ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ತ್ಯಾವಣಿಗೆ ಗ್ರಾಮದ ವಾಸಿ, ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರ ಸಹೋದರಿ, ಶ್ರೀಮತಿ ಅನಸೂಯಮ್ಮ ಮತ್ತು ಶ್ರೀ ಟಿ.ಕೆ. ಬಸಪ್ಪನವರ ಮಗನಾದ ದಾವಣಗೆರೆ ವಾಸಿ, ಹಾಗೂ ಶ್ರೀ ಟಿ.ಕೆ. ಶಶಿಧರ್ ಇವರ ಧರ್ಮಪತ್ನಿ ಹಾಗೂ ತ್ಯಾವಣಿಗೆಯ ಜ್ಯೋತಿ ಪೆಟ್ರೋಲ್ ಬಂಕ್ ಮಾಲೀಕರಾದ ವಾಣಿವಿಲಾಸ್ ಮುರಿಗೆಣ್ಣನಗರ ಕಿರಿಯ ಪುತ್ರಿ ಶ್ರೀಮತಿ ಜ್ಯೋತಿ ಶಶಿಧರ್ಅವರು ದಿನಾಂಕ 15.01.2021ರ ಶುಕ್ರವಾರ ಮುಂಜಾನೆ ಅಕಾಲಿಕವಾಗಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 47 ವರ್ಷ ವಯಸ್ಸಾಗಿತ್ತು. ಪತಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 15.01.2021ರ ಶುಕ್ರವಾರ ರಾತ್ರಿ ತ್ಯಾವಣಗಿಯಲ್ಲಿರುವ ಮೃತರ ತೋಟದಲ್ಲಿ ನೆರವೇರಿಸಲಾಯಿತು.
December 28, 2024