ವಾರ ಭವಿಷ್ಯ – 19.05.2024 ರಿಂದ 25.05.2024

ವಾರ ಭವಿಷ್ಯ – 19.05.2024 ರಿಂದ 25.05.2024

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಆದಾಯವು ಹೆಚ್ಚಿನ ಮಟ್ಟದಲ್ಲಿರದಿದ್ದರೂ  ನಿಮ್ಮ ನಿರೀಕ್ಷೆಯ ಸಮೀಪ ದಲ್ಲಿರು ವುದು ಎಂಬುದೇ ಸಮಾಧಾನಕರ ವಿಷಯ ಬಂಧು-ಮಿತ್ರರೊಂದಿಗೆ ಸಂತೋಷ ದಿಂದ ಕಾಲ ಕಳೆಯುವಿರಿ, ಬದಲಾದ ನಿಮ್ಮ ನಡಾವಳಿಯಿಂದಾಗಿ ಎಲ್ಲರೂ ಸಂತೊಷ ಪಡುವರು, ಅತಿಯಾದ ಮೋಜು-ಮಸ್ತಿ ಮಾಡಲು ಹೋಗಬೇಡಿ,  ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು, ಹೊಸದಾಗಿ ಆರಂಭಿಸಿರುವ ಕೆಲಸ ಕಾರ್ಯಗಳು ಲಾಭದತ್ತ ಹೆಜ್ಜೆ ಹಾಕಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು ಕುಲದೇವತಾರಾಧನೆ ಮಾಡಿ. ಗೋಗ್ರಾಸ ಕೊಡಿ. ಭಾನು-ಮಂಗಳ-ಗುರು-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಅಪರಿಹಾರ್ಯವಾದ ಚಿಂತೆಯೊಂದು ನಿಮ್ಮನ್ನು ಸತತವಾಗಿ ಕಾಡಲಿದೆ. ಸ್ನೇಹಿತರು ಕೊಡುವ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಮೊದಲು ಮತ್ತೊಮ್ಮೆ ಪರಾಮರ್ಶಿಸುವುದು ಮೇಲು. ಸಂಪಾದನೆ ಸಾಧಾರಣವಾಗಿದ್ದು, ಉಳಿತಾಯ ಶೂನ್ಯವಾಗಲಿದೆ. ಬರಬೇಕಾಗಿರುವ, ಬಾಕಿ ಹಣಕ್ಕಾಗಿ, ಹೆಚ್ಚು ಅಲೆದಾಡಬೇಕಾಗ ಬಹುದು. ಆಸ್ತಿಕೊಳ್ಳುವ ವಿಚಾರದಲ್ಲಿ ತಕ್ಕಮಟ್ಟಿನ ಪ್ರಗತಿಯಾಗಲಿದೆ. ಆಹಾರ ದೋಷದಿಂದಾಗಿ ಮೂತ್ರ ಸಂಬಂಧಿ ಸಮಸ್ಯೆಗಳು ತಲೆದೋರಬಹುದು, ನಿಮ್ಮ ಶ್ರಮ ಬೇರೆಯವರಿಗೆ ವಿಚಿತ್ರವಾಗಿ ಕಾಣಲಿದೆ. ಹಿರಿಯರನ್ನು ಗೌರವಿಸಿ. ಗುರು-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಸಂಸಾರದಲ್ಲಿ ಸಿಗಬಹುದಾದ ಅಲ್ಪ-ಸ್ವಲ್ಪ ಸುಖವನ್ನು ಹಾಳು ಮಾಡಿಕೊಳ್ಳಬೇಡಿ, ಮತ್ತೊಬ್ಬರೊಂದಿಗೆ ಮಾತನಾಡುವಾಗ ಅಲ್ಲಿ ಸೌಜನ್ಯವಿರಲಿ, ವಾರದ ಆರಂಭ ಆಹ್ಲಾದಕರವಾಗಲಿದೆ. ವೃತ್ತಿಯಲ್ಲಿ ಸಾಧಾರಣ ಮಟ್ಟದ ಏಳಿಗೆ ಕಂಡುಬರಲಿದೆ. ಯುವಜನರಿಗೆ ಯಶಸ್ಸಿನ ದಾರಿ ಅಷ್ಟು ಸುಗಮವಲ್ಲ, ಹೆಚ್ಚಿನ ಪರಿಶ್ರಮ ಅತ್ಯಾವಶ್ಯಕ, ವಿದ್ಯಾರ್ಥಿಗಳಲ್ಲಿ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಲಿದೆ. ಮತ್ತೊಬ್ಬರ ಸಂಸಾರದ ವಿಚಾರದಲ್ಲಿ ನೀವು ಪ್ರವೇಶಿಸಿದ್ದೇ ಆದರೆ ಅಪಮಾನ ಮತ್ತು ಧನಹಾನಿ ಕಟ್ಟಿಟ್ಟಬುತ್ತಿ ಎಂಬುದು ನೆನಪಿರಲಿ. ಗುರುಗಳನ್ನು ಅರಾಧಿಸಿ. ಸೋಮ-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಮನೆಯಲ್ಲಿರುವ ಹಿರಿಯರಿಗೆ ಅನಿರೀಕ್ಷಿತವಾಗಿ ವಿಪರೀತ ಧಾರ್ಮಿಕ ಶ್ರದ್ಧೆಯುಂಟಾಗಲಿದೆ. ಮಾನಸಿಕ ಗೊಂದಲ ಹಲವು ರೀತಿಯಲ್ಲಿ ಚಿಂತೆಗೀಡು ಮಾಡಲಿದೆ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ವಿಶೇಷಾಸಕ್ತಿ ಮೂಡಲಿದೆ. ಆತ್ಮಾಭಿ ಮಾನ ಒಳ್ಳೆಯದೇ ಆದರೂ ಅದು ದುರಭಿಮಾನಕ್ಕೆ ಕಾರಣವಾಗ ಬಾರದಷ್ಟೆ. ಆದಾಯದ ಮೂಲದಲ್ಲಿ ಅತೀ ಹೆಚ್ಚಿನ ನಿರೀಕ್ಷೆ ಬೇಡ. ವಾತ ಸಂಬಂಧಿ ಸಮಸ್ಯೆಯಿರುವವರು ತುಸು ಎಚ್ಚರದಿಂದಿರುವುದು ಮೇಲು, ಸ್ನೇಹಿತರ ಮನೆಯಲ್ಲಿ ನಡೆಯಲಿರುವ ಮಂಗಳ ಕಾರ್ಯದಲ್ಲಿ ಭಾಗವಹಿಸುವಿರಿ. ಭಾನು-ಸೋಮ-ಬುಧ-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಹೆಚ್ಚಿದ ಸ್ವಾಭಿಮಾನ ಅನೇಕ ರೀತಿಯ ಘಟನೆಗಳಿಗೆ ಕಾರಣವಾಗಲಿದೆ. ಕುಗ್ಗಿದ ಆದಾಯ ನಿಮ್ಮ ಹಲವು ನಿರೀಕ್ಷೆಗಳನ್ನು ಹುಸಿಗೊಳಿಸಲಿದೆ. ಕೆಲಸ ಕಾರ್ಯಗಳಿಗೆ ಹಿರಿಯರ ನೆರವು ಅತ್ಯಾವಶ್ಯಕವಾಗಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ತುಸು ಏರುಪೇರಾಗಲಿದೆ. ಸದ್ಯಕ್ಕೆ ಮುಂದು ಹಾಕುವುದು ಮೇಲು, ಅತಿಯಾದ ಭೋಜನ ಹಾಗೂ ಕರಿದ ಪದಾರ್ಥಗಳ ಸೇವನೆ ಅಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಲಿದೆ. ಪ್ರೇಮಿಗಳ ನಡುವೆ ಕಾವೇರಿದ ಮಾತು-ಕತೆಯಾಗಲಿದೆ. ಸಂಗೀತಗಾರರಿಗೆ ಉತ್ತಮ ವೇದಿಕೆ ಸಿಗಲಿದೆ. ಗೋ ಸೇವೆ ಮಾಡಿ ಭಾನು-ಮಂಗಳ-ಗುರು-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ನೀವು  ಆರಂಭ ಗೊಳಿಸಲಿರುವ ಕೆಲಸ ಕಾರ್ಯಗಳಿಗೆ ನಿಮ್ಮ ಅನುಬಂಧು ಗಳಿಂದಲೇ ಅಡ್ಡಿ-ಆತಂಕಗಳು ಎದುರಾಗಲಿವೆ. ಕುಟುಂಬದ ಕಲುಷಿತ ವಾತಾವರಣ ದಿಂದಾಗಿ ಮಾನಸಿಕ ನೆಮ್ಮದಿ ಕಡಿಮೆಯಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದೆಂಬ ನಿರೀಕ್ಷೆ ಬೇಡ, ಮಹಿಳಾ ಉದ್ಯಮಿಗಳಿಗೆ ಅತಿಯಾದ ದೈಹಿಕ ಶ್ರಮದಿಂದಾಗಿ ಸೊಂಟ ಅಥವಾ ಬೆನ್ನಲ್ಲಿ ವಿಪರೀತ ವೇದನೆ ಕಾಣಿಸಿಕೊಳ್ಳಬಹುದು. ಆತ್ಮೀಯ ರೆಂದು ನಂಬಿದವರಿಂದಲೇ  ನಿಮ್ಮ ವಿರುದ್ಧ ದೂರು ಕೇಳಿ ಬರಲಿದೆ. ಗುರುಚರಿತ್ರೆ ಪಾರಾಯಣಮಾಡಿ. ಮಂಗಳ-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ಕೆಲವೊಮ್ಮೆ ನೀವಾಡಲಿರುವ ಮಾತಿಗೂ ಹಾಗೂ ಕೃತಿಗೂ  ಸಂಬಂಧ ವಿರುವುದಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸುವುದು ಉತ್ತಮ.ಮನೆಯಲ್ಲಿ ಮಡದಿ ಯೊಂದಿಗೆ ಅಥವಾ ಕುಟುಂಬದ ಸದಸ್ಯರೊಂದಿಗೆ ನಿರೀಕ್ಷಿತ ಅನುಬಂಧವಿರುವುದು ಕಡಿಮೆಯಾಗಲಿದೆ, ಸ್ನೇಹಿತರ ಸಮಸ್ಯೆಗಳಿಗೆ ನಿಮ್ಮಿಂದ ಸೂಕ್ತ ಪರಿಹಾರ ಸಿಗಲಿದೆ. ಅಪರಿಚಿತ ವ್ಯಕ್ತಿಗಳಿಂದ ವಂಚನೆಗೆ ಒಳಗಾಗುವಿರಿ, ಚಿಕ್ಕ ಮಕ್ಕಳನ್ನು ಹರಿತವಾದ ಆಯುಧಗಳಿಂದ ದೂರವಿಡಿ, ಸರ್ಕಾರದಿಂದಾಗ ಬೇಕಾಗಿರುವ ಕೆಲಸಗಳು ಪ್ರಭಾವೀ ವ್ಯಕ್ತಿಗಳಿಂದ ಕೈಗೂಡಲಿದೆ. ಗಣೇಶನನ್ನು ಆರಾಧಿಸಿ. ಗುರು-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ಧನಾದಾಯವು ನಿರೀಕ್ಷೆ ಮೀರಿರುವುದರಿಂದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಸ್ವಲ್ಪ ಉಳಿತಾಯದ ಬಗ್ಗೆ ಆಲೋಚಿಸಬಹುದು. ತರುಣರು ವ್ಯವಹಾರದಲ್ಲಿ ತೊಡಗುವ ಮುನ್ನ ತುಸು ತರಬೇತಿ ಪಡೆಯುವುದು ಮೇಲು ಸ್ಥಿರಾಸ್ತಿ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಹೋಗಬಹುದು, ಗರ್ಭಿಣಿ ಸ್ತ್ರೀಯರು ತುಸು ಎಚ್ಚರದಿಂದಿರುವುದು  ಮೇಲು. ಮೂಳೆ ಸಂಬಂಧಿ ಅನಾರೋಗ್ಯ ಸಮಸ್ಯೆ ಕಾಡಲಿದೆ. ಗೋ ಸೇವೆ ಮಾಡಿ. ಭಾನು-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಅವ್ಯವಸ್ಥಿತ ಚಿತ್ತ ವೃತ್ತಿಯಿಂದಾಗಿ ಆಗಬೇಕಾಗಿರುವ ಕೆಲಸಗಳು ಕಾಲಾ ವಧಿಯಲ್ಲಿ ಆಗದೇ ಹೋಗಬಹುದು, ಹೊಸ ಕಾರ್ಯಗಳಿಗೆ ಬಂಧು-ಮಿತ್ರರ ನೆರವು ಸಾಕಷ್ಟು ಪ್ರಮಾಣದಲ್ಲಿ ದೊರೆಯಲಿದೆ. ಆದರೆ ಅದು ಸದುಪಯೋಗ ವಾಗಬೇಕಷ್ಟೇ, ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡುವ ಸಾಹಸಕ್ಕೆ ಕೈಹಾಕಬೇಡಿ, ಆಸ್ತಿ ವಿಭಾಗದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲವಾಗಿದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶ ಪಡೆವರು, ಕುದೇವತಾರಾಧನೆಯಿಂದ ಕಾರ್ಯಸಿದ್ಧಿ ಯಾಗಲಿದೆ. ಸೋಮ-ಬುಧ-ಶನಿ-ಶುಭದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavani


ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಮನೆಯ ಸದಸ್ಯರು ಎಷ್ಟೇ ಅಸಹಕಾರ ತೋರಿದರೂ ಹಿರಿಯರಾದವರು ಅಷ್ಟೇ ತಾಳ್ಮೆಯಿಂದ ಇರುವುದು ಮೇಲು. ಆಸ್ತಿ ಖರೀದಿಗೆ ಬೇಕಾಗಿರುವ ಆರ್ಥಿಕ ನೆರವು ಹಣಕಾಸು ಸಂಸ್ಥೆಗಳಿಂದ ಸಿಗಲಿದೆ, ಬಂಧುಗಳೊಂದಿಗೆ ವಿನಾಕಾರಣ ವೈಮನಸ್ಸು ಬೇಡ, ಅವಿವಾಹಿತರಿಗೆ ಕಂಕಣ ಭಾಗ್ಯ ಇಷ್ಟರಲ್ಲೇ ಕೂಡಿಬರಲಿದೆ. ಸಂಶೋಧನಾ ರಂಗದಲ್ಲಿರುವವರಿಗೆ ಸರ್ಕಾರದಿಂದ ಬರಬೇಕಾಗಿರುವ ನೆರವು ತಡವಾಗಿಬರಬಹುದು, ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಎಚ್ಚರದಿಂದಿರಿ. ಸೋಮ-ಗುರು-ಶನಿ ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಆದಾಯದಲ್ಲಿ ಕಡಿಮೆಯಿದ್ದರೂ ಅದರ ನಿರ್ವಹಣೆ ಉತ್ತಮವಾಗಿರ ಲಿದೆ, ಆಸ್ತಿ ವಿಚಾರದಲ್ಲಿ ನಿರೀಕ್ಷಿತ ಶುಭ ಸಮಾಚಾರವೊಂದು ಇಷ್ಟರಲ್ಲೇ ಕೇಳಿಬರಲಿದೆ, ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರಲಿದೆ. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಖಂಡಿತಾಬೇಡ. ಕಳೆದುಹೋಗಿದ್ದ ಅಮೂಲ್ಯ ವಸ್ತುವೊಂದು ಸದ್ಯದಲ್ಲೇ ಮರಳಿ ಕೈಸೇರಲಿದೆ, ಯುವಕರಾಡುವ ಘನತೆಗೆ ಮೀರಿದ ಮಾತು ಅವರ ಭವಿಷ್ಯಕ್ಕೆ ಮಾರಕವಾಗಲಿದೆ, ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ ಅನ್ನದಾನ ಮಾಡಿ. ಬುಧ-ಗುರು-ಶನಿ-ಶುಭ ದಿನಗಳು.

ವಾರ ಭವಿಷ್ಯ - 19.05.2024 ರಿಂದ 25.05.2024 - Janathavaniಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ಅನಿವಾರ್ಯವಲ್ಲದ ಒತ್ತಡಗಳನ್ನು ನೀವಾಗಿಯೇ ಮೇಲೆಳೆದು ಕೊಂಡು ಹೈರಾಣಾಗುವಿರಿ, ಜೊತೆಗೆ ಇದು ನಿಮ್ಮ ಏಳಿಗೆಗೆ ಮಾರಕವಾದರೂ ಆಶ್ಚರ್ಯವಿಲ್ಲ, ವಿದೇಶದಲ್ಲಿರುವ ಮಗನಿಗೆ ಆಸ್ತಿಕೊಳ್ಳುವ ವಿಚಾರದಲ್ಲಿ ನೆರವಾಗುವಿರಿ, ಸೋದರಿಯ ಪತಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ,  ಮತ್ತೊಬ್ಬರಿಗೆ ಉಪಕಾರ ಮಾಡುವ ಮೊದಲು ನಿಮ್ಮ ಇತಿಮಿತಿಯ ಅರಿವಿರಲಿ, ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯ ಗಳನ್ನು ಹೆಚ್ಚು ಮುತುವರ್ಜಿಯಿಂದ ಮಾಡುವಿರಿ ತಾಯಿಯ ಕಡೆಯಿಂದ ದೊರೆಯಲಿ ರುವ ನೆರವನ್ನು ನಿಸ್ಸಂಕೋಚವಾಗಿ ತೆಗೆದುಕೊಳ್ಳಿ. ಭಾನು-ಗುರು-ಶನಿ-ಶುಭದಿನಗಳು.


ವಿಶೇಷ ದಿನಗಳು : ದಿ.: 21.5.2024 ನೇ ಮಂಗಳವಾರ ಶ್ರೀ ನರಸಿಂಹ ಜಯಂತಿ ದಿನಾಂಕ: 23.05.2024 ನೇ ಗುರುವಾರ ಅಗಿ ಹುಣ್ಣಿಮೆ ವೈಶಾಖ ಸ್ನಾನ ಸಮಾಪ್ತಿ.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]

error: Content is protected !!