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಮಹದೇವ ಬಣಕಾರರ ಜನ್ಮ ಸ್ಥಳ ಬ್ಯಾಡಗಿ ತಾಲ್ಲೂಕಿನ ಮೋಟೇಬೆನ್ನೂರಿನಲ್ಲಿ ಇಂದು ಸಂಜೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024