ದಾವಣಗೆರೆ ತಾಲ್ಲೂಕು ಹಳೇಬಿಸಲೇರಿ ಗ್ರಾಮದ ವಾಸಿ, ನಿಂಬಳ್ಳೇರ ಶ್ರೀಮಾನ್ ಯಜಮಾನ್ ದೊಡ್ಡನಿಂಗಪ್ಪ ಅವರು ದಿನಾಂಕ 26-12-2023ರ ಮಂಗಳವಾರ ರಾತ್ರಿ 9.20 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 98 ವರ್ಷ ವಯಸ್ಸಾಗಿತ್ತು. ಏಳು ಜನ ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 27-12-2023ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಹಳೇಬಿಸಲೇರಿ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು.
December 28, 2024