ದಾವಣಗೆರೆ ದೊಡ್ಡಪೇಟೆ ಜುಮ್ಮಾ ಮಸೀದಿ ಗಲ್ಲಿ ವಾಸಿ ದಿ|| ಅಂಗಡಿ ಕರಿಬಸಪ್ಪ ಅವರ ಧರ್ಮಪತ್ನಿ, ನ್ಯೂಸ್ ಪೇಪರ್ ಮಾರಾಟಗಾರರಾದ ಶಿವಬಸಪ್ಪ ಮತ್ತು ಮಹಾರುದ್ರಪ್ಪ ಅವರ ಮಾತೋಶ್ರೀ ಶ್ರೀಮತಿ ಅಂಗಡಿ ಜಯಮ್ಮ ಅವರು ದಿನಾಂಕ 28.4.2021ರ ಬುಧವಾರ ಬೆಳಗ್ಗೆ 7.30ಕ್ಕೆ ನಿಧನರಾದರು. ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 28.4.2021ರ ಬುಧವಾರ ಮಧ್ಯಾಹ್ನ 1 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 13, 2025