ದಾವಣಗೆರೆ ತಾಲ್ಲೂಕು ಬಿ.ಕಲಪನಹಳ್ಳಿ ಗ್ರಾಮದ ದಿ. ದೊಡ್ಡಗೌಡ್ರ ಕರಿಬಸಪ್ಪ ಇವರ ಪುತ್ರ ಗೌಡ್ರ ಮುರಿಗೆಪ್ಪ (ದಾವಣಗೆರೆ ಕುವೆಂಪು ನಗರ, ಬಾಪೂಜಿ ಸ್ಕೂಲ್ ಪಕ್ಕದ ರಸ್ತೆ 5ನೇ ಮೇನ್, 20ನೇ ಕ್ರಾಸ್ ವಾಸಿ) ಇವರ ಧರ್ಮಪತ್ನಿ ಶ್ರೀಮತಿ ಜಿ.ರತ್ನಮ್ಮ (69) ಅವರು, ದಿನಾಂಕ 2.01.2021 ರ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಪತಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 3.01.2021 ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 31, 2025