ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳ ಗ್ರಾಮದ ಆಂಜನೇಯ ಬಡಾವಣೆ, 15ನೇ ಕ್ರಾಸ್ನ ನಿವಾಸಿ ದಿ. ನರಸಿಂಗರಾವ್ ಗುಜ್ಜರ್ ಇವರ ಧರ್ಮಪತ್ನಿ ಶ್ರೀಮತಿ ಗಾಯತ್ರಿ ಇವರು, ದಿನಾಂಕ 29.12.2023ರ ಶುಕ್ರವಾರ ರಾತ್ರಿ 11.50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 74 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 30.12.2023ರ ಶನಿವಾರ 2ಕ್ಕೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು.
December 28, 2024