ದಾವಣಗೆರೆ ಹದಡಿ ರಸ್ತೆಯಲ್ಲಿರುವ `ಆರೈಕೆ’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ|| ಟಿ.ಜಿ. ರವಿಕುಮಾರ್ ಅವರ ಧರ್ಮಪತ್ನಿ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಪ್ರೀತಿ ರವಿಕುಮಾರ್ ಅವರು ದಿನಾಂಕ 15.01.2021ರ ಶುಕ್ರವಾರ ಮುಂಜಾನೆ ಅಕಾಲಿಕವಾಗಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 46 ವರ್ಷ ವಯಸ್ಸಾಗಿತ್ತು. ಮೃತರ ಪಾರ್ಥಿವ ಶರೀರವನ್ನು ದಿನಾಂಕ 16.01.2021ರ ಶನಿವಾರ ಬೆಳಿಗ್ಗೆ 10 ರವರೆಗೆ `ಸಂವೇದನ’ 7ನೇ ಕ್ರಾಸ್, ಸಿದ್ದವೀರಪ್ಪ ಬಡಾವಣೆ, ದಾವಣಗೆರೆ. ಇಲ್ಲಿರುವ ಅವರ ಸ್ವಗೃಹದಲ್ಲಿ ಇಡಲಾಗಿದ್ದು ನಂತರ 11 ಗಂಟೆಗೆ ಹರಪನಹಳ್ಳಿ ತಾಲ್ಲೂಕು ಗಡಿಗುಡಾಳ್ (ಮಾರ್ಗ : ಅಣಜಿ ಕ್ರಾಸ್, ಉಚ್ಚಂಗಿದುರ್ಗ) ಗ್ರಾಮದಲ್ಲಿರುವ ಅವರ ತೋಟದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 1, 2025