ದಾವಣಗೆರೆ ಮಂಡಿಪೇಟೆಯಲ್ಲಿರುವ ಮೆಡಿಕಲ್ ಎಂಪೋರಿಯಂ ಮಾಲೀಕರಾದ ಶ್ರೀ ಹರೀಶ್ ಎನ್.ನಾಯಕ್ ಅವರು ದಿನಾಂಕ 13.08.2023ರ ಭಾನುವಾರ ರಾತ್ರಿ 11.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 48 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ, ಇಬ್ಬರು ಪುತ್ರರು, ಸಹೋದರರು – ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಹರೀಶ್ ಎನ್.ನಾಯಕ್ ಅವರ ಪಾರ್ಥಿವ ಶರೀರವನ್ನು ದಾವಣಗೆರೆ ಪಿ.ಜೆ.ಬಡಾವಣೆಯ ವಿಶ್ವೇಶ್ವರಯ್ಯ ಉದ್ಯಾನವನ ಹಿಂಭಾಗದ ನಂದಿ ಆಸ್ಪತ್ರೆ ಬಳಿಯ 9ನೇ ಕ್ರಾಸ್ನಲ್ಲಿರುವ ಅವರ ಸ್ವಗೃಹದಲ್ಲಿ ದಿನಾಂಕ 14.08.2023ರ ಸೋಮವಾರ ಮಧ್ಯಾಹ್ನ 1 ರವರೆಗೆ ಇಡಲಾಗುವುದು. ನಂತರ ಮಧ್ಯಾಹ್ನ 2.30ಕ್ಕೆ ದಾವಣಗೆರೆ ಪಿ.ಬಿ.ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 13, 2025