ದಾವಣಗೆರೆ ಹದಡಿ ರಸ್ತೆಯ ಶ್ರೀನಿವಾಸ ನಗರದ ವಾಸಿ ಶ್ರೀ ಕೆ.ಎಸ್. ಸುರೇಶ್ ಅವರು ದಿನಾಂಕ 17.5.2021ರ ಸೋಮವಾರ ಸಂಜೆ 6.55ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಸುರೇಶ್, ಐಟಿಐ ಕಾಲೇಜಿನ ನಿವೃತ್ತ ನೌಕರರಾಗಿದ್ದ ದಿ. ಶಿವಣ್ಣನವರ ಪುತ್ರ. ಮೃತರಿಗೆ 51 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ಸೋಮವಾರ ರಾತ್ರಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024