Category: ರಾಣೇಬೆನ್ನೂರು

Home ರಾಣೇಬೆನ್ನೂರು

ಗೋಲ್ಡನ್‌ ಹ್ಯಾಚರೀಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಣೇಬೆನ್ನೂರು : ನೂತನವಾಗಿ ನಿರ್ಮಿಸಲಾಗುತ್ತಿರುವ ತಾಲ್ಲೂಕಿನ ಹನುಮನಹಳ್ಳಿ ಬಳಿಯ ಶ್ರೀ ಗೋಲ್ಡನ್ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್ ನವರು ಸರ್ಕಾರದ ಯಾವುದೇ ರೀತಿಯ ಪರವಾನಿಗೆ ಪಡೆಯದೇ ಕಾನೂನು ಬಾಹಿರವಾಗಿ ಕಾರ್ಯಾರಂಭ ಮಾಡಿದ್ದು ಈಗ ಕೆಲಸ ನಿಲ್ಲಿಸಿ ಒಂದು ವಾರದೊಳಗೆ  ಅನುಮತಿ ಪಡೆಯಬೇಕು

ಸಹಕಾರ ಬ್ಯಾಂಕುಗಳು ಬಡ ಮಕ್ಕಳ ಶಿಕ್ಷಣಕ್ಕೆ ಸಾಲ ಕೊಡಲಿ

ರಾಣೇಬೆನ್ನೂರು : ಇವ ನಮ್ಮವ ಎನ್ನುವ ಬಸವತತ್ವದಂತೆ ಎಲ್ಲ ಸಮಾಜದವರಿಗೂ ಸಹಾಯ, ಸಹಕಾರ ನೀಡುತ್ತಿರುವ ಈ ಬ್ಯಾಂಕ್‌ನವರು ಬಡ ಮಕ್ಕಳ ಶಿಕ್ಷಣಕ್ಕೂ ಸಾಲ ನೀಡಿ ಬಡ ಮಕ್ಕಳ ಬದುಕಿಗೆ ನೆರವಾಗು ವಂತೆ  ಆಡಳಿತ ಮಂಡಳಿಗೆ ಮನವಿ ಮಾಡಿದ ಶಾಸಕ ಪ್ರಕಾಶ್ ಕೋಳಿವಾಡ ಅವರು ಫೈಲಟ್ ಆಗುವ ಉತ್ಸಾಹಿ ಯುವಕರಿದ್ದರೆ ಅವರಿಗೆ ನೌಕರಿ ಕೊಡುವುದಾಗಿ  ಹೇಳಿದರು.

ಶತಮಾನದ ಸಂಭ್ರಮದಲ್ಲಿ ರಾಣೇಬೆನ್ನೂರು ಬಸವೇಶ್ವರ ಬ್ಯಾಂಕ್

ಅಂದಿನ ಜಿಲ್ಲಾ ಸಹಕಾರಿ ಸಂಘಟಕ ಪುಟ್ಟರಾಜ ಒಡೆಯರ ಆಣತಿಯಂತೆ ನಗರದ ಕೊಟ್ರಬಸಪ್ಪ ಬಣಗಾರ ಹಾಗೂ ಹನ್ನೆರಡು  ಸಮಾನ ಮನಸ್ಕ ಪ್ರಮುಖರು  ಜೊತೆಗೂಡಿ ಐದು ಸಾವಿರ ರೂ.ಗಳ ಬಂಡವಾಳದೊಂದಿಗೆ 1924 ರಲ್ಲಿ ಪ್ರಾರಂಭಿಸಲಾದ  ರಾಣೇಬೆನ್ನೂರಿನ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಇದೀಗ ಶತಮಾನದ ಅಂಚಿನಲ್ಲಿದ್ದು ಇಂದು (24ರಂದು) ಸಂಭ್ರಮಾಚರಣೆಗೆ ಸಜ್ಜಾಗಿದೆ.

ರಾಣೇಬೆನ್ನೂರಿನ ಐದು ಬೃಹತ್‌ ಕೈಗಾರಿಕೆಗಳು : ಶಾಸಕ ಕೋಳಿವಾಡ

 ರಾಣೇಬೆನ್ನೂರು : ಸರ್ಕಾರದ ಚಿಂತನೆಯಂತೆ ಬೃಹತ್ ಪ್ರಮಾಣದ 5 ಕೈಗಾರಿಕೆಗಳು  ರಾಣೇಬೆನ್ನೂರಿಗೆ ಬರಲಿವೆ. ಈ ಕುರಿತು ಮುಖ್ಯಮಂತ್ರಿ  ಹಾಗೂ ಕೈಗಾರಿಕಾ ಮಂತ್ರಿಗಳ ಜೊತೆ ಚರ್ಚಿಸಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ಸಾಲ ಬಾಧೆಗೆ ಮತ್ತೊಬ್ಬ ರೈತನ ಬಲಿ

ರಾಣೇಬೆನ್ನೂರು : ಸಾಲ ಬಾಧೆಗೆ ಮುಷ್ಠೂರು ಗ್ರಾಮದ ರೈತ ಜಗದೀಶ ಶಿದ್ದಪ್ಪ ಜಾನಪ್ಪನವರ (36)  ಇಂದು ಬಲಿಯಾಗಿದ್ದು, ವಾರದಲ್ಲಿ ಇಂತಹ 4-5 ಪ್ರಕರಣಗಳು ಜಿಲ್ಲೆಯಲ್ಲಿ ಜರುಗುತ್ತಿದ್ದರೂ ನಮಗೂ-ರೈತರಿಗೂ ಸಂಬಂಧವೇ ಇಲ್ಲ

ಸಾಲಬಾಧೆ: ಇಬ್ಬರು ಆತ್ಮಹತ್ಯೆಗೆ ಯತ್ನ, ಓರ್ವನ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ರಾಣೇಬೆನ್ನೂರು : ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಷ್ಟೂರು ಮತ್ತು ಹೊಸ ಹೂಲಿಹಳ್ಳಿಯಲ್ಲಿ ನಡೆದಿದೆ.

ಇಷ್ಟಲಿಂಗ ಪೂಜೆಯ ಮೂಲಕ ಧರ್ಮಾಚರಣೆ ಬೆಳೆಸಿಕೊಳ್ಳಬೇಕು

ರಾಣೇಬೆನ್ನೂರು : ಮನುಷ್ಯನ ದೇಹದಲ್ಲಿರುವ ನರಗಳನ್ನು ಜೋಡಿಸಿದರೆ ಈ ಭೂಮಂಡಲವನ್ನು ಸುತ್ತಿಬರುವಷ್ಟು ಉದ್ದವಾಗುತ್ತವೆ.  ಹಾಗಾಗಿ ಮನುಷ್ಯರನ್ನು `ನರರು’ ಎಂದು ಕರೆಯುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಮಂತ್ರೋ ಚ್ಛಾರಣೆ ಮೂಲಕ ರೋಗ ನಿವಾರಣೆ ಮಾಡಿಕೊಳ್ಳುತ್ತಿದ್ದರು.

ಸಂಗೊಳ್ಳಿ ರಾಯಣ್ಣನ ಶೌರ್ಯ, ದೇಶಭಕ್ತಿ ಇಂದಿಗೂ ಅಜರಾಮರ

ರಾಣೇಬೆನ್ನೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೋರಾಟ, ಶೌರ್ಯ, ದೇಶಭಕ್ತಿ ಇಂದಿಗೂ ಅಜರಾಮರ. ದೇಶ ಮತ್ತು ನಾಡಿಗಾಗಿ  ಹೋರಾಟ ಮಾಡಿ, ಪ್ರಾಣ ತ್ಯಾಗ ಮಾಡಿದ ಅಪ್ರತಿಮ ವೀರ ಯೋಧ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಸರ್ಕಾರದ ರೈತ ವಿರೋಧಿ ನೀತಿ ; ಬಿಜೆಪಿ ಪ್ರತಿಭಟನಾ ಮೆರವಣಿಗೆ

ರಾಣೇಬೆನ್ನೂರು : ಮಳೆಯ ಅಭಾವ ದಿಂದ ಉಂಟಾಗಿರುವ ಬರಗಾಲ, ಕರೆಂಟ್ ಲೋಡ್ ಶೆಡ್ಡಿಂಗ್, ಗ್ಯಾರಂಟಿಗಳಲ್ಲಿ ಅಸಮರ್ಪಕ ವಿತರಣೆ, ರೈತ ಪರ ಯೋಜನೆಗಳ ರದ್ದತಿ ಮುಂತಾದವುಗಳಿಂದ, ಕಾಂಗ್ರೆಸ್ ಸರ್ಕಾರ ನೂರೇ ದಿನಗಳಲ್ಲಿ ರೈತ ವಿರೋಧಿಯೆಂದು ಸಾಬೀತು ಪಡಿಸಿದೆ.

ನೆಲ, ಜಲ, ಭಾಷೆಯ ಸೌಲಭ್ಯ ವಂಚಿತ ಕನ್ನಡಿಗರ ಹೋರಾಟ ಅವಶ್ಯ

ರಾಣೇಬೆನ್ನೂರು : ನಾಡಿನ ನೆಲ, ಜಲ ಹಾಗೂ ಭಾಷೆಯ ರಕ್ಷಣೆ ಜೊತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾ ಗಿರುವ ಕನ್ನಡಿಗರ ಪರವಾಗಿ ಹೋರಾಟ ಮಾಡಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ  ಪಿ. ಕೃಷ್ಣೇಗೌಡ ಹೇಳಿದರು. 

ಇಂದಿನ ಬದುಕಿಗೆ ಅವಶ್ಯವಿರುವ ಶಿಕ್ಷಣ ಕೊಡಿ

ರಾಣೇಬೆನ್ನೂರು : ಡಾಕ್ಟರ್, ಇಂಜಿನಿಯರ್, ಮಂತ್ರಿ, ಮುಖ್ಯಮಂತ್ರಿ ಕೊನೆಗೆ ಮನುಷ್ಯ ಹೇಗಿರಬೇಕು ಎಂಬುದೆಲ್ಲವನ್ನೂ ಕಲಿಸಿಕೊಡುವವರು ಗುರುಗಳು. ಅವರಿಗೆ ಗೌರವ ಕೊಡದವ ಶಿಷ್ಯನೇ ಅಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ದೇಶಕ್ಕೆ ಅನ್ನ ನೀಡುವ ರೈತನಿಗೆ ಅರೆ ಹೊಟ್ಟೆ ಪರಿಸ್ಥಿತಿ

ರಾಣೇಬೆನ್ನೂರು : ಇಡೀ ದೇಶಕ್ಕೆ ಅನ್ನ ನೀಡುವ  ರೈತರು ಅರೆ ಹೊಟ್ಟೆಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಗಳ ಆಡಳಿತ ವೈಫಲ್ಯ, ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಲ್ಲಿ ತಾರತಮ್ಯ. ಹೀಗೆ ನಾನಾ ಕಾರಣಗಳಿಂದ ನಮ್ಮ ಮೇಲೆ ಕೊಡಲಿ ಏಟು ಬೀಳುತ್ತಲೇ ಇವೆ.

error: Content is protected !!