ನಗರದ ಹೆಸರಾಂತ ಕಿರಾಣಿ ವರ್ತಕರಾಗಿದ್ದ ದಿ. ಬಿಸಲೇರಿ ಮರುಳಸಿದ್ದಪ್ಪ ಅವರ ಪತ್ನಿ ಶ್ರೀಮತಿ ರತ್ನಮ್ಮ ಅವರು ಇಂದು ಬೆಳಿಗ್ಗೆ 10.10ಕ್ಕೆ ನಿಧನರಾದರು. ಮೃತರಿಗೆ ಸುಮಾರು 78 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಸೊಸೆ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.