ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಗುಂಜಿಗನೂರು ಗ್ರಾಮದ ಅಬ್ಬಿಗೆರೆ ವಂಶಸ್ಥರಾದ ದಾವಣಗೆರೆ ಸಿಟಿ ಶಾಮನೂರು ಡಾಲರ್ ಕಾಲೋನಿ ವಾಸಿ ದಿ|| ಹೆಚ್. ಅಜ್ಜಪ್ಪನವರ ಧರ್ಮಪತ್ನಿ ಶ್ರೀಮತಿ ಜಿ.ಇ. ಶಾರದಮ್ಮ ಅವರು ದಿನಾಂಕ 05-05-2021ರ ಬುಧವಾರ ಬೆಳಿಗ್ಗೆ 8 ಗಂಟೆಗೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 05-05-2021ರಂದು ಮಧ್ಯಾಹ್ನ 4 ಗಂಟೆಗೆ ಶಾಮನೂರು ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024