ಜಗಳೂರು ತಾಲ್ಲೂಕಿನ ಉದ್ದಗಟ್ಟ ಕ್ರಾಸ್ ಬಳಿ ಆಪೆ ಆಟೋ ಹಾಗೂ ಬೈಕ್ ನಡುವೆ ಇಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಲ್ಲಿನ ಡಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಹಾಲಸ್ವಾಮಿ (51) ಮೃತಪಟ್ಟಿದ್ದಾರೆ. ಜಗಳೂರಿನಿಂದ ಹಿರೇಮಲ್ಲನಹೊಳೆಗೆ ಹೊರಟಿದ್ದಾಗ ಉದ್ದಗಟ್ಟ ಕ್ರಾಸ್ ಬಳಿ ಬೈಕ್ ಮತ್ತು ಆಪೆ ಆಟೋ ನಡುವೆ ನಡೆದ ಭೀಕರ ಅಪಘಾತದಲ್ಲಿ ತಲೆ ಭಾಗ ಸೀಳಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 8, 2025