ಹರಿಹರ ನಗರದ ಖ್ಯಾತ ಉದ್ಯಮಿದಾರರೂ, ಎಸ್.ಎಸ್.ಕೆ. ಸಮಾಜದ ಮಾಜಿ ಅಧ್ಯಕ್ಷರೂ ಆದ ಶ್ರೀ ತುಕಾಮಣಿ ಸಾ ಭೂತೆ ಅವರು ದಿನಾಂಕ 19.01.2023ರ ಗುರುವಾರ ತಡರಾತ್ರಿ 12.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 81 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅವರು ಅಗಲಿದ್ದಾರೆ. ಮೃತರ ಅಂತಿಮ ದರ್ಶನಕ್ಕೆ ಹರಿಹರ ನಗರದ ವಿದ್ಯಾನಗರದಲ್ಲಿರುವ ಅವರ ನಿವಾಸದಲ್ಲಿ ದಿನಾಂಕ 20.01.2023ರ ಶುಕ್ರವಾರ ಮಧ್ಯಾಹ್ನ 1ರವರೆಗೆ ಇಡಲಾಗುವುದು. ನಂತರ ಮಧ್ಯಾಹ್ನ 2 ಗಂಟೆಗೆ ಹರಿಹರದ ದಾಲ್ಮಿಯಾ ವಿಶ್ರಾಮ್ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 19, 2025