ಪಕ್ಷಿಗಳಿಗಾಗಿ ಬೆಳೆ ಬಿಟ್ಟುಕೊಟ್ಟ ಸಂಕೋಳ್

ಇಷ್ಟು ಬೇಗ ಜೋಳ ಬಿತ್ತಿದ್ದರೆ ಬೆಳೆ ಬರುವುದಿಲ್ಲ ಎಂದು ಸ್ನೇಹಿತರು ಹೇಳಿದ್ದರು. ಆದರೆ, ಇತ್ತೀಚಿಗಷ್ಟೇ ಅಂದಾಜು 1.20 ಲಕ್ಷ ರೂ. ಮೊತ್ತದ ಉತ್ತಮ ಬೆಳೆ ಬಂದಿದ್ದು ಸಂತೋಷವಾಗಿದೆ. ಆದ್ದರಿಂದಲೇ ಈ ಬಾರಿ ಬೆಳೆಯನ್ನು ಕಟಾವು ಮಾಡದೆ ಪಕ್ಷಿಗಳಿಗಾಗಿ ಬಿಟ್ಟಿದ್ದೆ. ಆಹಾರಕ್ಕಾಗಿ ಬರುವ ಹಕ್ಕಿಗಳ ಹಸಿವು ಇಂಗಿಸುವ ಚಿಕ್ಕ ಪ್ರಯತ್ನ ನನ್ನದಾಗಿತ್ತು ಎನ್ನುತ್ತಾರೆ ಸಂಕೋಳ್.

ಕೊರೊನಾ ಸಂಕಷ್ಟದಲ್ಲಿ ಜನರೇ ಅನ್ನ ನೀರಿಗಾಗಿ ಪರದಾಡುವಾಗ ಪ್ರಾಣಿ, ಪಕ್ಷಿಗಳ ಪಾಡೇನು? ಎಂಬ ಪ್ರಶ್ನೆ  ಮನದಲ್ಲಿತ್ತು. ಆದ್ದರಿಂದಲೇ ಬೆಳೆಯನ್ನು ಪ್ರಾಣಿ, ಪಕ್ಷಿಗಳಿಗೆ ಮೀಸಲಿಡಲು ಮುಂದಾದೆ ಎಂದರು.

ಹೊಲ ಈಗ ಬಹುತೇಕ ಖಾಲಿಯಾಗುವ ಹಂತದಲ್ಲಿದೆ. ಪಕ್ಷಿಗಳು ಹಲವು ದಿನಗಳಿಂದ ಖುಷಿಯಾಗಿಯೇ ಕಾಳು ಸವಿದಿವೆ. ಹೊಲದ ಮಾಲೀಕ ಹಾಗೂ ಮನೆಯವರಿಗೆ ಒಂದು ರೀತಿಯ ಖುಷಿ. ಬೆಳಿಗ್ಗೆ ಹಾಗೂ ಸಂಜೆ ಹೊಲದ ಕಡೆ ಬಂದು ಪಕ್ಷಿಗಳ ಚಿಲಿ ಪಿಲಿ ಕೇಳುವುದೇ ಸೊಗಸು. ಪಕ್ಷಿಗಳ ಹಿಂಡು ಬಂದ ಕಾಳು ತಿನ್ನುವುದನ್ನು ನೋಡುವುದೇ  ಆನಂದ. ಇದನ್ನು ನೋಡಲೆಂದೇ ಬೆಳಿಗ್ಗೆ ಮತ್ತು ಸಂಜೆ ಒಂದು ತಾಸು ತೋಟಕ್ಕೆ ಹೋಗುತ್ತಿದ್ದೆ. ಅವುಗಳ ದನಿ ಕೇಳುತ್ತಿದ್ದರೆ ಮನಸ್ಸಿಗೇನೋ ತೃಪ್ತಿ – ಉಲ್ಲಾಸ ಎಂದು ಸಂಕೋಳ್ ಹೇಳಿದರು.

ಉಚಿತ ನೀರು ಕೊಟ್ಟಿದ್ದ ಸಂಕೋಳ್: ಸಂಕೋಳ್ ಚಂದ್ರಶೇಖರ್, 2007 ರಿಂದ 2013ರವರೆಗೆ ನಗರ ಪಾಲಿಕೆಯ ಸದಸ್ಯರಾಗಿದ್ದರು. ಪಾಲಿಕೆಯ ಇವರ ಅಧಿಕಾರವಧಿಯಲ್ಲಿ ಎಸ್ಸಿ, ಎಸ್ಟಿ  ಜನಾಂಗದವರಿಗೆ ಉಚಿತ ಶೌಚಾಲಯಗಳ ನಿರ್ಮಾಣ ಇವರ ಅಭಿವೃದ್ಧಿ ಕಾರ್ಯಗಳಿಗೆ ಹಿಡಿದ ಕನ್ನಡಿ. 2016ರಲ್ಲಿ ಮಳೆ ದೂರವಾಗಿ ನೀರಿನ ಅಭಾವ ಕಂಡಾಗ ಅವರ ಸ್ವಂತ ಕೊಳವೆ ಬಾವಿಯಿಂದಲೇ ಪಾಲಿಕೆ ನೀರಿನ ಟ್ಯಾಂಕರ್ ಮೂಲಕ ಉಚಿತವಾಗಿ ಕುಡಿಯುವ ನೀರು ವಿತರಿಸಿದ್ದನ್ನು ಇಲ್ಲಿ ನೆನೆಯಬಹುದು.

2005-06ರಲ್ಲಿ ಶಾಮನೂರು ಬಳಿ ಬೈಪಾಸ್ ನಲ್ಲಿ ಬಳಿ ಎರಡು ಸುಂದರ ಬ್ರಿಡ್ಜ್ ನಿರ್ಮಾಣದ ಹೋರಾಟದಲ್ಲಿ ಸಂಕೋಳ್ ಚಂದ್ರಶೇಖರ್ ಮುಂಚೂಣಿಯಲ್ಲಿದ್ದರು. ಅಷ್ಟೇ ಅಲ್ಲ, ಬಡವರ ಕಷ್ಟಗಳಿಗೆ ಸ್ಪಂದಿಸುವ ಮನೋ ಭಾವದ ಸಂಕೋಳ್ ಅವರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ  ಸಮಾಜ ಸೇವೆಯಲ್ಲಿ ಸಕ್ರಿಯವಾಗಿ  ಪಾಲ್ಗೊಳ್ಳುತ್ತಿದ್ದಾರೆ.

ಆದರೆ, ಇತ್ತೀಚಿಗಷ್ಟೇ ಅಂದಾಜು 1.20 ಲಕ್ಷ ರೂ. ಮೊತ್ತದ ಉತ್ತಮ ಬೆಳೆ ಬಂದಿದ್ದು ಸಂತೋಷವಾಗಿದೆ. ಆದ್ದರಿಂದಲೇ ಈ ಬಾರಿ ಬೆಳೆಯನ್ನು ಕಟಾವು ಮಾಡದೆ ಪಕ್ಷಿಗಳಿಗಾಗಿ ಬಿಟ್ಟಿದ್ದೆ. ಆಹಾರಕ್ಕಾಗಿ ಬರುವ ಹಕ್ಕಿಗಳ ಹಸಿವು ಇಂಗಿಸುವ ಚಿಕ್ಕ ಪ್ರಯತ್ನ ನನ್ನದಾಗಿತ್ತು ಎನ್ನುತ್ತಾರೆ ಸಂಕೋಳ್.

ಕೊರೊನಾ ಸಂಕಷ್ಟದಲ್ಲಿ ಜನರೇ ಅನ್ನ ನೀರಿಗಾಗಿ ಪರದಾಡುವಾಗ ಪ್ರಾಣಿ, ಪಕ್ಷಿಗಳ ಪಾಡೇನು? ಎಂಬ ಪ್ರಶ್ನೆ  ಮನದಲ್ಲಿತ್ತು. ಆದ್ದರಿಂದಲೇ ಬೆಳೆಯನ್ನು ಪ್ರಾಣಿ, ಪಕ್ಷಿಗಳಿಗೆ ಮೀಸಲಿಡಲು ಮುಂದಾದೆ ಎಂದರು.

ಹೊಲ ಈಗ ಬಹುತೇಕ ಖಾಲಿಯಾಗುವ ಹಂತದಲ್ಲಿದೆ. ಪಕ್ಷಿಗಳು ಹಲವು ದಿನಗಳಿಂದ ಖುಷಿಯಾಗಿಯೇ ಕಾಳು ಸವಿದಿವೆ. ಹೊಲದ ಮಾಲೀಕ ಹಾಗೂ ಮನೆಯವರಿಗೆ ಒಂದು ರೀತಿಯ ಖುಷಿ. ಬೆಳಿಗ್ಗೆ ಹಾಗೂ ಸಂಜೆ ಹೊಲದ ಕಡೆ ಬಂದು ಪಕ್ಷಿಗಳ ಚಿಲಿ ಪಿಲಿ ಕೇಳುವುದೇ ಸೊಗಸು. ಪಕ್ಷಿಗಳ ಹಿಂಡು ಬಂದ ಕಾಳು ತಿನ್ನುವುದನ್ನು ನೋಡುವುದೇ  ಆನಂದ. ಇದನ್ನು ನೋಡಲೆಂದೇ ಬೆಳಿಗ್ಗೆ ಮತ್ತು ಸಂಜೆ ಒಂದು ತಾಸು ತೋಟಕ್ಕೆ ಹೋಗುತ್ತಿದ್ದೆ. ಅವುಗಳ ದನಿ ಕೇಳುತ್ತಿದ್ದರೆ ಮನಸ್ಸಿಗೇನೋ ತೃಪ್ತಿ – ಉಲ್ಲಾಸ ಎಂದು ಸಂಕೋಳ್ ಹೇಳಿದರು.

ಉಚಿತ ನೀರು ಕೊಟ್ಟಿದ್ದ ಸಂಕೋಳ್: ಸಂಕೋಳ್ ಚಂದ್ರಶೇಖರ್, 2007 ರಿಂದ 2013ರವರೆಗೆ ನಗರ ಪಾಲಿಕೆಯ ಸದಸ್ಯರಾಗಿದ್ದರು. ಪಾಲಿಕೆಯ ಇವರ ಅಧಿಕಾರವಧಿಯಲ್ಲಿ ಎಸ್ಸಿ, ಎಸ್ಟಿ  ಜನಾಂಗದವರಿಗೆ ಉಚಿತ ಶೌಚಾಲಯಗಳ ನಿರ್ಮಾಣ ಇವರ ಅಭಿವೃದ್ಧಿ ಕಾರ್ಯಗಳಿಗೆ ಹಿಡಿದ ಕನ್ನಡಿ. 2016ರಲ್ಲಿ ಮಳೆ ದೂರವಾಗಿ ನೀರಿನ ಅಭಾವ ಕಂಡಾಗ ಅವರ ಸ್ವಂತ ಕೊಳವೆ ಬಾವಿಯಿಂದಲೇ ಪಾಲಿಕೆ ನೀರಿನ ಟ್ಯಾಂಕರ್ ಮೂಲಕ ಉಚಿತವಾಗಿ ಕುಡಿಯುವ ನೀರು ವಿತರಿಸಿದ್ದನ್ನು ಇಲ್ಲಿ ನೆನೆಯಬಹುದು.

2005-06ರಲ್ಲಿ ಶಾಮನೂರು ಬಳಿ ಬೈಪಾಸ್ ನಲ್ಲಿ ಬಳಿ ಎರಡು ಸುಂದರ ಬ್ರಿಡ್ಜ್ ನಿರ್ಮಾಣದ ಹೋರಾಟದಲ್ಲಿ ಸಂಕೋಳ್ ಚಂದ್ರಶೇಖರ್ ಮುಂಚೂಣಿಯಲ್ಲಿದ್ದರು. ಅಷ್ಟೇ ಅಲ್ಲ, ಬಡವರ ಕಷ್ಟಗಳಿಗೆ ಸ್ಪಂದಿಸುವ ಮನೋ ಭಾವದ ಸಂಕೋಳ್ ಅವರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ  ಸಮಾಜ ಸೇವೆಯಲ್ಲಿ ಸಕ್ರಿಯವಾಗಿ  ಪಾಲ್ಗೊಳ್ಳುತ್ತಿದ್ದಾರೆ.

error: Content is protected !!