ದಾವಣಗೆರೆ ಸಿಟಿ ಕುವೆಂಪು ನಗರ, 6ನೇ ಕ್ರಾಸ್ ವಾಸಿ, ಕುಂಚೂರು ಹದಡಿ ವೀರಪ್ಪನವರ ಪುತ್ರ, ಶ್ರೀ ವೀರಭದ್ರೇಶ್ವರ ಪ್ರಿಂಟಿಂಗ್ ಪ್ರೆಸ್ ಮಾಲೀಕರೂ ಹಾಗೂ ಡಿವಿಜಿ ಕನ್ನಡನಾಡು ಪತ್ರಿಕೆ’ ಸಂಪಾದಕರೂ ಆಗಿದ್ದ ಶ್ರೀ ಕೆ.ಹೆಚ್. ಬಸವರಾಜಪ್ಪ ಅವರು ದಿನಾಂಕ 10.07.2021ರ ಶನಿವಾರ ಮಧ್ಯಾಹ್ನ 4.30 ಕ್ಕೆ ಶಿವೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 76 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಸೊಸೆ, ಓರ್ವ ಪುತ್ರಿ, ಅಳಿಯ, ಮೊಮ್ಮಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 11.07.2021ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 14, 2025