ವಿಶ್ವ ಶ್ರವಣ ದಿನ : ಕಿವಿ, ಶ್ರವಣ ಆರೈಕೆ ಅಗತ್ಯ

ವಿಶ್ವ ಶ್ರವಣ ದಿನ : ಕಿವಿ, ಶ್ರವಣ ಆರೈಕೆ ಅಗತ್ಯ

ನೀವು ನಿಮ್ಮ ಶ್ರವಣಶಕ್ತಿಯನ್ನು ಹೇಗೆ ರಕ್ಷಿಸಿಕೊಳ್ಳ ಬಹುದು? ರಕ್ಷಿಸಿಕೊಳ್ಳಬೇಕೆನ್ನುವಷ್ಟು ಅಗತ್ಯವಿದೆಯೇ? ಹೌದು. ಅಂಕಿ ಅಂಶಗಳ ಪ್ರಕಾರ ಶಬ್ದ ಮಾಲಿನ್ಯ ಬದಲಾಗುತ್ತಿರುವ ಜೀವನಶೈಲಿ ಇತರೆ ಸೋಂಕುಗಳು ಜೋರಾದ ಸಂಗೀತ ಇಯರ್‍ಪೋನ್, ಹೆಡ್‍ಪೋನ್‍ಗಳ ಅತಿಯಾದ ಬಳಕೆ ಹೀಗೆ ಶಬ್ದಮಯವಾಗಿರುವಂತಹ ಇಂದಿನ ವಾತಾವರಣ ದಿಂದಾಗಿ ಶ್ರವಣ ತೊಂದರೆಗಳು ಹೆಚ್ಚಾಗುತ್ತಿದೆ ಮೇಲೆ ಹೇಳಿರುವ ಕಾರಣದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು 2050ರ ವೇಳೆಗೆ ಶ್ರವಣ ದೋಷವುಳ್ಳ ಜನರ ಸಂಖ್ಯೆ 700 ದಶಲಕ್ಷ ದಾಟುವ ಎಚ್ಚರಿಕೆ ಘಂಟೆಯನ್ನು ಕೊಟ್ಟಿದೆ. ಹತ್ತರಲ್ಲಿ ಒಬ್ಬ ಮನುಷ್ಯರಿಗೆ ಕಿವುಡುತನ ಬರಬಹುದು ಎಂಬ ಮಾಹಿತಿ ನೀಡಿದೆ.

ಹಾಗಿದ್ದರೆ ಗಾಬರಿಪಡಬೇಕೆ? ನನಗೆ ಕಿವುಡುತನ ಬರಬಹುದೇ? ಗಾಬರಿಪಡಬೇಕಿಲ್ಲ, ಆದರೆ ನಿರ್ಲಕ್ಷಿಸುವಂತಿಲ್ಲ!

ನಿಮ್ಮ ಶ್ರವಣಶಕ್ತಿಯನ್ನು ರಕ್ಷಸಿಕೊಳ್ಳಲು ಇಲ್ಲಿದೆ ಅತ್ಯುತ್ತಮವಾದ ಸಲಹೆಗಳು :   

ಮಾಡಬಾರದ ಕೆಲಸಗಳು

 ಅನಗತ್ಯ ಕಿವಿಯಲ್ಲಿ ಕಡ್ಡಿ, ಕೀಲಿ, ಊದುಬತ್ತಿ, ಪಿನ್, ಹತ್ತಿಸುತ್ತಿದ ಕಡ್ಡಿ ಬಳಕೆಯನ್ನು ಮಾಡಬಾರದು. Nothing smaller than your elbow should be put in your ears. ಮೊಣಕೈಗಿಂತ ಸಣ್ಣದನ್ನು ಕಿವಿಯಲ್ಲಿ ಹಾಕಬಾರದೆನ್ನುವುದು ತಜ್ಞರ ಸಲಹೆ.

ಜೋರಾದ ಪರಿಮಾಣದಲ್ಲಿ ಸಂಗೀತವನ್ನು ಕೇಳಬಾರದು, ಜಾಸ್ತಿ ಸಮಯ ಇಯರ್‍ಪೋನ್, ಹೆಡ್‍ಪೋನ್‍ಗಳನ್ನು ಬಳಕೆ ಮಾಡಬಾರದು. 

ಧ್ವನಿವರ್ಧಕಗಳ ಬಳಿಯಾಗಲಿ, ಅತಿಯಾದ ಶಬ್ದ ಯಂತ್ರಗಳ ಬಳಿ, ಕಾರ್ಖಾನೆಗಳಿಂದ ದೂರವಿರಿ. 

ಕಿವಿ ನೋವು, ಸೋರುವುದು, ಕಿವಿ ಮುಚ್ಚಿದಂತಾದಾಗ, ತಲೆಸುತ್ತು ಬಂದಾಗ ನಿರ್ಲಕ್ಷಿಸಬೇಡಿ. ಮದ್ಯಪಾನ, ಧೂಮಪಾನ ಮಾಡಬೇಡಿ. 

ಮಾಡಬೇಕಾದ ಕೆಲಸಗಳು :  ಕಿವಿ ರಕ್ಷಣಾ ಸಾಧನಗಳನ್ನು. Ear protective devices [ear plugs and ear muffs] ಅತಿಯಾದ ಶಬ್ದವಿರುವ ಪ್ರದೇಶದಲ್ಲಿ ಬಳಕೆ ಮಾಡುವುದು, ಈ ಸಾಧನಗಳು ಕಿವಿ, ಮೂಗೂ, ಗಂಟಲು ತಜ್ಞರ ಔಷಧಿ ಕೇಂದ್ರದಲ್ಲಿ ಶ್ರವಣ ಸಾಧನಗಳ ವಿತರಕರ ಬಳಿ ಆನ್‍ಲೈನ್‍ನಲ್ಲಿ ಲಭ್ಯವಿರುತ್ತದೆ. 

 ವರ್ಷಕೊಮ್ಮೆಯಾದರೂ ಕಿವಿ, ಮೂಗು, ಗಂಟಲು ತಜ್ಞರ ಬಳಿ, ಶ್ರವಣ ತಜ್ಞರ ಬಳಿ ಕಿವಿ ಮತ್ತು ಶ್ರವಣಶಕ್ತಿಯ ಪರೀಕ್ಷೆಯನ್ನು ಮಾಡಿಸುವುದು. 

 ಪೌಷ್ಠಿಕ ಆಹಾರ ಸೇವನೆ, ಉತ್ತಮ ಜೀವನ ಶೈಲಿಯ ಅಭ್ಯಾಸ.

 ನಿಮ್ಮ ಶ್ರವಣಶಕ್ತಿಯ ಕುರಿತು ಶಂಕೆ ಉಂಟಾದಲ್ಲಿ ತಪ್ಪದೇ ತಜ್ಞರನ್ನು ಭೇಟಿಯಾಗಿ.

 ಅತಿಯಾದ ಶಬ್ದದಿಂದ ಎಷ್ಟು ದೂರವಿರುತ್ತೀರೋ ಅಷ್ಟು ನಿಮ್ಮ ಕಿವಿ ನಿಮಗೆ ಕೃತಜ್ಞಿಸುತ್ತದೆ.


-ಎ.ಆರ್. ವೀರೇಶ್,  (ಕಿವಿ, ಮೂಗೂ, ಗಂಟಲು ತಜ್ಞರು), 9449580761

– ಆಕಾಶ್ (ಶ್ರವಣ ತಜ್ಞರು) , 9343430074

error: Content is protected !!