ಹರಿಹರದ ನಡುವಲ ಪೇಟೆ ವಾಸಿ, ಪ್ರಥಮ ದರ್ಜೆ ಎಲೆಕ್ಟ್ರಿಕೆಲ್ ಗುತ್ತಿಗೆದಾರರಾದ ಶ್ರೀ ಪುಂಡಲೀಕರಾವ್ ಬೊಂಗಾಳೆ ಅವರು ದಿನಾಂಕ 9.5.2021ರ ಭಾನುವಾರ ಸಂಜೆ 5 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆ, ಸಹೋದರರು, ಓರ್ವ ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 9.5.2021ರ ಭಾನುವಾರ ರಾತ್ರಿ 9 ಗಂಟೆಗೆ ಹರಿಹರದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024