ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ವಾಸಿ, ದಿ|| ದೊಡ್ಡಮನೆ ರಂಗಪ್ಪನವರ ಧರ್ಮಪತ್ನಿಶ್ರೀಮತಿ ಕರಿಯಮ್ಮ ಅವರು ದಿನಾಂಕ 21.02.2021ನೇ ಭಾನುವಾರ ರಾತ್ರಿ 8 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಐವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.02.2021ನೇ ಸೋಮವಾರ ಮಧ್ಯಾಹ್ನ 1 ಗಂಟೆಗೆ ಕುರ್ಕಿ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024