ದಾವಣಗೆರೆ ಕೊಂಡಜ್ಜಿ ರಸ್ತೆಯ ಅಶೋಕ ನಗರದ ವಾಸಿ ಶ್ರೀಮತಿ ಮಲ್ಲಮ್ಮ (65) ಅವರು ದಿನಾಂಕ 28.04.2021ರ ಬುಧವಾರ ಸಂಜೆ 7.30 ಕ್ಕೆ ನಿಧನರಾದರು. ಮಲ್ಲಮ್ಮ, ಹೂವಿನ ವ್ಯಾಪಾರಿಯಾಗಿದ್ದ ದಿ|| ವಿರೂಪಾಕ್ಷಪ್ಪ ಪಂಚಪ್ಪನವರ್ ಅವರ ಪತ್ನಿ. ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 29.04.2021ರ ಗುರುವಾರ ಮಧ್ಯಾಹ್ನ 2 ಗಂಟೆಗೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 13, 2025