Category: ಆಯ್ಕೆ-ನೇಮಕ

Home ಆಯ್ಕೆ-ನೇಮಕ

ಜಿಗಳಿ ಗ್ರಾ.ಪಂ.ಅಧ್ಯಕ್ಷರಾಗಿ ರೇಣುಕಾ ನಾಗರಾಜ್ ಉಪಾಧ್ಯಕ್ಷರಾಗಿ ಜಿ.ಬೇವಿನಹಳ್ಳಿಯ ದೇವರಾಜ್

ಮಲೇಬೆನ್ನೂರು : ಜಿಗಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್ ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಜಿ.ಬೇವಿನಹಳ್ಳಿಯ ಪಿ.ಹೆಚ್.ದೇವರಾಜ್ ಅವರು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 

ಹೊನ್ನಾಳಿ ಎಪಿಎಂಸಿ ಅಧ್ಯಕ್ಷರಾಗಿ ಭೈರನಹಳ್ಳಿ ರಾಜು

ಹೊನ್ನಾಳಿ : ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ  ಸಮಿತಿಯ  ಅಧ್ಯಕ್ಷರಾಗಿ ಸಾಸ್ವೆಹಳ್ಳಿಯ ಬೈರನಹಳ್ಳಿ ಜಿವಿಎಂ ರಾಜು ಅವಿರೋಧವಾಗಿ  ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಯಾಗಿದ್ದ ತಹಶೀಲ್ದಾರ್ ಬಸನಗೌಡ ಕೋಟೂರ ತಿಳಿಸಿದ್ದಾರೆ. 

ಹರಪನಹಳ್ಳಿ ವಕೀಲರ ಸಂಘಕ್ಕೆ ಜಗದಪ್ಪ ಅಧ್ಯಕ್ಷ

ಹರಪನಹಳ್ಳಿ : ಸ್ಥಳೀಯ ನ್ಯಾಯವಾದಿಗಳ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಜಗದಪ್ಪ, ಉಪಾಧ್ಯಕ್ಷ ರಾಗಿ ಡಿ.ಬಿ. ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿಯಾಗಿ ನಾಗೇಂದ್ರಪ್ಪ ಎಂ., ಖಜಾಂಚಿಯಾಗಿ ವಿ.ಹೂಲೆಪ್ಪ ಆಯ್ಕೆಯಾಗಿದ್ದಾರೆ.

ಹೂವಿನಹಡಗಲಿ ತಾ. ಪಂಚಮಸಾಲಿ ಸಂಘದ ಅಧ್ಯಕ್ಷರಾಗಿ ಗಡ್ಡಿ ಪತ್ರೆಪ್ಪ

ಹೂವಿನಹಡಗಲಿ : ತಾಲ್ಲೂಕು ಪಂಚಮಸಾಲಿ ಸಂಘದ ಅಧ್ಯಕ್ಷರಾಗಿ ಗಡ್ಡಿ ಪತ್ರೆಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಗಡ್ಡಿ ಪತ್ರೆಪ್ಪ ಸ್ಥಳೀಯ ಕಿತ್ತೂರು ರಾಣಿ ಚನ್ನಮ್ಮ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದಾರೆ.

ಹಾವೇರಿ ಕಸಾಪ ಅಧ್ಯಕ್ಷರಾಗಿ ಲಿಂಗಯ್ಯ

ರಾಣೇಬೆನ್ನೂರು : ಇಂದು ನಡೆದ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಹಾವೇರಿ ಜಿಲ್ಲಾಧ್ಯಕ್ಷರಾಗಿ ತಮ್ಮ ಸಮೀಪ ಸ್ಪರ್ಧಿ ಮಾರುತಿ ಶಿಡ್ಲಾಪುರ ಇವರಿಗಿಂತ 1,452 ಹೆಚ್ಚು ಮತಗಳನ್ನು ಪಡೆದು ನಿಕಟಪೂರ್ವ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಅವರು ಜಯ ಗಳಿಸಿದ್ದಾರೆ.

ಬಳ್ಳಾರಿ ಕಸಾಪಗೆ ಡಾ. ನಿಷ್ಠಿ ಅಧ್ಯಕ್ಷ

ಹರಪನಹಳ್ಳಿ : ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗೆ  ಡಾ.ನಿಷ್ಟಿ ರುದ್ರಪ್ಪ 3,978 ಮತ ಪಡೆದು 2,425  ಅತ್ಯಧಿಕ ಮತಗಳಿಂದ ಜಯಶಾಲಿಯಾಗಿದ್ದಾರೆ.

ರಾಜ್ಯ ವಾಣಿಜ್ಯ – ಕೈಗಾರಿಕಾ ಸಂಸ್ಥೆ ನಿರ್ದೇಶಕರಾಗಿ ಜಂಬಗಿ ರಾಧೇಶ್

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಬೆಂಗಳೂರು) ಯ ನಾಮ ನಿರ್ದೇಶಿತ ನಿರ್ದೇಶಕರಾಗಿ ನಗರದ ಹಿರಿಯ ತೆರಿಗೆ ಸಲಹೆಗಾರರಾದ ಜಂಬಗಿ ರಾಧೇಶ್ ನೇಮಕಗೊಂಡಿ ದ್ದಾರೆ.

ಹೊನ್ನಾಳಿ : ತುಂಗಾ ಪತ್ತಿನ ಅಧ್ಯಕ್ಷರಾಗಿ ಜಯಮ್ಮ ಬಸವರಾಜ್ ಆಯ್ಕೆ

ಹೊನ್ನಾಳಿ : ಪಟ್ಟಣದ ತುಂಗಾ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯಮ್ಮ ಬಸವರಾಜ್, ಉಪಾಧ್ಯಕ್ಷರಾಗಿ ಅರಬ ಗಟ್ಟೆ ನಾಗರಾಜ್‌ ಇವರು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತುಂಗಾ ಪತ್ತಿನ ಮಾಜಿ ಅಧ್ಯಕ್ಷರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!