ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದ ವಾಸಿ ಮಾಜಿ ಶಾಸಕರಾಗಿದ್ದ ದಿ|| ಕುಂದೂರು ರುದ್ರಪ್ಪ ಇವರ ಜೇಷ್ಠ ಸುಪುತ್ರ ಶ್ರೀಯುತ ಕೆ.ಆರ್. ಜಯದೇವಪ್ಪ ಅವರು ದಿನಾಂಕ 10-01-2023ರ ಮಂಗಳವಾರ ರಾತ್ರಿ 9.30 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 86 ವರ್ಷ ವಯಸ್ಸಾಗಿತ್ತು. ಮೃತರು ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕೆ.ಆರ್. ಜಯದೇವಪ್ಪ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ದಿನಾಂಕ 11-01-2023ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಕತ್ತಲಗೆರೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 19, 2025