ಅನುಪಮ ಸಾಧಕ ಅಥಣಿ ವೀರಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ

ಅನುಪಮ ಸಾಧಕ ಅಥಣಿ ವೀರಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ

ಕಳೆದ ತಿಂಗಳು ಜನವರಿ 18 ರಂದು ತಮ್ಮ 76ನೇ ವರ್ಷದ ಸಾರ್ಥಕ ಸಂವತ್ಸರಗಳನ್ನು ದಾಟಿ 77ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂಭ್ರಮದಲ್ಲಿರುವಾಗ ಲೇ, ಅಥಣಿ ವೀರಣ್ಣನವರ ಜೀವಮಾನ ಸಾಧನೆಗೆ ದಾವ ಣಗೆರೆ ವಿಶ್ವವಿದ್ಯಾನಿಲಯವು ಗೌರವ ಡಾಕ್ಟ ರೇಟ್‌ ಪದವಿ ನೀಡಿ ಗೌರವಿಸುತ್ತಿರುವುದು ಅವರ ಅಭಿಮಾನಿಗಳು, ಸ್ನೇಹಿತರು, ಬಂಧು-ಬಾಂಧವರ ಬಹು ದಿನದ ಕನಸು ನನಸಾಗಿದೆ.

`ಸಾಧನೆ ಯಾರೊಬ್ಬರ ಸ್ವತ್ತಲ್ಲ, ಇಚ್ಚಾಶಕ್ತಿ ಮುಂದೆ ಯಾವುದು ಅಸಾಧ್ಯವಲ್ಲ. ಗೆಲ್ಲಲೇ ಬೇಕೆಂಬ ಛಲವಿರಬೇಕು, ತನ್ನಿಂದ ಸಾಧ್ಯವೆಂಬ ಆತ್ಮಬಲ ಬೇಕು’ ಎಂಬ ನುಡಿ ಅಥಣಿ ವೀರಣ್ಣ ನವರ ಬಾಳಬೆಳಕಿಗೆ ಕೈದೀವಿಗೆಯಾಗಿದೆ.

ಲೆಕ್ಕ ಪರಿಶೋಧಕರೂ, ಕೈಗಾರಿಕೋದ್ಯಮಿ ಗಳೂ, ವಾಣಿಜ್ಯೋದ್ಯಮಿಗಳೂ, ಶೈಕ್ಷಣಿಕ ತಜ್ಞರೂ, ಧಾರ್ಮಿಕ ಮುಖಂಡರೂ, ಸಮಾಜ ಸೇವಕರೂ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ವೀರಣ್ಣನವರು ಪ್ರಸ್ತುತ ಸಮಾಜದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಉತ್ತಮವಾಗಿ ಬೆಳೆದು ಹಂತ-ಹಂತವಾಗಿ ಇಂದು ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ. 

ಸಮಾಜಮುಖಿಯಾಗಿ, ಕಾರ್ಯತತ್ಪರ ರಾಗಿ ತಮ್ಮ ಸಮೃದ್ಧ ಕಾಣಿಕೆಗಳಿಂದ ಸಮಾಜದ ಹಾಗೂ ಸಾರ್ವಜನಿಕದ ಬೆಲೆ ಹೆಚ್ಚಿಸಿದ್ದಾರೆ. ಅವರು ಶ್ರೇಷ್ಠರಾಗಿ ಜನ್ಮವೆತ್ತ ಲಿಲ್ಲ, ಅವರಿಗೆ ಶ್ರೇಷ್ಠತೆಯನ್ನು ಯಾರೂ ತಂದುಕೊಡಲಿಲ್ಲ, ಆ ಶ್ರೇಷ್ಠತೆಯನ್ನು ಅವರು ಬಹಳ ಪರಿಶ್ರಮದಿಂದ ಸತತೋದ್ಯೋಗಿ ಯಾಗಿ ದುಡಿದು ಸಂಪಾದಿಸಿ ದ್ದಾರೆ. ತಾವು ಕೈಗೆ ತೆಗೆದುಕೊಂಡ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತಾ ಮುಂದೆ ಸಾಗುತ್ತಿ ದ್ದಾರೆ. ಅವರು ಯಾರಂತ ಎಂದು ಕೇಳಿದರೆ ಅದಕ್ಕೆ ಉತ್ತರವೇ ಸಿಕ್ಕಲಾರದು. ಅವರಿಗೆ ಅವರದೇ ಆದ ತತ್ವ, ಸಿದ್ಧಾಂತ, ಆದರ್ಶ ವಾದ, ಸಂಸ್ಕಾರಯುತ ವಾದ ಜೀವನದ ಮೌಲ್ಯ ಅವರಿಗೆ ಅವರೇ ಸಾಟಿ ಎನಿಸಿದ್ದಾರೆ.

ವೀರಣ್ಣನವರ ಬಾಲ್ಯ ಜೀವನ ಅವಲೋಕಿಸಿದರೆ ತುಂಬಾ ಕಷ್ಟದ ಬದುಕು ಅವರ ದಾಗಿತ್ತು. ಆಗ ಅವರು ಕೆಲಸಕ್ಕೆ ನಿಂತರೆ ಹಸಿವು ನೀರಡಿಕೆಗಳನ್ನೇ ಅರಿಯದೇ ಕಾರ್ಯಮಗ್ನರಾಗಿರುತ್ತಿದ್ದರು. ತಾವು ಎಸ್‌.ಎಸ್‌.ಎಲ್‌.ಸಿ ಓದುವಾಗ ದಿನನಿತ್ಯ ಬೆಳಿಗ್ಗೆ ಪತ್ರಿಕೆ ವಿತರಕರಾಗಿ ಕಾರ್ಯ ನಿರ್ವಹಿಸು ತ್ತಿದ್ದರು. ಬಹು ಶ್ರಮ ವಹಿಸಿ ಮೇಲೆ ಬಂದವರು. ಇಂತಹ ಮಹಾನ್‌ ವ್ಯಕ್ತಿಗೆ ಅವರ ಜೀವಮಾನ ಸಾಧನೆ ಅರಿತು ದಾವಣಗೆರೆ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ಪದವಿ ನೀಡುತ್ತಿರುವುದು ದಾವಣಗೆರೆಯ ಮಹಾಜನತೆಯಲ್ಲಿ ಸಂತಸ, ಸಂಭ್ರಮ ಉಂಟು ಮಾಡಿದೆ. 

ಅಥಣಿ ವೀರಣ್ಣನವರಿಗೆ ನಾಡಿನ ಇತರೆ ವಿಶ್ವವಿದ್ಯಾನಿಲಯಗಳು ನೀಡುವುದಕ್ಕಿಂತ, ಶ್ರೀಯುತರ ಕಾರ್ಯಕ್ಷೇತ್ರವಾದ ದಾವಣಗೆರೆಯಲ್ಲೇ ನಮ್ಮ ವಿಶ್ವವಿದ್ಯಾನಿಲಯವೇ ಗೌರವ ಡಾಕ್ಟರೇಟ್‌ ನೀಡುತ್ತಿರುವುದು ನಮ್ಮವರನ್ನು ನಾವು ಗೌರವಿಸಿದಂತಾಗಿದೆ. ಇದು ಎಲ್ಲರೂ ಮೆಚ್ಚುವ ವಿಷಯ ಹಾಗೂ ವಿಶೇಷವೆನಿಸಿದೆ.

ತಮ್ಮ ಏಳ್ಗೆ-ಬಾಳಿಗೆ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶಾಮನೂರು ಶಿವಶಂಕರಪ್ಪ ಅವರನ್ನು ಈ ಸಂದರ್ಭದಲ್ಲಿ ಮನತುಂಬಿ ಸ್ಮರಿಸುತ್ತಾರೆ. 

ನನ್ನ ಕೆಲಸ-ಕಾರ್ಯಗಳಿಗೆ ಎಸ್ಸೆಸ್‌ರವರೇ ಸ್ಫೂರ್ತಿ ಎಂದು ಕೃತಜ್ಞತೆಯಿಂದ ಹೇಳುತ್ತಾರೆ ಅಥಣಿ ವೀರಣ್ಣ. 

ಅನುಪಮ ಸಾಧಕ ಅಥಣಿ ವೀರಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ - Janathavani



– ಜೆಂಬಗಿ ಮೃತ್ಯುಂಜಯ, 
ಕನ್ನಡ ಉಪನ್ಯಾಸಕರು, ದಾವಣಗೆರೆ.

error: Content is protected !!