ನಗರದ ಡಿ.ಆರ್.ಎಂ. ಕಾಲೇ ಜಿನ ನಿವೃತ್ತ ಪ್ರಾಂಶುಪಾಲ ಹಾಗೂ ವಿಚಾರವಾದಿಯಾಗಿದ್ದ ದಿ. ಬಿ.ಜಿ. ನಾಗರಾಜ್ ಅವರ ಪತ್ನಿ ಶ್ರೀಮತಿ ಎಂ.ಜಿ. ಶಶಿಕಲಾ ಅವರು ಇಂದು ಬೆಳಿಗ್ಗೆ 6 ಕ್ಕೆ ನಿಧನರಾಗಿದ್ದಾರೆ. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಅವರು ಹೃದಯ ರೋಗ ದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳ ಹಿಂದೆ ಬಿ.ಜಿ. ನಾಗರಾಜ್ ಅವರು ನಿಧನರಾ ಗಿದ್ದನ್ನು ಇಲ್ಲಿ ಸ್ಮರಿಸಬಹುದು. ಶಶಿಕಲಾ ಅವರು, ಮಗಳು ಪ್ರೀತಿ ನಾಗರಾಜ್, ಅಳಿಯ ಸುದರ್ಶನ ಪಾಟೀಲ್ ಕುಲಕರ್ಣಿ, ಮೊಮ್ಮಕ್ಕಳಾದ ಲಿಪಿ, ಗೌರಿ ಅವರನ್ನು ಅಗಲಿದ್ದಾರೆ. ಶಾಮನೂರು ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024