ಸಾಧನೆಗೆ ಮಣ್ಣಿನ ಗುಣವೇ ಸಾಕ್ಷಿ : ಇಸ್ರೋ ವಿಜ್ಞಾನಿ ದಾರುಕೇಶ್

ಸಾಧನೆಗೆ ಮಣ್ಣಿನ ಗುಣವೇ ಸಾಕ್ಷಿ : ಇಸ್ರೋ ವಿಜ್ಞಾನಿ ದಾರುಕೇಶ್

ಕೊಟ್ಟೂರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಚಂದ್ರಯಾನ – 3 ಸಂದೇಶ ವಾಹಕದ ರೂವಾರಿಯ ಸಂವಾದ ಕಾರ್ಯಕ್ರಮ 

ಕೊಟ್ಟೂರು, ಸೆ. 9 – ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನ ರಾಜ್ ಭವನದಲ್ಲಿ ಕಾಲೇಜು ವತಿಯಿಂದ ಯಶಸ್ವೀ ಚಂದ್ರಯಾನ 3 ಸಂದೇಶ ವಾಹಕದ ರೂವಾರಿ ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಇವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೊಟ್ಟೂರೇಶ್ವರ ಕಾಲೇಜಿನ ಅಧ್ಯಕ್ಷ ಸಿದ್ದರಾಮ ಕಲ್ಮಠ, ಡಿಗ್ರಿ, ಪ್ರಿನ್ಸಿಪಾಲ್ ಡಾ.ರವಿಕುಮಾರ್, ಗುಲಾಬಿ ಹೂವು ಕೊಡುವ ಮೂಲಕ ಇಸ್ರೋ ವಿಜ್ಞಾನಿಗಳಾದ ಬಿ.ಎಚ್.ಎಮ್ ದಾರುಕೇಶ್ ಅವರಿಗೆ ಸ್ವಾಗತಿಸಿದರು.

ನಂತರ ಕಾಲೇಜಿನ ಎನ್.ಸಿ.ಸಿ. ಸ್ಟೂಡೆಂಟ್ ಗಳಿಂದ ಮಾರ್ಚ್ ಫೋರ್ಸ್ ಗೌರವ ನೀಡಿ ಸ್ವಾಗತಿಸಿದರು. ಮತ್ತು ಕಾಲೇಜಿನ ಮಹಾದ್ವಾರಕ್ಕೆ ರಿಬ್ಬನ್ ಕತ್ತರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾರುಕೇಶ್, ಇಸ್ರೋದಲ್ಲಿ ಉತ್ತರ ಕರ್ನಾಟಕ ಭಾಗದ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದು ಸಾಧನೆಗೆ ಇಲ್ಲಿನ ಮಣ್ಣಿನ ಗುಣವೇ ಸಾಕ್ಷಿಯಾಗಿದೆ ಎಂದು ಭಾವಿಸಿದ್ದೇನೆ ಎಂದು ಇಸ್ರೋ ವಿಜ್ಞಾನಿ ಬಿ.ಹೆಚ್.ಎಂ. ದಾರುಕೇಶ ಅಭಿವ್ಯಕ್ತಪಡಿಸಿದರು.

ಅರ್ಹತಾ ವಿದ್ಯಾರ್ಥಿಗಳು ಇಸ್ರೋಗೆ ಅರ್ಜಿಯನ್ನು ಸಲ್ಲಿಸಿ ನೀವು ಆಯ್ಕೆಯಾದರೆ ತಮಗೂ ಇಸ್ರೋದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಈ
ಇಸ್ರೋದಲ್ಲಿ ಮೂರು ರೀತಿಯಾಗಿ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ನುಡಿದಂತಹ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ಧರಾಮ ಕಲ್ಮಠ, ನಮ್ಮ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಚಂದ್ರಯಾನ 3 ಸಂದೇಶ ವಾಹಕದ ರೂವಾರಿಯಾಗಿ ದಾರುಕೇಶ್ ಕಾರ್ಯ ನಿರ್ವಹಿಸಿದ್ದು, ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು. ನಮ್ಮ ನಾಡು ನಮ್ಮ ದೇಶದ ಪ್ರತಿಭೆ ಬಿ.ಹೆಚ್.ಎಂ. ದಾರುಕೇಶ್‌ರವರ ಸಾಧನೆ  ಅತೀವ ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಇಸ್ರೋ ವಿಜ್ಞಾನಿ ಬಿ.ಎಚ್.ಎಂ ದಾರುಕೇಶ್ ಅವರಿಗೆ ಕಾಲೇಜು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಪದವಿ ಕಾಲೇಜ್ ಪ್ರಾಂಶುಪಾಲ  ಡಾ.ಎಮ್ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಶಾಂತ ಮೂರ್ತಿ ಕುಲಕರ್ಣಿ, ಸದಸ್ಯ ಶಿವಕುಮಾರ್, ಕೊಟ್ರೇಶ್, ಅಡಕಿ ಮಂಜುನಾಥ್, ಗುರುಪ್ರಸಾದ್ ಕೋರಿ ಬಸವರಾಜ್, ಮಂಜುನಾಥ್ ಮಠಪತಿ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ವಿದ್ಯಾರ್ಥಿನಿ ಶಾಂತ, ಸ್ವಾಗತವನ್ನು ಪ್ರೊ. ಕೃಷ್ಣಪ್ಪ, ನಿರೂಪಣೆಯನ್ನು ಉಪನ್ಯಾಸಕರಾದ ವಿಜಯಲಕ್ಷ್ಮಿ ನೆರವೇರಿಸಿದರು.

error: Content is protected !!