ವ್ಯಾಸಪೂರ್ಣಿಮೆ, ಅಂದರೆ ಗುರುಪೂರ್ಣಿಮೆ. ಪ್ರತಿವರ್ಷ ಅನೇಕ ಜನರು ಒಟ್ಟಾಗಿ ಅವರವರ ಸಂಪ್ರದಾಯಕ್ಕನುಸಾರ ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ವರ್ಷ ಕೊರೊನಾದ ವಿಷಾಣು ಹರಡಿರುವುದರಿಂದ ನಾವು ಒಟ್ಟಾಗಿ ಗುರು ಪೂರ್ಣಿಮೆ ಆಚರಿಸಲು ಸಾಧ್ಯವಿಲ್ಲ. ಇಲ್ಲಿನ ಒಂದು ಮಹತ್ವದ ವಿಷಯವೆಂದರೆ, ಹಿಂದೂ ಧರ್ಮದಲ್ಲಿ ಆಪತ್ಕಾಲದಲ್ಲಿ ಧರ್ಮಾಚರಣೆಗಾಗಿ ಕೆಲವು ಪರ್ಯಾಯಗಳನ್ನು ಹೇಳಲಾಗಿದೆ. ಇದಕ್ಕೆ `ಆಪತ್ಧರ್ಮ’ ಎಂದು ಹೇಳುತ್ತಾರೆ. ಆಪತ್ಧರ್ಮವೆಂದರೆ `ಆಪದಿ ಕರ್ತವ್ಯೂ ಧರ್ಮ’ ಅಂದರೆ ಆಪತ್ತಿನಲ್ಲಿ ಆಚರಿಸುವ ಧರ್ಮ. ಸದ್ಯ ಕೊರೊನಾದ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಇದೆ. ಈ ಕಾಲದಲ್ಲಿಯೇ ಗುರು ಪೂರ್ಣಿಮೆ ಇರುವುದರಿಂದ ಸಂಪತ್ಕಾಲದಲ್ಲಿ ಹೇಳಿರುವ ಪದ್ಧತಿಯಲ್ಲಿ ಈ ವರ್ಷ ನಮಗೆ ಈ ಮಹೋತ್ಸವವನ್ನು ಆಚರಿಸಲು ಸಾಧ್ಯವಿಲ್ಲ.
ಈ ದೃಷ್ಟಿಯಿಂದ ಈ ಲೇಖನದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಧರ್ಮಾಚರಣೆಗಾಗಿ ಏನೆಲ್ಲಾ ಮಾಡಬಹುದು ಎನ್ನುವುದರ ವಿಚಾರ ಮಾಡಲಾಗಿದೆ. ಇಲ್ಲಿ ಮಹತ್ವದ ಅಂಶವೆಂದರೆ, ಹಿಂದೂ ಧರ್ಮದಲ್ಲಿ ಮಾನವನ ಬಗ್ಗೆ ಯಾವ ಹಂತದವರೆಗೆ ವಿಚಾರ ಮಾಡಲಾಗಿದೆ ಎಂಬುದು ಕಲಿಯಲು ಸಿಗುತ್ತದೆ. ಇದರಿಂದ ಹಿಂದೂ ಧರ್ಮದ ಏಕಮೇ ವಾದ್ವಿತೀಯತೆ ಎದ್ದು ಕಾಣುತ್ತದೆ.
1) ಗುರು ಪೂರ್ಣಿಮೆಯಂದು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೇ ಭಕ್ತಿಭಾವದಿಂದ ಗುರುಪೂಜೆ ಅಥವಾ ಮಾನಸ ಪೂಜೆ ಮಾಡಿದರೂ ಒಂದು ಸಾವಿರ ಪಟ್ಟು ಗುರು ತತ್ವದ ಲಾಭವಾಗುವುದು. ಗುರುಪೂರ್ಣಿಮೆಯಂದು ಹೆಚ್ಚಿನ ಜನರು ತಮ್ಮ ಶ್ರೀ ಗುರುಗಳ ಬಳಿ ಹೋಗಿ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಕೆಲವರು ಶ್ರೀಗುರುಗಳಿಗೆ, ಕೆಲವರು ಮಾತಾಪಿತೃಗಳಿಗೆ, ಕೆಲವರು ವಿದ್ಯಾ ಗುರುಗಳಿಗೆ (ನಮಗೆ ಜ್ಞಾನ ನೀಡಿದವರಿಗೆ ಅಂದರೆ ಶಿಕ್ಷಕರಿಗೆ), ಕೆಲವರು ಆಚಾರ್ಯ ಗುರುಗಳಿಗೆ (ತಮ್ಮಲ್ಲಿ ಪರಂಪರೆಗನುಸಾರ ಪೂಜೆಗೆ ಬರುವ ಗುರೂಜಿಗಳು) ಇನ್ನು ಕೆಲವರು ಮೋಕ್ಷ ಗುರು (ನಮಗೆ ಸಾಧನೆಯ ದೃಷ್ಟಿಕೋನವನ್ನು ನೀಡಿ ಮೋಕ್ಷದ ಮಾರ್ಗವನ್ನು ತೋರಿಸಿದ ಗುರುಗಳು) ಗಳಿಗೆ ಅವರ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ವರ್ಷ ಕೊರೊನಾದ ಮಹಾಮಾರಿಯ ಹಿನ್ನೆಲೆಯಲ್ಲಿ ನಾವು ಮನೆಯಲ್ಲಿಯೇ ಇದ್ದು ಭಕ್ತಿಭಾವದಿಂದ ಶ್ರೀ ಗುರುಗಳ ಭಾವಚಿತ್ರವನ್ನಿಟ್ಟು ಪೂಜೆ ಅಥವಾ ಮಾನಸ ಪೂಜೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ನಮಗೆ ಒಂದು ಸಾವಿರ ಪಟ್ಟು ಗುರು ತತ್ವದ ಲಾಭವಾಗುತ್ತದೆ.
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ…
ಅಜ್ಞಾನದೆಡೆಗೆ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ `ಗುರು’.
ಎಲ್ಲಾ ಭಕ್ತರು ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಸಂಘಟಿತ ಶಕ್ತಿಯ ಲಾಭವಾಗುತ್ತದೆ. ಸಂಪ್ರದಾಯಗಳಲ್ಲಿನ ಎಲ್ಲಾ ಭಕ್ತರು ಸಾಧ್ಯವಾದರೆ ಒಂದು ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಮಾಡಬೇಕು. ಒಂದೇ ಸಮಯದಲ್ಲಿ ಪೂಜೆ ಮಾಡಿದರೆ, ಹೆಚ್ಚು ಸಂಘಟಿತ ಶಕ್ತಿಯ ಲಾಭವಾಗುತ್ತದೆ. ಆದ್ದರಿಂದ ಸಾಧ್ಯವಿದ್ದರೆ ಎಲ್ಲರೂ ಒಂದು ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ಪೂಜೆ ಮಾಡಬೇಕು.
ನಿರ್ಧರಿತ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲದವರು ತಮ್ಮ ತಮ್ಮ ಸಮಯಕ್ಕನುಸಾರ ಸೂರ್ಯಾಸ್ತದ ಮೊದಲು ಪೂಜೆ ಮಾಡಬಹುದು.
ಪ್ರತಿಯೊಬ್ಬರೂ ತಮ್ಮ ತಮ್ಮ ಸಂಪ್ರದಾಯಕ್ಕನುಸಾರ ಶ್ರೀ ಗುರುಗಳು ಅಥವಾ ಉಪಾಸ್ಯ ದೇವತೆಯ ಮೂರ್ತಿ ಅಥವಾ ಪಾದುಕೆಗಳನ್ನಿಟ್ಟು ಮನೆಯಲ್ಲಿ ಪೂಜೆ ಮಾಡಬೇಕು.
ಸಾಮಗ್ರಿಗಳ ಅಭಾವದಿಂದಾಗಿ ಪ್ರತ್ಯಕ್ಷ ಪೂಜೆ ಮಾಡಲು ಸಾಧ್ಯವಿಲ್ಲದಿರುವವರು ಶ್ರೀಗುರುಗಳ ಅಥವಾ ಉಪಾಸ್ಯದೇವತೆಯ ಮಾನಸ ಪೂಜೆ ಮಾಡಬೇಕು.
ವರ್ಷವಿಡೀ ನಾವು ಸಾಧನೆ ಮಾಡುವಾಗ ಎಲ್ಲಿ ಹಿಂದೆ ಉಳಿದೆವು? ನಾವು ಶ್ರೀ ಗುರುಗಳ ಬೋಧನೆಯನ್ನು ಎಷ್ಟು ಪ್ರಮಾಣದಲ್ಲಿ ಆಚರಣೆ ಮಾಡಿದ್ದೇವೆ?, ಎಂಬುದರ ಸಿಂಹಾವಲೋಕನ ಮಾಡಿ ಅದರ ಬಗ್ಗೆ ಚಿಂತನೆ ಮಾಡಬೇಕು.
ಸೌಜನ್ಯ, ಸನಾತನ ಸಂಸ್ಥೆ
8762334512
[email protected]