Category: ಹೊನ್ನಾಳಿ

Home ಸುದ್ದಿಗಳು ಹೊನ್ನಾಳಿ

ಸ್ಮಶಾನಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಶವ ಇಟ್ಟು ಪ್ರತಿಭಟನೆ

ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮಕ್ಕೆ ಸ್ಮಶಾನ ಜಾಗ ನೀಡುವಂತೆ ಆಗ್ರಹಿಸಿ, ಗ್ರಾಮ ಪಂಚಾಯಿತಿಯಲ್ಲಿ ದೊಡ್ಡಪ್ಪ (65) ಮೃತಪಟ್ಟ ವ್ಯಕ್ತಿಯ ಶವ ಇಟ್ಟು ಭಾನುವಾರ ಪ್ರತಿಭಟಿಸಿದರು.

ಹೊನ್ನಾಳಿ ಕಸಬಾ ಸೊಸೈಟಿ ಅಧ್ಯಕ್ಷರಾಗಿ ಬಿ.ಎಲ್.ಕುಮಾರಸ್ವಾಮಿ ಆಯ್ಕೆ

ಹೊನ್ನಾಳಿ : ಕಸಬಾ ಸೊಸೈಟಿ ಅಧ್ಯಕ್ಷರಾಗಿ ಚುನಾವಣೆ ಮೂಲಕ ಒಂದು ಮತದ ಅಂತರದಲ್ಲಿ ಬಿ.ಎಲ್. ಕುಮಾರ ಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನವೀನ್‍ಕುಮಾರ್ ತಿಳಿಸಿದರು.

ಸಹಕಾರಿ ಕ್ಷೇತ್ರದಿಂದ ರೈತರಿಗೆ ಅನುಕೂಲ: ಶಾಂತನಗೌಡ

ಹೊನ್ನಾಳಿ : ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಹಕಾರಿ ಕ್ಷೇತ್ರ ಎಲ್ಲಾ ರಂಗಗಳಲ್ಲಿ ತನ್ನದೇ ಆದ ಸಹಕಾರಿ ಸೇವೆ ನೀಡುತ್ತಾ ಬಂದಿದ್ದು, ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ವಿಶೇಷವಾಗಿ ಸಹಕಾರಿ ಕ್ಷೇತ್ರ ರೈತರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ

ಮರಳು ವಿತರಣೆ ಅವ್ಯವಸ್ಥೆಗೆ ಖಂಡನೆ

ಹೊನ್ನಾಳಿ : ನ್ಯಾಮತಿ-ಹೊನ್ನಾಳಿ ಅವಳಿ ತಾಲ್ಲೂಕಿನಲ್ಲಿ ಮರಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಬೆಂಬಲರಿಗೆ ಮಾತ್ರ ದೊರೆಯು ವಂತಾಗಿದ್ದು, ಇದು ಮುಂದುವರೆದರೆ ಸಾರ್ವ ಜನಿಕರ ಹಿತದೃಷ್ಟಿ ಯಿಂದ ಹೋರಾಟದ ಹಾದಿ ಹಿಡಿಯಬೇಕಾ ಗುತ್ತದೆ

ಕೊನಾಯಕನಹಳ್ಳಿ ದುರ್ಗಮ್ಮ ದೇವಿ ಕಳಸಾರೋಹಣ

ಹೊನ್ನಾಳಿ : ದೇವಸ್ಥಾನಗಳು, ದೇವಮಂದಿರದ ಕಟ್ಟೆಗಳಿಗೆ ಪ್ರತಿನಿತ್ಯ ಪೂಜೆ ಹಾಗೂ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರಿಗೆ ಶಾಸಕ ಡಿ.ಜಿ.ಶಾಂತನಗೌಡ ಕಿವಿಮಾತು ಹೇಳಿದರು.

ಆಡಳಿತದ ಕಾರ್ಯವೈಖರಿ ಗಮನಿಸಲು ವಿಶೇಷ ಅಧಿಕಾರಿಗಳ ನೇಮಕ

ಹೊನ್ನಾಳಿ : ಪ್ರಸ್ತುತ ಭೀಕರ ಬರಗಾಲದ ಪರಿಸ್ಥಿತಿಯಿಂದ ರೈತರು, ಜನಸಾಮಾನ್ಯರು ಹೈರಾಣಾಗಿದ್ದು, ಇದನ್ನು ಮನಗಂಡು ರೈತರು ಪದೇ ಪದೇ ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡಬಾರದು. ಅಧಿಕಾರಿಗಳು ಅವರ ಕೆಲಸಗಳನ್ನು ಕೂಡಲೇ ಮಾಡಿಕೊಡಬೇಕು

ಅಂಧಶ್ರದ್ಧೆಯೊಂದಿಗೆ ಗುಣಹೀನ : ರಾಜಋಷಿ ಖೇದ

ಹೊನ್ನಾಳಿ : ಪಾಶ್ಚಿಮಾತ್ಯ ಶಿಕ್ಷಣ, ಸಂಸ್ಕೃತಿ ಗಳಿಗೆ  ಭಾರತೀಯರು ಮಾರುಹೋಗಿ ಅಂಧಶ್ರದ್ಧೆ ಯೊಂದಿಗೆ ಗುಣಹೀನರಾಗುವುದಲ್ಲದೆ, ದೇಶಕ್ಕೆ  ಯುವ ಪೀಳಿಗೆಯು ಮಾರಕರಾಗುವುದನ್ನು ಕಾಣುವಂತಾಗಿದೆ.

ಪ್ರಶ್ನಿಸುವ ಮನೋಭಾವ ಇರಲಿ : ವಿಜ್ಞಾನಿ ದಾರುಕೇಶ್‌

ಹೊನ್ನಾಳಿ : ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಚಂದ್ರಯಾನ-3 ತಂಡದ ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಸಲಹೆ ನೀಡಿದರು.

ಮಹನೀಯರ ವಿಷಯಗಳನ್ನು ಪಠ್ಯದಿಂದ ಕೈಬಿಡಬಾರದು

ಹೊನ್ನಾಳಿ : ವೀರ ಮಹಿಳೆ ಎನ್ನಿಸಿಕೊಳ್ಳುವ ಜೊತೆಗೆ ಭೋಜನಕ್ಕೆ ಕುಳಿತಿದ್ದ ಪತಿಗೆ ತೊಂದರೆ ಕೊಡದೇ ಪತಿ ಧರ್ಮ ಪರಿಪಾಲಿಸಿ ವೀರ ಮತ್ತು ಸಾತ್ವಿಕ ಮಹಿಳೆಯಾಗಿ ವೀರ ವನಿತೆ ಒನಕೆ ಓಬವ್ವ ನಾಡಿನ ಜನತೆ ಸದಾ ಸ್ಮರಿಸುವಂತಾಗಿದ್ದಾಳೆ.

ಎದೆ ಬಗೆದು ತೋರಿಸಬೇಕಾ, ನಾನು ಬಿಜೆಪಿಯಲ್ಲೇ ಇದ್ದೇನೆ

ಹೊನ್ನಾಳಿ : ನಾನು ಬಿಜೆಪಿಯಲ್ಲಿದ್ದೇನೆ ಎಂಬುದನ್ನು ಹನುಮಂತನ ರೀತಿ ಎದೆ ಬಗೆದು ತೋರಿಸಬೇಕಾ ? ನಾನು ಬಿಜೆಪಿಯಲ್ಲೇ ಇದ್ದೇನೆ. ಕಾಂಗ್ರೆಸ್‍ಗೆ ಹೋಗೋದಿಲ್ಲಾ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಕಾಂಗ್ರೆಸ್ ಬರ ನಿರ್ವಹಣೆಯ ವೈಫಲ್ಯತೆಯಿಂದ ರೈತರು ಕಂಗಾಲು

ಹೊನ್ನಾಳಿ-ನ್ಯಾಮತಿ, ನ.6- ರಾಜ್ಯದ 220 ತಾಲ್ಲೂಕುಗಳಲ್ಲಿ ಭೀಕರ ಬರಗಾಲದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದು, ಕಾಂಗ್ರೆಸ್ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡದೇ ಅಧಿಕಾರದ ಹಗ್ಗಜಗ್ಗಾಟದಲ್ಲಿ ಮುಳುಗಿ ಹೋಗಿದೆ ಎಂದು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಸಿದ್ದೇಶ್ವರ ನೇತೃತ್ವದಲ್ಲಿ ಇಂದು ಬಿಜೆಪಿ ಬರ ಅಧ್ಯಯನ

ಹೊನ್ನಾಳಿ : ವಿಧಾನಸಭಾ ಮಾಜಿ ಸಭಾಪತಿ ಹಾಗೂ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬರ ಅಧ್ಯಯನ ತಂಡ ನಾಳೆ ದಿನಾಂಕ 6ರ ಸೋಮವಾರ ಹೊನ್ನಾಳಿ ತಾಲ್ಲೂಕಿಗೆ ಆಗಮಿಸಲಿದೆ

error: Content is protected !!