ಗ್ಲಾಸ್ಹೌಸ್ನಲ್ಲಿ ಇಂದು ಸಾಂಸ್ಕೃತಿಕ ಕಾರ್ಯಕ್ರಮ
ದಾವಣಗೆರೆ ಜಿಲ್ಲಾಡಳಿತ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಂದು ಸಂಜೆ 5.30ಕ್ಕೆ ಗಾಜಿನ ಮನೆಯಲ್ಲಿ ಸುವರ್ಣ ಸಂಭ್ರಮ ನಡೆಯಲಿದೆ.
ದಾವಣಗೆರೆ ಜಿಲ್ಲಾಡಳಿತ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಂದು ಸಂಜೆ 5.30ಕ್ಕೆ ಗಾಜಿನ ಮನೆಯಲ್ಲಿ ಸುವರ್ಣ ಸಂಭ್ರಮ ನಡೆಯಲಿದೆ.
ಹರಪನಹಳ್ಳಿ ತಾಲ್ಲೂಕಿನ ಅಣಜಿಗೆರೆ ಗ್ರಾಮದ ಡಾ|| ಪಾನಾಬ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲಾ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು ಘಟಕ ಇವರುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸ್ವಾಭಿಮಾನಿ ಬಳಗದ ವತಿಯಿಂದ `ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮತ್ತು ಅಭಿವೃದ್ಧಿಗೆ ಮಾರಕ’ ಎಂಬ ವಿಷಯ ಕುರಿತು ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ
ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಳಿ ನಿರ್ಮಿಸಲಾಗಿರುವ ಥೀಮ್ ಪಾರ್ಕ್ ಬರುವ ಡಿಸೆಂಬರ್ 1 ರಿಂದ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
ದಿ. ಜಿ. ಮಲ್ಲಿಕಾರ್ಜುನಪ್ಪ ಸ್ಮರಣಾರ್ಥವಾಗಿ ಜಿ. ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್ ಶೀರ್ಷಿಕೆಯಡಿಯಲ್ಲಿ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಜಿ.ಎಂ. ವಿವಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ
ಹೊನ್ನಾಳಿ ತಾಲ್ಲೂಕಿನ ಕೋಣನತಲೆ ಗ್ರಾಮದ ಶ್ರೀ ಗುರುದೇವ ಮುಪ್ಪಿನಾರ್ಯ ಆಶ್ರಮದಲ್ಲಿ ಅಖಂಡ ಶಿವಭಜನಾ ಮಹೋತ್ಸವ ನಿನ್ನೆಯಿಂದ ಆರಂಭಗೊಂಡಿದ್ದು, ನಾಳೆ ಶನಿವಾರದವರೆಗೆ ನಡೆಯಲಿದೆ.
ಮಲೇಬೆನ್ನೂರು : ಇಲ್ಲಿನ ಪುರಸಭೆಯ ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದೆ ಎಂದು ಬಲ್ಲ ಮೂಲಗಳ ತಿಳಿದು ಬಂದಿದೆ. ಆದರೆ, ಇದುವರೆಗೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.
2024ನೇ ಸಾಲಿನ `ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ’, `ಗ್ರಾಮೀಣ ಸಿರಿ’ ಮತ್ತು `ನಗರ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನವೀಕೃತ ಸ್ಮರಣ ಸಂಚಿಕೆ `ಸಂಗಮ ಸಿರಿ’ ಲೋಕಾರ್ಪಣೆ ಸಮಾರಂಭವು ಕುವೆಂಪು ಕನ್ನಡ ಭವನದಲ್ಲಿ ಇಂದು ಬೆಳಿಗ್ಗೆ 11 ಘಂಟೆಗೆ ನಡೆಯಲಿದೆ
ಜಿಲ್ಲಾ ಮಾದಿಗರ ಸಮಾವೇಶ ಮತ್ತು ಸಾಮೂಹಿಕ ಕಲ್ಯಾಣ ಮಹೋತ್ಸವದ ಯಶಸ್ವಿಯಾಗಿ ನಡೆಸುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಪ್ರವಾಸವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಮಹಾರಾಜ ಪೇಟೆ ವಿಠ್ಠಲ ಮಂದಿರದಲ್ಲಿ ಇಂದು ಶ್ರೀ ಜ್ಞಾನೇಶ್ವರಿ ಮಹಾರಾಜ ಸಮಾಧಿ ಸೋಹಳ ಕಾರ್ಯಕ್ರಮ, ಬೆಳಗ್ಗೆ 10 ಕ್ಕೆ ಶ್ರೀ ಪ್ರಭಾಕರ್ ಬುವಾ ಬೋಧಲೆ ಮಹಾರಾಜ್ ಇವರಿಂದ ಗುಲಾಲ್ ಕೀರ್ತನೆ, ಮಧ್ಯಾಹ್ನ 12:30 ಕ್ಕೆ ಗುಲಾಲ್ ಪುಷ್ಪವೃಷ್ಟಿ ಶ್ರೀ ಸಂತ ಸಮಾರಾಧನೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 3-30 ಕ್ಕೆ `ಪ್ಯಾಲಿಯೇಟಿವ್ ಕೇರ್- ಉಪಶಮನಕಾರಿ ಆರೈಕೆ’ ಕುರಿತು ಜಜಮು ವೈದ್ಯಕೀಯ ಕಾಲೇಜಿನ ಅನಸ್ತೆಷಿಯಾ ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ಎಂ ಶಿಲ್ಪಶ್ರೀ ಉಪನ್ಯಾಸ ನೀಡಲಿದ್ದಾರೆ.
ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ನಾಡಿದ್ದು ದಿನಾಂಕ 29 ರ ಗುರುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಗಾಂಧಿಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ