ದಾವಣಗೆರೆ ವಸಂತ ರಸ್ತೆ, ಬಾರ್ಲೈನ್ ರೋಡ್ ಛಲವಾದಿಕೇರಿ ವಾಸಿ, ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿಯ ನಿವೃತ್ತ ನೌಕರರೂ ಮತ್ತು ಪತ್ರಿಕಾ ವಿತರಕರಾದ ಶ್ರೀ ಕೆ. ಅರುಣ್ಕುಮಾರ್ ಅವರ ತಂದೆಯವರೂ ಆದ ಶ್ರೀ ಕೆ.ಸಿ. ಕಾಂತರಾಜ್ ಅವರು ದಿನಾಂಕ 21.07.2021ರ ಬುಧವಾರ ಸಂಜೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 64 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.07.2021ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024