Category: ಚನ್ನಗಿರಿ

Home ಸುದ್ದಿಗಳು ಚನ್ನಗಿರಿ

ಚನ್ನಗಿರಿ : ವಾಲ್ಮೀಕಿ ಪುತ್ಥಳಿ ಪುನರ್ ಸ್ಥಾಪನೆಗೆ ಆಗ್ರಹ

ಚನ್ನಗಿರಿ : ಚನ್ನಗಿರಿ ತಾಲ್ಲೂಕು ನಾಯಕ ಸಮಾಜ ಹಾಗೂ ಸ್ವಾಭಿಮಾನಿ ನಾಯಕರ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ಮಠಾಧೀಶರು ಸೇರಿದಂತೆ ವಿವಿಧ ಸಮಾಜದವರು ಬೆಂಬಲ ವ್ಯಕ್ತಪಡಿಸಿದರು.

ತಣಿಗೆರೆ ಸಹಕಾರಿ ಸಂಘಕ್ಕೆ ಪೊಲೀಸ್ ರಾಮಚಂದ್ರಪ್ಪ ಅಧ್ಯಕ್ಷರಾಗಿ ಆಯ್ಕೆ

ಚನ್ನಗಿರಿ : ತಣಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮಚಂದ್ರಪ್ಪ, ಉಪಾಧ್ಯಕ್ಷರಾಗಿ ಪ್ರಕಾಶ್ ಮಂಟ್ರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 

ಚನ್ನಗಿರಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಬೆಳಲಗೆರೆಯ ದೇವೀರಿ ಶಿವಣ್ಣ

ಚನ್ನಗಿರಿ : ಚನ್ನಗಿರಿ ತಾಲ್ಲೂಕು ಕುರುಬ ಸಮಾಜದ ನೂತನ ಅಧ್ಯಕ್ಷರಾಗಿ ಬೆಳಲಗೆರೆಯ ದೇವೀರಿ ಶಿವಣ್ಣ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಚನ್ನಗಿರಿ : ಪ್ರತಿಭಾ ಕಾರಂಜಿ ವಿವಿಧ ಸ್ಪರ್ಧೆಗಳಲ್ಲಿ ಐಐಟಿಸಿ ಶಾಲೆ ವಿಜಯ

ಚನ್ನಗಿರಿ : ಇಂದಿರಾ ಗಾಂಧಿ ವಸತಿ ಶಾಲೆ, ಮಾವಿನಹೊಳೆ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದ 2023-24 ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ  ಐಡಿಯಲ್ ಇಂಟರ್ ನ್ಯಾಷನಲ್ ಟೆಕ್ನೋ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳು ಭಾ ಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿರುತ್ತಾರೆ. 

ಚನ್ನಗಿರಿ ತಾಲ್ಲೂಕು ಕಸಾಪ ಕಾರ್ಯ ಶ್ಲಾಘನೀಯ

ಚನ್ನಗಿರಿ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರಾವಣ ಮಾಸದ ಅಂಗವಾಗಿ ಕವಿ ಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲ್ಯಾಘನೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಸಿ.ವಿ.ತಿರುಮಲರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸೂಳೆಕೆರೆ ವೀಕ್ಷಣೆ ನಡೆಸಿದ ಶಾಸಕ ಬಸವಂತಪ್ಪ

ಚನ್ನಗಿರಿ‌ : ತಾಲೂಕಿನ ಐತಿಹಾಸಿಕ ಸ್ಥಳವಾಗಿರುವ ಸೂಳೆ ಕೆರೆಯ ಸುತ್ತಮುತ್ತಲಿನ‌ ಪ್ರದೇಶ ಗಳಲ್ಲಿ‌ ಎಲ್ಲೆಂದರಲ್ಲಿ ಬ್ರಾಂದಿ, ಬೀರು  ಬಾಟಲಿ ಹಾಗೂ ಇಸ್ಪೀಟ್ ಎಲೆಗಳ ತಾಣವಾಗಿ ಮಾರ್ಪ ಟ್ಟಿದ್ದು, ಸೂಳೆಕೆರೆ ಸೌಂದರ್ಯಕ್ಕೆ‌ ಧಕ್ಕೆಯಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.

ಹಿರೇಕೋಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುಮ ಶಿವಕುಮಾರ್ ಆಯ್ಕೆ

ಚನ್ನಗಿರಿ : ತಾಲ್ಲೂಕಿನ ಹಿರೇಕೋಗಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಆರ್. ಸುಮ ಶಿವಕುಮಾರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಎ.ಡಿ. ರಮೇಶ್  ಆಯ್ಕೆಯಾಗಿದ್ದಾರೆ.

ನಲ್ಕುದುರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪದ್ಮಮ್ಮ

ಚನ್ನಗಿರಿ ತಾಲ್ಲೂಕು ನಲ್ಕುದುರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಪದ್ಮಮ್ಮ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಆಶಾ ಅವರುಗಳು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ

ಚನ್ನಗಿರಿ : ವಿದ್ಯಾರ್ಥಿಗಳು ಆತ್ಮವಿಶ್ವಾಸ, ಮಾನಸಿಕ ಜಾಗರೂಕತೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಶಾಲಾ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಶಾಲೆಗಳಲ್ಲಿ ಕ್ರೀಡೆಯು ಮುಖ್ಯವಾಗಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜನರ ಸಮಸ್ಯೆಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ

ಚನ್ನಗಿರಿ : ಪಟ್ಟಣದ ತಾ.ಪಂ. ಕಚೇರಿಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶಾಸಕರಾದ ಬಸವರಾಜು ವಿ. ಶಿವಗಂಗಾ ಹಾಗೂ ಕೆ.ಎಸ್ ಬಸವಂತಪ್ಪ ನೇತೃತ್ವದಲ್ಲಿ ಮೊದಲನೇ ತಾಲ್ಲೂಕ್ ಪಂಚಾಯಿತಿ ಅಭಿವೃದ್ಧಿ ಸಭೆ ನಡೆಸಲಾಯಿತು. 

ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ನಮ್ಮ ಗುರಿ

ಚನ್ನಗಿರಿ : ಬಹುತೇಕ  ನಾವೆಲ್ಲಾ ಸರ್ಕಾರಿ ಶಾಲೆಗಳಲ್ಲಿಯೇ ಓದಿರುವುದು. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸಂಸ್ಕಾರ, ಆಚಾರ – ವಿಚಾರ ಇಂದು ನಮ್ಮನ್ನು ದೊಡ್ಡವರನ್ನಾಗಿ ಮಾಡಿದೆ ಎಂದು ಶಾಸಕ ಬಸವರಾಜು ವಿ ಶಿವಗಂಗಾ ಅಭಿಮಾನದಿಂದ ನುಡಿದರು.

error: Content is protected !!