ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಹಿರಿಯ ಸಹೋದರ ದಿ.ಶಾಮನೂರು ಬಸವರಾಜಪ್ಪ ಅವರ ಧರ್ಮಪತ್ನಿ ಶ್ರೀಮತಿ ಶಾಮನೂರು ಸುಶೀಲಮ್ಮ ಅವರು ಇಂದು ಬೆಳಗಿನ ಜಾವ 6.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಪುತ್ರ – ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್, ನಾಲ್ವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಸುಶೀಲಮ್ಮ ಅವರ ಅಂತ್ಯಕ್ರಿಯೆಯು ನಗರದ ಬಂಬೂಬಜಾರ್ ರಸ್ತೆಯ ಕಲ್ಲೇಶ್ವರ ರೈಸ್ಮಿಲ್ನಲ್ಲಿ ಸಂಜೆ ನೆರವೇರಿತು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 25, 2025