ವಿಜಯನಗರ ಜಿಲ್ಲೆ, ಹರಪಹಳ್ಳಿ ತಾಲ್ಲೂಕು, ರಾಗಿಮಸಲವಾಡ ಗ್ರಾಮದ ವಾಸಿ ಬುಳ್ಳಾಪುರದ ಸಿದ್ದಪ್ಪ ಅವರು 30.04.2021 ರ ಶುಕ್ರವಾರ ಸಂಜೆ 4 ಗಂಟೆಗೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ. 1.05.2021 ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ರಾಗಿಮಸಲವಾಡದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024