ಹೊನ್ನಾಳಿ ತಾಲ್ಲೂಕಿನ ಕೋಣನತಲೆ ಗ್ರಾಮದ ಶ್ರೀ ಗುರುದೇವ ಮುಪ್ಪಿನಾರ್ಯ ಆಶ್ರಮದಲ್ಲಿ ಅಖಂಡ ಶಿವಭಜನಾ ಮಹೋತ್ಸವ ನಿನ್ನೆಯಿಂದ ಆರಂಭಗೊಂಡಿದ್ದು, ನಾಳೆ ಶನಿವಾರದವರೆಗೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಮಹಾತ್ಮಾಜಿಯವರ ಪಟ್ಟಾಭಿಷೇಕದ 47ನೇ ವರ್ಷದ ವಾರ್ಷಿಕೋತ್ಸವ ಮತ್ತು ಕಾರ್ತಿಕ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಮತ್ತು ನಾಳೆ ಮುಂಜಾನೆ ಪಾದಪೂಜೆ, ಬೆಳಿಗ್ಗೆ 8 ರಿಂದ ಉಪನ್ಯಾಸ, ಬೆಳಿಗ್ಗೆ 11 ರಿಂದ ಅನ್ನ ಸಂತರ್ಪಣೆ ಮಧ್ಯಾಹ್ನ 3 ರಿಂದ ಉಪನ್ಯಾಸ, ಸಂಜೆ 5 ರಿಂದ ಗಾಯನ, ದೀಪೋತ್ಸವ ಕಾರ್ಯಕ್ರಮಗಳು ಜರುಗಲಿವೆ.
ನಾಳೆ ಶನಿವಾರ ಬೆಳಿಗ್ಗೆ 9 ರಿಂದ 11 ರವರೆಗೆ ಶ್ರೀ ಗುರೂಜಿಯವರ ಅಡ್ಡಪಲ್ಲಕ್ಕಿ ಉತ್ಸವ ಏರ್ಪಾಡಾಗಿದೆ.