ದಾವಣಗೆರೆ ತಾಲ್ಲೂಕು ಗುಮ್ಮನೂರು ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜಿ.ಎಂ. ಶಂಭುಲಿಂಗಪ್ಪ ಅವರ ತಾಯಿ, ಶತಾಯುಷಿ ಶ್ರೀಮತಿ ಮಾದಿಹಳ್ಳಿ ತಿಪ್ಪಮ್ಮ ಅವರು ದಿನಾಂಕ 28.01.2021ರ ಗುರುವಾರ ಮಧ್ಯಾಹ್ನ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 105 ವರ್ಷ ವಯಸ್ಸಾಗಿತ್ತು. ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.01.2021ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಗುಮ್ಮನೂರು ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 31, 2025