ವಿಶ್ವ ಕ್ಯಾನ್ಸರ್ ಜಾಗೃತಿ ದಿನ-ಆರೈಕೆಯ ಅಂತರವನ್ನು ಕಡಿತಗೊಳಿಸಿ

ವಿಶ್ವ ಕ್ಯಾನ್ಸರ್ ಜಾಗೃತಿ ದಿನ-ಆರೈಕೆಯ ಅಂತರವನ್ನು ಕಡಿತಗೊಳಿಸಿ

ಇಂದಿನ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಯಾವ ವ್ಯಕ್ತಿಗೆ ಯಾವ ಕಾಯಿಲೆ ಇದೆ ಅಥವಾ ಯಾವ ವ್ಯಕ್ತಿ ಯಾವ ಕಾಯಿಲೆಗೆ ತುತ್ತಾಗುತ್ತಾನೆ ಎಂಬುದು ಊಹಿಸಲು ಸಾಧ್ಯವಿಲ್ಲ. ಬದಲಾಗುತ್ತಿರುವ ಜಗತ್ತಿನಲ್ಲಿ ರೋಗಗಳು ಒಂದರ ನಂತರ ಒಂದೊಂದರಂತೆ ಬರುತ್ತದೆ. ಇಂಥಹ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಯಕಾರಿ ಕಾಯಿಲೆ.

ಕ್ಯಾನ್ಸರ್ ವಿಶ್ವದ ಮರಣ ಕಾರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ. ಪ್ರತಿ ವರ್ಷ ಸುಮಾರು 180 ಲಕ್ಷ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಸುಮಾರು 90 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ವಿಶ್ವದ ಪ್ರತಿ ಆರು ಸಾವುಗಳಲ್ಲಿ ಒಂದು ಸಾವು ಕ್ಯಾನ್ಸರ್‌ನಿಂದ ಸಂಭವಿಸುತ್ತದೆ.

ಭಾರತ ದೇಶವೊಂದರಲ್ಲಿಯೇ ಸುಮಾರು 250 ಲಕ್ಷ ಮಂದಿ ಕ್ಯಾನ್ಸರ್ ರೋಗಿಗಳಾಗಿದ್ದು, ವರ್ಷಕ್ಕೆ 8,00,000 (8ಲಕ್ಷ) ಮಂದಿ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಕ್ಯಾನ್ಸರ್‌ನಿಂದಾಗಿ ಸಂಭವಿಸುವ ಸಾವಿಗೆ ಮೂಲಕಾರಣ, ತುಂಬಾ ತಡವಾದ ಹಂತದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ತೊಡಗುವುದು ಮತ್ತು ಆರಂಭಿಕ ಹಂತದಲ್ಲಿನ ನಿರ್ಲಕ್ಷ್ಯವೇ ಕಾರಣವೆಂದು ತಿಳಿದು ಬಂದಿದೆ.

ಕ್ಯಾನ್ಸರ್ ರೋಗ ಅಂದ ಕೂಡಲೇ ನಾವೆಲ್ಲ ಒಮ್ಮೆಲೆ ದಿಗಿಲುಗೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ಆತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯರ ಸೇವೆ ದುರ್ಲಬವಾಗಿತ್ತು. ಬಡತನ, ಅನಕ್ಷರತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂ ದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿ ಹೋಗಿರುತ್ತಿತ್ತು. ಆ ಕಾರಣದಿಂದಲೇ ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆ ಎಂಬ ಹಣೆ ಪಟ್ಟಿ ಪಡೆದುಕೊಂಡಿತ್ತು. ಆದರೆ ತಂತ್ರಜ್ಞಾನ ಪರಿಣಿತ ವೈದ್ಯರ ಲಭ್ಯತೆ ಮತ್ತು ಜನರ ತಿಳುವಳಿಕೆ ಏರಿದಂತೆ ಜನರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡತೊಡಗಿದೆ ಮತ್ತು ಈಗಿನ ಕಾಲ ಘಟ್ಟದಲ್ಲಿ ಕ್ಯಾನ್ಸರ್ ಖಂಡಿತವಾಗಿಯೂ ಗುಣ ಪಡಿಸಲಾಗದ ಖಾಯಿಲೆಯಲ್ಲ. ಪ್ರಾರಂಭಿಕ ಖಾಯಿಲೆಯಲ್ಲ. ಪ್ರಾರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿ ಔಷಧಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಮುಖವಾಗಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗವನ್ನು ಗೆದ್ದು ಸುಖ ಜೀವನ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಮಾಧಾನಕರ ಅಂಶ.

ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ 2008 ರಿಂದ ಪ್ರತಿ ವರ್ಷ ಫೆಬ್ರವರಿ 4 ರಂದು `ಜಾಗತಿಕ ಕ್ಯಾನ್ಸರ್ ದಿನ’ ಎಂದು ಆಚರಿಸಲಾಗುತ್ತದೆ. ಅಂತ ರಾಷ್ಟ್ರೀಯ ಕ್ಯಾನ್ಸರ್ ವಿರೋಧಿ ಸಂಘಟನೆ ಎಂಬ ಸಂಸ್ಥೆಯು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ರೋಗ ತಡೆಗಟ್ಟುವ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಆಚರಣೆ ಯನ್ನು ನಡೆಸಲಾಗುತ್ತಿದೆ. ಪ್ರಾರಂಭಿಕ ಹಂತ ದಲ್ಲಿಯೇ ರೋಗವನ್ನು ಪತ್ತೆ ಹಚ್ಚುವುದು ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಆಚರಣೆಯನ್ನು ಪ್ರಾರಂಭಿಸಿದ್ದಾರೆ. ಪ್ರತಿ ವರ್ಷ ಯಾವುದಾದರೊಂದು ಅಂಶವನ್ನು ಇಟ್ಟುಕೊಂಡು ಆಚರಣೆ ಮಾಡಲಾಗುತ್ತದೆ. 2023ರ ಧೈಯ ‘Close the care gap’ ಅಂದರೆ ಆರೈಕೆಯಲ್ಲಿ ರುವ ಅಂತರವನ್ನು ಕಡಿತಗೊಳಿಸಿ ಎಂಬುದಾಗಿದೆ. ಈ ಧೈಯ ವಾಕ್ಯದೊಂದಿಗೆ ಎಲ್ಲರಿಗೂ, ಎಲ್ಲೆಡೆ, ಎಲ್ಲಾ ರೀತಿಯ ಪರಿಪೂರ್ಣ ಕ್ಯಾನ್ಸರ್ ಚಿಕಿತ್ಸೆ ಸಿಗುವಂತಾಗಿ ಪೂರ್ಣ ಗುಣಮುಖರಾಗಲಿ ಎಂಬುದಾಗಿದೆ. ಬಡವ, ಬಲ್ಲಿದ ಭೇದವಿಲ್ಲದೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ.

ಈ ವರ್ಷದ ವಿಶೇಷ ಅಂದರೆ “SK ಚಾಲೆಂಜ್’ ಆರೈಕೆಯಲ್ಲಿನ ಅಂತರವನ್ನು ಕಡಿಮೆಗೊಳಿಸುವ ಧೈಯದೊಂದಿಗೆ ವಿವಿಧ ವರ್ಗದ ಜನರು ಓಡುವ, ಸೈಕ್ಲಿಂಗ್, ಈಜುವ ಮತ್ತು ಹೈಕಿಂಗ್ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ 21 ದಿನದ ಚಾಲೆಂಜ್’ ಎಂಬ ನವೀನ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ 21 ದಿನ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು, ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವುದು, ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಅಸಮಾನತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲರಿಗೂ ಎಲ್ಲೆಡೆ ಪರಿಪೂರ್ಣ ಚಿಕಿತ್ಸೆ ಒದಗಲಿ ಎಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ.

ಪುರುಷರಲ್ಲಿ ಕಂಡು ಬರುವ ಪ್ರಮುಖ ಕ್ಯಾನ್ಸರ್‌ಗಳೆಂದರೇ ಶ್ವಾಸಕೋಶದ, ಪ್ರೋಸ್ಟೇಟ್ ಕ್ಯಾನ್ಸರ್, ಕರಳು ಮತ್ತು ಗುದನಾಳು, ಬಾಯಿ, ಗಂಟಲು ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ, ಗರ್ಭ ಕೋಶದ ಕಂಠ (ಸರ್ವೇಕಲ್‌), ಗರ್ಭಕೋಶ, ಥೈರಾಯ್ಡ್ ಕ್ಯಾನ್ಸರ್ ಪ್ರಮುಖವಾಗಿರುತ್ತವೆ.

ಕ್ಯಾನ್ಸರ್ ರೋಗಕ್ಕೆ ಕಾರಣಗಳೇನು :

1. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ, ಧೂಮಪಾನ ಮತ್ತು ಮಧ್ಯಪಾನ, 2. ಅನುವಂಶೀಯ ಕಾರಣಗಳು, 3. ಆರಾಮದಾಯಕ ಜೀವನ ಶೈಲಿ, ಅನಾರೋಗ್ಯಪೂರ್ಣ ಆಹಾರ ಪದ್ದತಿ, 4. ಒತ್ತಡದ ಜೀವನ ಶೈಲಿ, 5. ವಿಕಿರಣಗಳು, 6. ಅತಿಯಾದ ಗರ್ಭನಿರೋಧಕ ಮಾತ್ರೆಗಳು ಮತ್ತು ಕೃತಕ ಮಾತ್ರೆಗಳು ಅನಿಯಂತ್ರಿಕ ಬಳಕೆ, 7. ವಾತಾವರಣದ ವೈಪರಿತ್ಯ, ವಾಯುಮಾಲಿನ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್‌ಕಾರಕವಸ್ತುಗಳು ದೇಹಕ್ಕೆ ಸೇರುವುದರಿಂದ, 8. ಅನಾರೋಗ್ಯಕರವಾದ ಲೈಂಗಿಕ ಜೀವನ ಮತ್ತು ಹತ್ತು ಹಲವಾರು ಲೈಂಗಿಕ ಸಂಬಂಧಗಳು, 9. ಹೆಪಟೈಟಿಸ್‌ಬಿ ಮತ್ತು ಸಿ ವೈರಸ್, ಸೋಂಕು, ಎಬ್‌ಸ್ಟಿನ್‌ಬಾರ್ ವೈರಸ್, ಹೆಚ್.ಪಿ.ಬಿ ವೈರಸ್  ಸೋಂಕುಗಳು.

ಕ್ಯಾನ್ಸರ್ ಸೂಚನೆ ನೀಡುವ ಲಕ್ಷಣಗಳು :

1. ಸ್ತನಗಳಲ್ಲಿ ಗಡ್ಡೆ ಅಥವಾ ಗಟ್ಟಿ ಭಾಗ ಇರುವುದು, 2. ಮಚ್ಚೆ ಅಥವಾ ವೃಣಗಳಿದ್ದು, ಅವು ಗಾತ್ರ ಇಲ್ಲದೆ ಬಣ್ಣದಲ್ಲಿ ಬದಲಾಗುತ್ತಿರುವುದು, 3. ಜೀರ್ಣಕ್ರಿಯೆ ಅಥವಾ ಮಲವಿಸರ್ಜನೆಯಲ್ಲಿ ದೀರ್ಘಕಾಲದ ಬದಲಾವಣೆ, 4. ಮಾಸಿಕ ಋತುಚಕ್ರದ ಸಮಯದಲ್ಲಿ ವಿಪರೀತ ರಕ್ತಸ್ರಾವ ಆಗುವುದು, 5. ದೇಹದ ಯಾವುದೇ ಅಂಗ ಅಥವಾ ಭಾಗದ ರಂದ್ರಗಳಲ್ಲಿ ರಕ್ತ ಸೋರುವುದು, 6. ದೇಹದ ಯಾವುದೇ ಭಾಗದಲ್ಲಿ ಉಂಟಾದ ಗಡ್ಡೆ, ಊತ, ವೃಣ, ಹುಣ್ಣು ಬಹಳ ಕಾಲದವರೆಗೆ ಗುಣವಾಗದಿರುವುದು, 7. ವಿನಾಕಾರಣ ದೇಹ ಕೃಶವಾಗುವುದು, ದೇಹದ ತೂಕ ಇಳಿಯುವುದು, 8. ಧ್ವನಿಯಲ್ಲಿ ಬದಲಾವಣೆ, ಆಹಾರ ನುಂಗುವುದು ಕಷ್ಟವಾಗುವುದು.

ಕ್ಯಾನ್ಸರ್‌ ರೋಗವನ್ನು ತಡೆಗಟ್ಟುವುದು ಹೇಗೆ?

1. ತಂಬಾಕು ಮತ್ತು. ಗುಟ್ಕಾ ಪಾನ್‌ಪರಾಗ್, ಮಾಣಿಕ್‌ ಚಂದ್ ಮುಂತಾದ ತಂಬಾಕು ಉತ್ಪನ್ನಗಳನ್ನು ವರ್ಜಿಸಬೇಕು. 2. ಧೂಮಪಾನ ಖಂಡಿತವಾಗಿಯೂ ಕ್ಯಾನ್ಸರ್ ರೋಗಕ್ಕೆ ಪೂರಕ, ಧೂಮಪಾನ ಮಾಡುವ ಶೇಕಡಾ 70 ಮಂದಿ ಶ್ವಾಸಕೋಶದ ಕ್ಯಾನ್ಸರಿಗೆ ತುತ್ತಾಗುತ್ತಾರೆ. ಮಧ್ಯ ಪಾನ ವರ್ಜಿಸಬೇಕು, ಧೂಮಪಾನ, ಮಧ್ಯಪಾನ ಮತ್ತು ತಂಬಾಕು ಮೂರು ಕೂಡ ಮನುಕುಲದ ಬಹುದೊಡ್ಡ ವೈರಿ. 3. ಕೆಲವೊಂದು ಕ್ಯಾನ್ಸರ್‌ಗಳು ಅನುವಂಶೀಯವಾಗಿ ಬರುತ್ತದೆ. ಈ ರೀತಿಯ ಚರಿತ್ರೆಯುಳ್ಳವರು ಕಾಲಕಾಲಕ್ಕೆ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. 4. ನಿಯಮಿತವಾದ ರಸಧೂತಗಳ ಬಳಕೆ ಹಾಗೂ ಗರ್ಭನಿರೋಧಕ ಮಾತ್ರೆಗಳ ಬಳಕೆ. 5. ಆರೋಗ್ಯಕರವಾದ ಜೀವನ ಕ್ರಮ, ಪರಿಪೂರ್ಣವಾದ ಸಮತೋಲಿತ ಆಹಾರ, ಶಿಸ್ತು ಬದ್ಧವಾದ ನಿರಂತರವಾದ ದೈಹಿಕ ವ್ಯಾಯಮಗಳಿಂದ ಕೂಡಿದ ಜೀವನಶೈಲಿ ಮತ್ತು ಒತ್ತಡ ರಹಿತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು. 6. ಕಾಲಕಾಲಕ್ಕೆ ವೈದ್ಯರ ಬಳಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡಲ್ಲಿ ಬಾಯಿಕ್ಯಾನ್ಸರ್, ಸ್ಥನಕ್ಯಾನ್ಸರ್, ಸರ್ವೈಕಲ್‌ ಕ್ಯಾನ್ಸರ್ ಮತ್ತು ಇನ್ಯಾವುದೇ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು. 30 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಪ್ರತಿ ಮೂರು ವರ್ಷಕ್ಕೊಮ್ಮೆ ಸರ್ವೈಕಲ್‌ಕ್ಯಾನ್ಸರ್ ಪತ್ತೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. 7. 12ವರ್ಷದ ಮೇಲ್ಪಟ್ಟ ಬಾಲಕಿಯರಿಗೆ ಸರ್ವೈಕಲ್‌ ಕ್ಯಾನ್ಸರ್ ತಡೆಗಟ್ಟಬಹುದು.

ಹೆಚ್.ಪಿ.ವಿ ಚುಚ್ಚುಮದ್ದು ನೀಡುವುದರಿಂದ ಕ್ಯಾನ್ಸರ್ ರೋಗ ಮಾರ ಣಾಂತಿಕ ರೋಗವಾಗಿ ದ್ದರೂ, ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಗುಣಪಡಿಸಬ ಹುದು. ಪ್ರಾರಂಭಿಕ ಹಂತದಲ್ಲಿ ಗುರಿತಿಸಿ ಸಕಾ ದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಗುಣಪಡಿಸಬಹುದು. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮಾನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತು ಸಲ್ಲದು. ಈ ನಿಟ್ಟಿನಲ್ಲಿ ಸರ್ಕಾರವು ಎನ್.ಪಿ.ಸಿ.ಡಿ.ಎಸ್ ಕಾರ್ಯಕ್ರಮದಡಿ 30 ವರ್ಷ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸರ್ವೈಕಲ್‌ ಕ್ಯಾನ್ಸರ್ ಪತ್ತೆಹಚ್ಚುವ ಯೋಜನೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಾಲ್ತಿಯಲ್ಲಿದೆ. ಹಾಗೂ ಹೆಚ್.ಪಿ.ವಿ ಚುಚ್ಚುಮದ್ದನ್ನು 12 ವರ್ಷ ಮೇಲ್ಪಟ್ಟ ಬಾಲಕಿಯರಿಗೆ ನೀಡುವ ಯೋಜನೆ ಆರಂಭಿಸುತ್ತಿದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಹೊಣೆಗಾರಿಕೆ ಅರಿತು ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅರಿವು ಮೂಡಿಸಿ ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಸಾಂತ್ವನ ನೀಡಿ ಚಿಕಿತ್ಸೆ ದೊರಕಿಸಿ ನೀಡಿ ಮತ್ತು ಮಾನಸಿಕ ಧೈರ್ಯ ತುಂಬಿದಲ್ಲಿ ಕ್ಯಾನ್ಸರ್ ರೋಗವನ್ನು ಜಯಿಸಬಹುದು.

– ಡಾ|| ಅನುರೂಪ  ಎಂ.ಎಸ್., ಮುಖ್ಯಸ್ಥರು, ಸಮುದಾಯ ಆರೋಗ್ಯ ವಿಭಾಗ, ಜೆ.ಜೆ.ಎಂ ವೈದ್ಯಕೀಯ ವಿದ್ಯಾಲಯ, ದಾವಣಗೆರೆ.

error: Content is protected !!