ದಾವಣಗೆರೆ ಸಿಟಿ ಎಲ್ಐಸಿ ಕಾಲೋನಿ ವಾಸಿ, ಚಿಕ್ಕಂದವಾಡಿ ಸಣ್ಣಗೌಡರ ದಿ. ಈಶ್ವರಪ್ಪನವರ ಪುತ್ರ ಪ್ರೊ. ಎಸ್.ಜಿ. ವಿರೂಪಣ್ಣನವರ ಧರ್ಮಪತ್ನಿ ಶ್ರೀಮತಿ ಸುಲೋಚನ ಇವರು, ದಿನಾಂಕ 30.5.2023ರ ಮಂಗಳವಾರ ಮಧ್ಯಾಹ್ನ 3 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 74 ವರ್ಷ ವಯಸ್ಸಾಗಿತ್ತು. ಪುತ್ರಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಪಾರ್ಥೀವ ಶರೀರವನ್ನು ನಗರದ ನೂತನ ಕಾಲೇಜು ಹತ್ತಿರದ ಮೃತರ ಸ್ವಗೃಹದಲ್ಲಿ ದಿನಾಂಕ 31.5.2023ರ ಬುಧವಾರ ಬೆಳಿಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಜೆಜೆಎಂಸಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮೃತರ ದೇಹವನ್ನು ಹಸ್ತಾಂತರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 12, 2025