Category: ಹೊನ್ನಾಳಿ

Home ಸುದ್ದಿಗಳು ಹೊನ್ನಾಳಿ

ರೈತರು, ಸೈನಿಕರ ಹೆಸರಿನಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ ಕಾಶಿ ಜಗದ್ಗುರುಗಳು

ಹೊನ್ನಾಳಿ : ಹಿರೇಕಲ್ಮಠವು ಈ ಭಾಗದ ಭಕ್ತರ ಭಾಗ್ಯದ ಬಾಗಿಲು ತೆರೆಯುವ ಹೆಬ್ಬಾಗಿಲಿದ್ದಂತೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ದೇಶಕ್ಕೆ ಅನ್ನ ನೀಡುವ ರೈತರ ಸಾಲ ಮನ್ನಾಕ್ಕೆ ಕೇಂದ್ರಕ್ಕೆ ಆಗ್ರಹ

ಹೊನ್ನಾಳಿ : ಕೇಂದ್ರ ಸರ್ಕಾರ ದೇಶದ ಉದ್ಯಮಿಗಳ ರೂ. 11 ಲಕ್ಷ ಕೋಟಿ ಸಂಕಷ್ಟ ನೆರವು ಸಾಲ ಮನ್ನಾ ಮಾಡಿರುವ ರೀತಿಯಲ್ಲಿಯೇ ದೇಶದ 140 ಕೋಟಿ ಜನರಿಗೆ ಅನ್ನ ನೀಡುವ ರೈತ ಸಮುದಾಯದ ಸಾಲವನ್ನೂ ಕೂಡ ಮನ್ನಾ ಮಾಡಬೇಕು

ಹೊನ್ನಾಳಿಯಲ್ಲಿ ವಿದ್ಯುತ್ ಅವಘಡ ತಡೆಗಟ್ಟಲು ವಿವಿಧ ಸ್ಪರ್ಧೆಗಳು

ಹೊನ್ನಾಳಿ : ಬೆಸ್ಕಾಂ ವತಿಯಿಂದ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯುಚ್ಛಕ್ತಿ ಸುರಕ್ಷತೆಯ ಬಗ್ಗೆ ಸರ್ಕಾರಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿ ವಿದ್ಯುತ್ ಅವಘಡಗಳನ್ನು ತಡೆಗಟ್ಟಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಬೆಸ್ಕಾಂ ಎಇಇ ಜಯಪ್ಪ ತಿಳಿಸಿದರು.

ಹಿರೇಕಲ್ಮಠದಲ್ಲಿ ಇಂದು ಅಮಾವಾಸ್ಯೆ, ಲಕ್ಷ ದೀಪೋತ್ಸವ

ಹೊನ್ನಾಳಿ : ಹಿರೇಕಲ್ಮಠದಲ್ಲಿ ನಾಳೆ ದಿನಾಂಕ 12ರ ಮಂಗಳವಾರ ಕಾರ್ತಿಕ ಮಾಸದ ಚಟ್ಟಿ ಅಮಾವಾಸ್ಯೆ ದಿನದಂದು ಮಹಾಪೂಜೆ, ಕದಳಿ ಕಾರ್ತಿಕ ಲಕ್ಷ ದೀಪೋತ್ಸವ, ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ, ಧರ್ಮಸಭೆ ಹಾಗೂ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮಗಳು ಜರುಗುವವು

74ನೇ ವರ್ಷದ ಹುಟ್ಟುಹಬ್ಬವೂ ಕೂಡ ನನ್ನ ಗೆಲುವಿಗೆ ಕಾರಣ

ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಕ್ಷೇತ್ರದ ಅಭಿವೃದ್ಧಿ ಮಾಡುವುದರ ಮೂಲಕ ಮತದಾರರ, ಕಾರ್ಯಕರ್ತರ ಋಣವನ್ನು ಪ್ರಾಮಾಣಿಕವಾಗಿ ತೀರಿಸುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.

ಸಾಹು ಮನೆಯಲ್ಲಿ ದೊರೆತ ಕಪ್ಪು ಹಣದ ವಿರುದ್ಧ ಹೊನ್ನಾಳಿಯಲ್ಲಿ ಪ್ರತಿಭಟನೆ

ಹೊನ್ನಾಳಿ : ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್‍ಪ್ರಸಾದ್‍ ಸಾಹು ಅವರ ಮನೆ ಮತ್ತು ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ 600 ಕೋಟಿ ರೂ. ಕಪ್ಪು ಹಣ ಸಿಕ್ಕಿದ್ದು, ಇದರಿಂದ ಕಾಂಗ್ರೆಸ್ ಮುಖಂಡರ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿ ಕಾರಿದರು.

ಹೊನ್ನಾಳಿ : ಕ್ಯಾಂಡಲ್ ಹಚ್ಚಿ ಪರಿನಿರ್ವಾಣ ದಿನಾಚರಣೆ

ಹೊನ್ನಾಳಿ : ದೇಶದ ಪ್ರಥಮ ಕಾನೂನು ಸಚಿವರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್‌ ಅವರು ಸಮಾಜಕ್ಕೆ ನೀಡಿದ ಕೊಡುಗೆ ಸಾಧನೆಯನ್ನು ಅವರು ನಿಧನ ಹೊಂದಿದ ಈ ದಿನ ಸ್ಮರಿಸುವ ನಿಟ್ಟಿನಲ್ಲಿ ಮಹಾಪರಿ ನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ

ಹೊನ್ನಾಳಿ : ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತೆರವುಗೊಳಿಸಿದ ಕಂದಾಯ ಅಧಿಕಾರಿಗಳು

ಹೊನ್ನಾಳಿ : ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯತಿಗೆ ಒಳಪಡುವ ಸದಾಶಿವಪುರ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತಹಶೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ತೆರವುಗೊಳಿಸಿದೆ.

ಏತ ನೀರಾವರಿ ಯೋಜನೆಯಡಿ ಶ್ರೀರಾಮನ ಕೆರೆಗೆ ನೀರು

ಹೊನ್ನಾಳಿ : ಎಂ.ಹನುಮನಹಳ್ಳಿ, ಸಿಂಗಟಗೆರೆ ಸಮೀಪದ ಕೆರೆಗೆ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸಿದೆ. ಈ ಕೆರೆಗೆ ಶಾಸಕ ಡಿ.ಜಿ.ಶಾಂತನಗೌಡ ಗಂಗಾ ಪೂಜೆ ಸಲ್ಲಿಸಿ, ಹಲವಾರು ಮುಖಂಡರೊಂದಿಗೆ ಬಾಗಿನ ಅರ್ಪಿಸಿದರು. 

ತಾಯಿಗೆ ಕೊಡುವ ಗೌರವ ಭಾಷೆಗೂ ಕೊಡಬೇಕು

ಹೊನ್ನಾಳಿ : ಮರಗಳು ಎಷ್ಟೇ ದೊಡ್ಡದಾಗಿ ಹರಡಿದ್ದರೂ, ಅದರ ಬೇರುಗಳು ತನ್ನ ಮೂಲವನ್ನು ಗಟ್ಟಿಯಾಗಿ ಹಿಡಿದಿರುತ್ತವೆ. ಅದರಂತೆ ನಾವು  ನಮ್ಮ ಮಾತೃ ಭಾಷೆಯನ್ನು ಮರೆಯಬಾರದು ಎಂದು ಹಿರಿಯ ಸಾಹಿತಿ ಯು. ಎನ್. ಸಂಗನಾಳ ಮಠ  ಅವರು ಹೇಳಿದರು 

ಹೆಚ್. ಕಡಕಟ್ಟೆ ಗ್ರಾ.ಪಂ. ಉಪಾಧ್ಯಕ್ಷರಾಗಿ ಶಶಿಕಲಾ ಮಾಲತೇಶ್

ಹೊನ್ನಾಳಿ : ತಾಲ್ಲೂಕಿನ ಹೆಚ್. ಕಡದಕಟ್ಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಹೊಳೆ ಮಾದಾಪುರ ಗ್ರಾಮದ ಡಿ.ಶಶಿಕಲಾ ಮಾಲತೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಹುಧರ್ಮೀಯ ದೇಶಕ್ಕೆ ಆದರ್ಶ ಸಂವಿಧಾನ

ಹೊನ್ನಾಳಿ : ಭಾರತೀಯ ಸಂವಿಧಾನ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಇದನ್ನು ರಚಿಸಿದ ಕೀರ್ತಿ `ಭಾರತ ರತ್ನ’ ಡಾ. ಬಿ.ಆರ್  ಅಂಬೇಡ್ಕರ್ ಅವರಿಗೆ ಸಲ್ಲಬೇಕು.

error: Content is protected !!