Category: ರಾಣೇಬೆನ್ನೂರು

Home ರಾಣೇಬೆನ್ನೂರು

ರಾಣೇಬೆನ್ನೂರಿನಲ್ಲಿ ಇಂದು ಟೋಲ್ ಮುತ್ತಿಗೆಗೆ ನಿರ್ಧಾರ

ರಾಣೇಬೆನ್ನೂರು : ಚಳಗೇರಿ ಟೋಲ್ ಪ್ಲಾಜಾ ಪ್ರಾರಂಭವಾಗಿ ಇಲ್ಲಿಗೆ 12-13 ವರ್ಷ ಗತಿಸಿದರೂ ಕೂಡ ರೈತರಿಗೆ  ಹಾಗೂ ಇಲ್ಲಿಯ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡದೇ ಇರುವುದನ್ನು ಖಂಡಿಸಿ, ನಾಳೆ ದಿನಾಂಕ   11ರ ಬೆಳಗ್ಗೆ 10 ಘಂಟೆಗೆ ಟೋಲ್ ಸ್ಥಗಿತಗೊಳಿಸಿ ಮುತ್ತಿಗೆ ಹಾಕಲಾಗುವುದೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ತಿಳಿಸಿದರು

ರಾಣೇಬೆನ್ನೂರು : ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಸಲ್ಲಿಕೆ

ರಾಣೇಬೆನ್ನೂರು : ಫೆ. 11 ಮತ್ತು 12 ರಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಸಲ್ಲಿಸಲಾಗಿದೆ. ಸಮ್ಮೇಳನಕ್ಕಾಗಿ 23.89 ಲಕ್ಷ ಹಣ ಸಂಗ್ರಹಿಸಲಾಗಿದ್ದು, ಎಲ್ಲ ಖರ್ಚು ತೆಗೆದು ಅಂತಿಮವಾಗಿ 2.99 ಲಕ್ಷ ಹಣ ಉಳಿದಿದೆ

ರಾಣೇಬೆನ್ನೂರು : ಈಶ್ವರಾನಂದ ಶ್ರೀಗಳ ಶಾಶ್ವತ ಮೌನಕ್ಕೆ ಭಕ್ತರಲ್ಲಿ ಶೋಕ

ರಾಣೇಬೆನ್ನೂರು : ತಾಲ್ಲೂಕಿನ ಅಂಕಸಾಪುರ ಗ್ರಾಮದ ಶಿವಾನಂದ ಮಠದ ಈಶ್ವರಾನಂದ ಶ್ರೀಗಳು ಶಾಶ್ವತವಾಗಿ ಮೌನಕ್ಕೆ ಶರಣಾಗಿರುವುದು ಸಾವಿರಾರು ಭಕ್ತರಿಗೆ ದುಃಖವುಂಟು ಮಾಡಿದೆ ಎಂದು ರೈತ ಮುಖಂಡ ಎಫ್. ರವೀಂದ್ರಗೌಡ ಪಾಟೀಲ ಹೇಳಿದರು.

ಛತ್ರಪತಿ ಶಿವಾಜಿ ಜಯಂತಿ ರಾಣೇಬೆನ್ನೂರಿನಲ್ಲಿ ಭವ್ಯ ಮೆರವಣಿಗೆ

ದೇವರಾಜ ಅರಸು ಲೇಔಟ್‌ನ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಬಂದಿರುವ ನ್ಯಾಯಾಧೀಶರಾದ ಶ್ರೀಮತಿ  ಗಾಯತ್ರಿ ಹೆಚ್‌.ಡಿ. ಅವರಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ.

ಶ್ರೀ ಈಶ್ವರಾನಂದ ಸ್ವಾಮೀಜಿ ಲಿಂಗೈಕ್ಯ

ರಾಣೇಬೆನ್ನೂರು : ತಾಲ್ಲೂಕಿನ ಅಂಕಸಾಪೂರ ಗ್ರಾಮದ ಶಿವಾನಂದ ಮಠದ 52 ವಯಸ್ಸಿನ ಶ್ರೀ ಈಶ್ವರಾನಂದ ಸ್ವಾಮೀಜಿ ಹುಬ್ಬಳ್ಳಿಯ ಸಾಯಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದು, ಸಂಜೆ ಮಠದ ಆವರಣದಲ್ಲಿ  ತೇರದಾಳ ದಯಾನಂದಶ್ರೀ ಹಾಗೂ ಐರಣಿ ಮನಿ ಮಠದ ಚರಮೂರ್ತಿಗಳ  ಸಮ್ಮುಖದಲ್ಲಿ ಅಂತಿಮ  ವಿಧಿ ವಿಧಾನಗಳನ್ನು ನಡೆಸಲಾಯಿತು.

ಪಲ್ಸ್ ಪೊಲಿಯೋ ಕಾರ್ಯಕ್ರಮ ನಿಲ್ಲಿಸಿ, ‘ಕ್ಷಯ’ದತ್ತ ಲಕ್ಷ್ಯ ಕೊಡಿ

ರಾಣೇಬೆನ್ನೂರು : ದಶಕಗಳಿಂದ ಕೇಂದ್ರದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಮುನ್ನಡೆ ಯುತ್ತಲೇ ಇರುವ ಓಬಿರಾಯನ ಕಾಲದ,   ಕಾರ್ಯಕ್ರಮ ವಾಗಿದೆ. ಪೋಲಿಯೋ ಸಂಪೂರ್ಣ ನಿರ್ಮೂಲನೆ ಆಗಿ ದಶಕಗಳೇ ಉರುಳಿವೆ.

ರಾಣೇಬೆನ್ನೂರು: ಅಗಲಿದ ನಾಯಕ ಶಿವರಾಂಗೆ ಸಭಾದಿಂದ ದೀಪ ನಮನ

ರಾಣೇಬೆನ್ನೂರು, ಮಾ.3-  ನಗರದ ಡಾ.ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ  ಹಾಗೂ ಛಲವಾದಿ ಮಹಾಸಭಾ ವತಿಯಿಂದ ಮಾಜಿ ಅಧಿಕಾರಿ,  ಚಲನಚಿತ್ರ ನಟ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಸಂಸ್ಥಾಪಕರು ಮತ್ತು ಅಧ್ಯಕ್ಷರೂ  ಆದ ಕೆ.ಶಿವರಾಂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ದೀಪ ಬೆಳಗಿಸಿ ಅಗಲಿದ ನಾಯಕನಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಬಸ್ ನಿಲ್ದಾಣದ ಬಳಿ ಪ್ರತಿಭಟನೆ

ರಾಣೇಬೆನ್ನೂರು : ಪಾಕಿಸ್ತಾನ ಪರ ನಿನ್ನೆ ಘೋಷಣೆ ಕೂಗಿದ ನಾಸೀರ್ ಹುಸೇನ್ ಬೆಂಬಲಿಗರ ಕೃತ್ಯ ಖಂಡಿಸಿ ರಾಣೇಬೆನ್ನೂರು ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಅಧಿಕಾರ ಇರುವವರೆಗೂ `ಗ್ಯಾರಂಟಿ’ಗಳು ಇರುತ್ತವೆ

ರಾಣೇಬೆನ್ನೂರು : ಬರಲಿರುವ ಲೋಕಸಭೆ ಚುನಾವಣೆ ನಂತರ ನಮ್ಮ ಗ್ಯಾರಂಟಿಗಳು ನಿಲ್ಲುತ್ತವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವು ನಿಲ್ಲುವುದಿಲ್ಲ. ನಮ್ಮ ಅಧಿಕಾರ ಇರುವವರೆಗೂ `ಗ್ಯಾರಂಟಿಗಳು’ ಇರುತ್ತವೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬ್ಯಾಡಗಿ ಕ್ಷೇತ್ರದ ಶಾಸಕ  ಬಸವರಾಜ ಶಿವಣ್ಣನವರ ಹೇಳಿದರು.

ರಾಣೇಬೆನ್ನೂರು : ಮಾರ್ಕಂಡೇಯ ಮಹರ್ಷಿಗಳ ಜಯಂತಿ, ತೊಟ್ಟಿಲೋತ್ಸವ

ರಾಣೇಬೆನ್ನೂರು : ಇಲ್ಲಿನ ಶ್ರೀ ಸಿದ್ದೇಶ್ವರ ನಗರದಲ್ಲಿರುವ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನಿನ್ನೆ ಶ್ರೀ ಗುರು ಮಾರ್ಕಂಡೇಶ್ವರ ಮಹರ್ಷಿಗಳ ಅಭಿಷೇಕ, ಪೂಜಾ ಕಾರ್ಯಕ್ರಮಗಳು ಪದ್ಮಶಾಲಿ ಸಮಾಜದ ಪೀಠಾಧ್ಯಕ್ಷರಾದ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಗುರು ಮಠ ಮಹಾಸಂಸ್ಥಾನ ತುಮ್ಮಿನಕಟ್ಟಿಯ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದವು.

ಡಾ.ರಾಜ್‌ರಂತಹ ನಟನನ್ನು ಕಲಾ ಜಗತ್ತಿಗೆ ನೀಡಿದ್ದೇ ರಂಗಭೂಮಿ

ರಾಣೇಬೆನ್ನೂರು : ರಂಗಭೂಮಿ ಕಲಾ ಪ್ರತಿಭೆಗಳನ್ನು ಹುಟ್ಟುಹಾಕುವ ಒಂದು ವಿಶ್ವವಿದ್ಯಾಲಯವಿದ್ದಂತೆ, ನಿಜವಾದ ಕಲೆ ಅರಳುವುದೇ ರಂಗಭೂಮಿಯಿಂದ. ಡಾ. ರಾಜಕುಮಾರ್ ಅಂತಹ ಮಹಾನ್ ನಟನನ್ನು ಚಲನಚಿತ್ರ ಜಗತ್ತಿಗೆ ನೀಡಿದ್ದೇ  ರಂಗಭೂಮಿ ಎಂದು ಡಿವೈಎಸ್ಪಿ ಗಿರೀಶ್‌ ಭೋಜಣ್ಣನವರ ಹೇಳಿದರು. 

ಶ್ರೀ ಸಿದ್ದಾರೂಢ ಸ್ವಾಮೀಜಿ ಮಹಾ ರಥೋತ್ಸವ : ಮಹಾದ್ವಾರ ಉದ್ಘಾಟನೆ

ರಾಣೇಬೆನ್ನೂರು : ಇಲ್ಲಿಯ ಸಿದ್ದಾರೂಢ ಮಠದಲ್ಲಿ 24ನೇ ವರ್ಷದ ವೇದಾಂತ ಪರಿಷತ್ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಮಹಾಸಭೆ ಹಾಗೂ ನೂತನವಾಗಿ ನಿರ್ಮಿಸಿದ ಶ್ರೀ ಸಿದ್ದಾರೂಢ ಸ್ವಾಮೀಜಿಯ 10ನೇ ಮಹಾರಥೋತ್ಸವದ ಕಾರ್ಯಕ್ರಮದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 

error: Content is protected !!