ಪರಿಸರ – ಕೊರೊನಾ

ಕೊರೊನಾ ಎಂಬ ವೈರಾಣು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಆದರೆ ಈ ವೈರಾಣು ಪ್ರಕೃತಿ ಹಾಗೂ ಜೀವರಾಶಿಗಳ ಮೇಲೆ ಮಾನವ ಮಾಡುತ್ತಿದ್ದ ದೌರ್ಜನ್ಯ ಸ್ವಲ್ಪ ಮಟ್ಟಿಗೆ ವಿರಾಮಗೊಳಿಸಿದೆ. ಹಾಗೆಯೇ ಇಡೀ ಜಗತ್ತಿನಲ್ಲಿ ಜೀವಭಯದಿಂದ ಮಾನವನ ಓಡಾಟ ರಸ್ತೆಯಲ್ಲಿ ವಿರಳವಾಗಿದೆ. ಇದರಿಂದ ಪರಿಸರ ನವಚೈತನ್ಯವನ್ನು ಕಾಣುತ್ತಿದೆ. ಹಾಗೆಯೇ ಈ ಮಾನವ ಸಂಕುಲದಿಂದ ಅರಣ್ಯದಲ್ಲಿ ಇರುವ ಪ್ರಾಣಿ ಪಕ್ಷಿಗಳು ತೊಂದರೆಯಿಲ್ಲದೇ ಸ್ವಚ್ಛಂದವಾಗಿ ಎಲ್ಲೇಂದರಲ್ಲಿ ಓಡಾಡುತ್ತಿರುವುದನ್ನು ಇಡೀ ಜಗತ್ತು ಇದಕ್ಕೆ ಸಾಕ್ಷೀಯಾಗಿದೆ. 

ಸದಾ ವಾಹನಗಳ ಓಡಾಟದಿಂದ ತುಂಬಿ ತುಳುಕುತ್ತಿದ್ದ ಎಲ್ಲಾ ಮಹಾನಗರಗಳಲ್ಲಿ ಖಾಲಿ ಖಾಲಿಯಾಗಿವೆ. ಮಾನವ ಸಂಕುಲ ಕೆಲವೊಂದು ಸ್ಥಳಗಳಲ್ಲಿ ನವಿಲಿನ ಸ್ವಚ್ಛಂದ ಹಾರಾಟ, ಜಿಂಕೆಗಳ ಓಡಾಟ ಹಾಗೂ ಪ್ರಾಣಿ ಪಕ್ಷಿಗಳ ಹಾರಾಟವನ್ನು ಕಾಣಬಹುದಾಗಿದೆ. ಅರಣ್ಯಕ್ಕೆ ಹೊಂದಿಕೊಂಡ ನಗರಗಳಲ್ಲಿ ಮೇಲೆ ಹೇಳಿದ ದೃಶ್ಯವಳಿಗಳನ್ನು ಅಲ್ಲಿ ವಾಸ ಮಾಡುತ್ತಿದ್ದ ಜನರೆಲ್ಲರೂ ಸಾಕ್ಷಿಗಳಾಗಿದ್ದಾರೆ. ಪರಿಸರದ ಸಂಗತಿಗಳು ಭಾರತದಲ್ಲೇ ಅಲ್ಲ ವಿವಿಧ ದೇಶಗಳಲ್ಲಿ ಸಹ ಜನರು ಪರಿಸರದ ನವಚೈತನ್ಯ ಹಾಗೂ ಪ್ರಾಣಿ ಪಕ್ಷಿಗಳ ದೃಶ್ಯಕ್ಕೆ ಸಾಕ್ಷಿಗಳಾಗಿದ್ದಾರೆ. 

ಸ್ವಚ್ಛಂದ ಪರಿಸರವಿದ್ದರೆ ಮಾತ್ರ ಮಾನವ ಸಂಕುಲ ಆರೋಗ್ಯ ಜೀವನಕ್ಕೆ ಕಾರಣ, ಆಯುರ್ವೇದ ಶಾಸ್ತ್ರದಲ್ಲಿ ಜನಪದ ಧ್ವಂಸದ ಉಲ್ಲೇಖವಿದೆ. ಅಂದರೆ ವಾಯು, ಜಲ, ಭೂಮಿಯ ವಿಕೃತಿಯಿಂದ ನಾನಾ ತರಹದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಆರೋಗ್ಯವಂತ ಪುರುಷನ ಆರೋಗ್ಯ ಕಾಪಾಡಲಿಕ್ಕೆ ದಿನಚರ್ಯ, ರಾತ್ರಿಚರ್ಯ ಹಾಗೂ ಋತುಚರ್ಯ ಉಲ್ಲೇಖವಿದೆ. ಇದನ್ನು ಮಾನವ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಾಗಿ ಹಾಗೂ ದೀರ್ಘಾವಧಿ ಜೀವನ ಮಾಡಲು ಸಹಕಾರಿಯಾಗುತ್ತದೆ. ಆಯುರ್ವೇದ ಶಾಸ್ತ್ರ ಮಾನವನ ಜೀವನದ ಒಂದು ಅಂಗವಾಗಿದೆ. ಇಲ್ಲಿ ಖಾಯಿಲೆ ಬರುವುದಕ್ಕಿಂತ ಮುಂಚೆ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಅನುಕರಣೆಯಿಂದ ಆರೋಗ್ಯವಾಗಿ ಜೀವನ ನಡೆಸಲು ಸಹಕಾರಿಯಾಗಿದೆ. (Prevention is better than cure) ಹೀಗೆ ಮಾನವ ನಾಡಿನ ಬೆಳವಣಿಗೆಗಾಗಿ ಕಾಡಿನ ನಾಶ ಮಾಡುತ್ತ ಹೋದರೆ ಅವರಿಗೆ ಉಳಿಗಾಲವಿಲ್ಲ. ಕೊರೊನಾ ವೈರಾಣು ಒಂದು ನೆಪ ಮಾತ್ರ. ನಾವುಗಳು ಪರಿಸರ ಸಂರಕ್ಷಣೆ ಮಾಡಲಿಲ್ಲವೆಂದರೆ ಇಂತಹ ಎಷ್ಟೇ ಕಾಯಿಲೆಗಳು ಪರಿಸರ ನಾಶದಿಂದ ಹಾಗೂ ಅದರ ದುಶ್ಪರಿಣಾಮಗಳಿಂದ ಮಾನವ ಬೆಲೆ ತೆರೆಬೇಕಾಗುತ್ತದೆ.

ನನಗೆ ಆಶ್ಚರ್ಯ ಅಂದರೆ ಹೋದ ವರ್ಷ ನನ್ನ ದುಬೈ ಪ್ರವಾಸದಲ್ಲಿ ಅಲ್ಲಿನ ಪರಿಸರದ ರಕ್ಷಣೆಯ ಕಾಳಜಿ ಬಗ್ಗೆ ಆ ಜನರ ಹಾಗೂ ಅಲ್ಲಿನ ಸರಕಾರ (ದೊರೆ ಆಳ್ವಿಕೆ) ದಿಟ್ಟ ನಿಲುವು ತಮಗೆಲ್ಲಾ ಗೊತ್ತಿದ್ದ ಹಾಗೆ ದುಬೈ ಒಂದು ಮರುಭೂಮಿ ಪ್ರದೇಶ ಅಷ್ಟೂ ಆದರೂ ಅಲ್ಲಿನ ಜನರ ಪರಿಸರದ ಘೋಷಣೆ ಹಾಗೂ ಸಂರಕ್ಷಣೆ ಅಪಾರವಾದದ್ದು. ದುಬೈಯಿಂದ ಅಬುದಾಬಿ ರಸ್ತೆಯ ದೂರ 140 ಕಿ.ಮೀ. ರಸ್ತೆಯ ಉದ್ದಕ್ಕೂ ಸಾಲು ಮರಗಳನ್ನು ಹಾಕಿದ್ದಾರೆ ಹಾಗೆ ಅದಕ್ಕೆ ನೀರಿನ ವ್ಯವಸ್ಥೆಯನ್ನು ಡ್ರಿಪ್ ಇರಿಗೇಶನ್ ಮುಖಾಂತರ ವ್ಯವಸ್ಥೆ ಮಾಡಲಾಗಿದೆ.

ಭಾರತ ಇಡೀ ವಿಶ್ವವನ್ನು ತನ್ನ ಕೈ ಬೆರಳಿನಲ್ಲಿ ಆಡಿಸುವ ಶಕ್ತಿ ಹೊಂದಿದೆ ಕೇವಲ ನೇಗಿಲ ಶಕ್ತಿಯಿಂದ (Farmer’s power)ಏಕೆ ಎಂದರೆ ದೇವರ ಆಶೀರ್ವಾದದಿಂದ ಭಾರತ ದೇಶದ ಮಣ್ಣಿನ ಫಲವತ್ತತೆ ಇದಕ್ಕೆ ಕಾರಣ. ಇದಕ್ಕೆ ಇಲ್ಲಿರುವ ಸರಕಾರ ರೈತರಿಗೆ ಪ್ರೋತ್ಸಹ ನೀಡಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಹೆಚ್ಚು ಇಳುವರಿ ಹಾಗೂ ಗುಣಮಟ್ಟದ ದವಸ ಧಾನ್ಯಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ.

ರೋಗ ನಿರೋಧಕ ಶಕ್ತಿ ಉತ್ಪತ್ತಿಗೆ ನಮ್ಮ ಜೀವನ ಶೈಲಿ, ನಿಯಮಿತ ವ್ಯಾಯಾಮ, ಸಮತೋಲಿತ ಪೌಷ್ಠಿಕ ಆಹಾರ, ಸಕರಾತ್ಮಕ ಆಲೋಚನೆಗಳು, ಯೋಗಾಭ್ಯಾಸ ಮತ್ತು ಸ್ವಚ್ಛತೆ ರೋಗ ನಿರೋಧತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಡಾ. ರುದ್ರೇಶ್ ಜಿ.ಡಿ.
ಎಂ.ಡಿ. ಎಫ್.ಎ.ಜಿ.ಇ. (ಮಣಿಪಾಲ್) ಪ್ರೊ. & ಹೆಚ್‌ಓಡಿ
ಅಶ್ವಿನಿ ಆಯುರ್ವೇದಿಕ್‌ ಮೆಡಿಕಲ್ ಕಾಲೇಜ್‌ & ಪಿ.ಜಿ., ಸೆಂಟರ್, ದಾವಣಗೆರೆ.

error: Content is protected !!