ಎಲ್ಲಾ ಜಾತಿ, ಸಮುದಾಯಗಳ ಬೆಳವಣಿಗೆಯಲ್ಲಿ ಶ್ರೀ ವಾಲ್ಮೀಕಿ ಋಷಿ

ವಾಲ್ಮೀಕಿ ಒಬ್ಬರು ಋಷಿ ಹಾಗೂ ಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂತಲೂ ಕರೆಯು ತ್ತಾರೆ. ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ ಎಂಬ ಸಾಮಾನ್ಯ ಮನುಷ್ಯ. ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ ‘ಪ್ರಾಚೇತಸ’ ಎಂತಲೂ ಕರೆಯಲಾಗುತ್ತದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಸಂಸ್ಕೃತದಲ್ಲಿ ಹುತ್ತ ಎಂದರೆ ವಲ್ಮೀಕ ಎಂದು ಕರೆಯುತ್ತಾರೆ. ಇದನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತು.

ವಾಲ್ಮೀಕಿ ಮಹರ್ಷಿಗಳು ತಮಸಾ ನದ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಒಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಈ ಕೆಳಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಘರಿಸುತ್ತಾರೆ.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ || 

ಇದು ರಾಮಾಯಣ ರಚನೆಗೆ ಪ್ರೇರಣೆ ಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿ ಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಬಾಯಿಂದ ಹೊರಹೊಮ್ಮಿದ ಮಾತುಗಳು.

ಈ ಶ್ಲೋಕದ ಅರ್ಥ ಹೀಗಿದೆ : 

ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ|
ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ|| 

ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕ ರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು.

ಉತ್ತರ ರಾಮಾಯಣದೊಳಗೊಂದು ಪಾತ್ರವಾಗಿ ವಿವರಿಸಲಾಗಿದೆ. ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗ್ಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತಿಳಿದು, ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ. ರಾಮನ ಆಜ್ಞೆಯಂತೆ ಸೀತೆಯನ್ನು ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿ ಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಅಲ್ಲೇ      ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣದ ಬಗ್ಗೆ ವಿವರಿಸಿರುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ.

ಯಾವುದೇ ಸಮುದಾಯಕ್ಕೆ ಜಾತಿಯ ಅಭಿಮಾನವಿರಲಿ. ಅದು ಇನ್ನೊಂದು ಜಾತಿ ಯನ್ನು ದ್ವೇಷಿಸುವ ಹಂತ ತಲುಪದಂತಿರ ಬೇಕು. ಹಾಗಾಗಿ ಇತರೆ ಜಾತಿ, ಸಮುದಾ ಯಗಳ ಬಗ್ಗೆ ಪ್ರೀತಿ, ಸ್ನೇಹದ ಬೆಸುಗೆ ಸಾಧ್ಯವಾಗಬೇಕು. ವಾಲ್ಮೀಕಿ ಜಯಂತಿಯಲ್ಲಿ ಆಯಾ ಊರುಗಳ          ಬೇಡ ಸಮುದಾ ಯದ ವರನ್ನು ಮಾತ್ರ ಒಳಗೊಳ್ಳದೆ ಎಲ್ಲಾ ಜಾತಿ, ಸಮುದಾಯಗಳ ವಿಶ್ವಾಸ ಪಡೆದು ಕೂಡಿಕೊಂಡು ಆಚರಣೆ ಮಾಡಲಾಗುತ್ತಿದೆ. ಹರಿಹರದ ರಾಜನಹಳ್ಳಿಯಲ್ಲಿ ಶ್ರೀ ವಾಲ್ಮೀಕಿ ಗುರುಪೀಠವನ್ನು  ಲಿಂಗೈಕ್ಯ ಜಗದ್ಗುರು ಶ್ರೀಶ್ರೀಶ್ರೀ ಪುಣ್ಯಾನಂದಪುರಿ ಶ್ರೀಗಳು ಸ್ಥಾಪಿಸಿದರು. ಈಗ ಈ ಮಠದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಜಗದ್ಗುರು ಶ್ರೀಶ್ರೀಶ್ರೀ ಪ್ರಸನ್ನಾನಂದ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಜೊತೆಗೆ ಅನೇಕ ಗುರುಪೀಠಗಳು, ಜಾತಿಯ ಮುಖಂಡರು ಹಾಗೂ ಇತರೆ ಜಾತಿಯ ಮುಖಂಡರು ಸಹ          ಕೈ ಜೋಡಿಸಿದ್ದಾರೆ. 

ನಮ್ಮ ಕಾಲೇಜಿನ ವತಿಯಿಂದ ರಾಜನ ಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಎನ್.ಎಸ್.ಎಸ್.‌ ಶಿಬಿರವನ್ನು ಆಯೋಜಿಸಿ ದ್ದಾಗ ಶ್ರೀಗಳು ನಮಗೆ ಬಹಳಷ್ಟು ಸಹಾಯ, ಸಹಕಾರ ಮತ್ತು ಉತ್ತಮವಾದ ಜೀವನ ಮೌಲ್ಯಗಳನ್ನು ಹಾಗೂ ನಮ್ಮ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ ಎಂಬುದರಲ್ಲಿ ಸಂದೇಶವಿಲ್ಲ. ಪ್ರಯುಕ್ತ ನಾವೆಲ್ಲರೂ ಈ ಮಠಕ್ಕೆ ಆಭಾರಿಯಾಗಿದ್ದೇವೆ.


ಪ್ರೊ. ಕೆ.ಬಿ. ಮಂಜುನಾಥ್‌
ಸಹ ಪ್ರಾಧ್ಯಾಪಕರು ಮತ್ತು  ಎನ್.ಎಸ್.ಎಸ್.‌ ಅಧಿಕಾರಿಗಳು
ಶ್ರೀಮತಿ ಗಿರಿಯಮ್ಮ ಪದವಿ ಕಾಲೇಜು, ಹರಿಹರ.

error: Content is protected !!