ದಾವಣಗೆರೆ ವಿದ್ಯಾನಗರ 2ನೇ ಬಸ್ಸ್ಟಾಪ್ ಹತ್ತಿರ, 5ನೇ ಕ್ರಾಸ್ ವಾಸಿ ದಿಗಂಬರ ಜೈನ ಸಮಾಜದ ಶ್ರೀ ಮಹಾವೀರ ಸಂಘದ ಗೌರವಾಧ್ಯಕ್ಷರಾದ ಶ್ರೀ ಸುದರ್ಶನ್ಕುಮಾರ್ ಮತ್ತು ಸಹೋದರರ ತಾಯಿಯವರಾದ ಶತಾಯುಷಿ ಶ್ರೀಮತಿ ರಾಜಮತಿ ಅಮ್ಮ ಅವರು ದಿನಾಂಕ 07.07.2021ರ ಬುಧವಾರ ಸಂಜೆ 6.15 ಕ್ಕೆ ಜಿನೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪುತ್ರರು, ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಜಿನೈಕ್ಯರ ಅಂತ್ಯಕ್ರಿಯೆಯನ್ನು ದಿನಾಂಕ 08.07.2021ರ ಗುರುವಾರ ಬೆಳಿಗ್ಗೆ 10.30 ಕ್ಕೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024