ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿ ನಗರದ ವಸತಿ ನಿಲಯ ತಂಡ ಪ್ರಥಮ

ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿ  ನಗರದ  ವಸತಿ ನಿಲಯ ತಂಡ ಪ್ರಥಮ

ಅಸುಂಡಿ,ಏ.1-  ರಾಜ್ಯ ಖೋ-ಖೋ ಸಂಸ್ಥೆ,  ಬಳ್ಳಾರಿ ಜಿಲ್ಲಾ ಖೋ-ಖೋ ಸಂಸ್ಥೆ ಹಾಗೂ ಅಸುಂಡಿ ಯುವಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಪುರುಷರ ತಂಡವು ಪ್ರಥಮ ಸ್ಥಾನ ಪಡೆದಿದೆ. 

ಭರತ್ ಕುಮಾರ್ ಪಿ.ಬಿ., ಪಂದ್ಯಾವಳಿಯ ಸರ್ವೋತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದರು. ಬಾಹುಬಲಿ ಎಸ್.ಬಿ., ಮಹಮ್ಮದ್ ತಾಸೀನ್, ವೇಣುಗೋಪಾಲ್‌ ಎಸ್, ಲಕ್ಷ್ಮಣ, ಶರತ್ ಜೆ.ಜಿ., ಅರ್ಜುನ, ವೀರೇಶ್, ಶರೀಫ್ ಯಲಿಗಾರ್, ಸಿದ್ಧಾರೂಢ ಎಸ್ ಕೆ, ಗಜಚೌಹಾಣ್ ಹಾಗೂ ಗಗನ್ ಇವರುಗಳು ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಶ್ರಮಿಸಿದರು. ಇಲಾಖೆಯ  ಜೆ. ರಾಮಲಿಂಗಪ್ಪ ಈ ಕ್ರೀಡಾಪಟುಗಳ ತರಬೇತು ದಾರರಾಗಿರುತ್ತಾರೆ.    ವಿಜೇತ  ಕ್ರೀಡಾಪಟುಗಳನ್ನು ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಚೇತ ಎಂ. ನೆಲವಿಗಿ  ಅಭಿನಂದಿಸಿದ್ದಾರೆ.

error: Content is protected !!