ದಾವಣಗೆರೆ ತಾಲ್ಲೂಕು ಹೊಸ ಕುಂದುವಾಡ ಗ್ರಾಮದ ವಾಸಿ ಮಾಜಿ ಪ್ರಧಾನರಾದ ದಿ. ಎಂ. ಶರಣಪ್ಪನವರ ಧರ್ಮಪತ್ನಿ, ಎಂ.ಎಸ್. ನಾಗರಾಜ್ ಅವರ ತಾಯಿ ಶ್ರೀಮತಿ ಗಂಗಮ್ಮ ಇವರು ದಿನಾಂಕ 15.11.2021ರ ಸೋಮವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 81 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಮೂವರ ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 16.11.2021ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹೊಸಕುಂದುವಾಡದ ಮೃತರ ಜಮೀನನಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
November 27, 2024