ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ, ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳು, ಶಾಸಕರು, ಮಾಜಿ ಸಚಿವರು, ಕೊಡುಗೈ ದಾನಿಗಳೂ ಆದ ಡಾ. ಶಾಮನೂರು ಶಿವಶಂಕರಪ್ಪಾಜಿಯವರಿಗೆ 90ರ ಸಂಭ್ರಮ, 89 ವರ್ಷ ಪೂರೈಸಿ, 90ನೇ ವರ್ಷದ ಶುಭಾರಂಭಕ್ಕೆ ದಿಟ್ಟ ಹೆಜ್ಜೆಯಿಡುತ್ತಿರುವ ಶ್ರೀಯುತರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಮನತುಂಬಿ ಕೋರುತ್ತೇನೆ.
ವ್ಯಕ್ತಿಯ ಜೀವನದಲ್ಲಿ 90 ವರ್ಷಗಳು ಬಹಳ ಮಹತ್ವದ ಅವಧಿ. ಪ್ರಾರಂಭಿಕ ಕಷ್ಟ, ಬೆಳವಣಿಗೆಯ ಸಂತೋಷ, ಸಾಧನೆಯ ಸಂತೃಪ್ತಿ ಎಲ್ಲವೂ ಈ ಕಾಲದಲ್ಲಿ ಹೆಪ್ಪುಗಟ್ಟಿರುತ್ತವೆ. ಭವಿಷತ್ತಿನ ಜನಾಂ ಗದ ಹಿತದೃಷ್ಟಿಯಿಂದ ಶ್ರೀಯುತರ ಜೀವನ ಧಾರೆಯ ಕುರಿತು ಹೇಳುವುದು, ದಾಖಲಿಸುವುದು ಅತ್ಯಂತ ಅವಶ್ಯ ಎಂಬ ಭಾವನೆ ನನ್ನದು.
ನಾಡಿನಾದ್ಯಂತ ಮನೆ ಮಾತಾಗಿರುವ ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆಯ ನೇತಾರರು, ದೂರದೃಷ್ಟಿ ಯುಳ್ಳ ಚಿಂತಕರು, ಮಹಾನ್ ವ್ಯಕ್ತಿಗಳು ಆದ ಶ್ರೀಯುತರ ವ್ಯಕ್ತಿತ್ವವನ್ನು ಈ ಲೇಖನದಲ್ಲಿ ಹೇಳು ವುದೆಂದರೆ ಹಿರಿದಾದ ಆನೆಯನ್ನು ಕಿರಿದಾದ ಕನ್ನಡಿ ಯಲ್ಲಿ ಸೆರೆಹಿಡಿದಂತಾಗುತ್ತದೆ. ಶ್ರೀಯುತರು ಬದು ಕಿದ್ದೆ ದಂತಕಥೆಯಾಗಿರುವ ಇವರು ಅಜಾತಶತ್ರು, ಬಾಪೂಜಿ ವಿದ್ಯಾಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
ದೈವಲೀಲೆಯ ಮುಂದೆ ಮಾನವ ಲೀಲೆ ಅಲ್ವ, ಆದರೆ ಶ್ರೀಯುತರು ದೈವಾನುಗ್ರಹದಿಂದಲೇ ಲಕ್ಷ್ಮಿಪುತ್ರರಾಗಿ, ಆಯುರಾರೋಗ್ಯವನ್ನು ಪಡೆದ ಪುಣ್ಯಾತ್ಮರು, ಸರಸ್ವತಿಯ ಆರಾಧಕರು, ಸತ್ಯ, ಶುದ್ಧ, ಪ್ರಾಮಾಣಿಕ ಕಾಯಕ ಜೀವಿಗಳು. ಶ್ರೀಯುತರ ಬದುಕು ಬಂಗಾರ, ನಡೆ ದಿಟ್ಟ ಹೆಜ್ಜೆ, ದಾವಣಗೆರೆಯ ಅಭಿವೃದ್ಧಿಗೆ ಅಪ್ಪಾಜಿಯವರ ಕೊಡುಗೆ ಅಪಾರ. ರಾಜಕೀಯವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಈ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯ ಸಿದ್ಧಿಯನ್ನು ಪಡೆದು ದೇವನಗರಿಯನ್ನು ಮುನ್ನಡೆಯ ಮಾರ್ಗಕ್ಕೆ ಕೊಂಡೊಯ್ಯುತ್ತಿರುವ ಮಹಾನುಭಾವರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ : ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ವೀರಶೈವ, ಲಿಂಗಾಯತ ಬೇರೆ ಅಲ್ಲ, ವೀರಶೈವ ಲಿಂಗಾಯತ ಒಂದೇ ಧರ್ಮ ಎಂದು ಪ್ರತಿಪಾದಿಸಿ, ಬಹುದೊಡ್ಡ ಸಮಾಜವನ್ನು ಒಗ್ಗೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಸದಾ ಸಮಾಜದ ಏಳ್ಗೆ-ಬಾಳ್ಗೆಗೆ ಚಿಂತಿಸುತ್ತಾ, ಸಮಾಜಕ್ಕೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುತ್ತಾ, ವೀರಶೈವ ಲಿಂಗಾಯತ ಸಮಾಜವನ್ನು ಮುನ್ನಡೆಯ ಮಾರ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ.
ಸರ್ವ ಜನಾಂಗದ ಶಾಂತಿ ತೋಟ : ಶ್ರೀಯುತರು ಜಾತಿ-ಜನಾಂಗದ ಎಲ್ಲೇ ಮೀರಿ ಜಾತ್ಯತೀತ ಮನೋಭಾವ ಹೊಂದಿದವರು. ಎಲ್ಲಾ ಜಾತಿ, ವರ್ಗಗಳಿಗೂ ದಾನ ನೀಡಿ ಧರ್ಮದರ್ಶಿಗಳಾಗಿದ್ದಾರೆ. ನಗರದ ಎಲ್ಲಾ ಸಮಾಜಗಳಿಗೂ ಶ್ರೀಯುತರೂ ನೀಡಿದ ಕೊಡುಗೆ ಅಪಾರ. ಶ್ರೀಯುತರಿಂದ ಸಹಾಯ ಪಡೆಯದ ಸಮಾಜವೇ ಇಲ್ಲ. ಎಲ್ಲಾ ಸಮಾಜಗಳ ಬಗ್ಗೆ ಗೌರವ ಭಾವನೆಯನ್ನು ಹೊಂದಿರುವ ಶ್ರೀಯುತರು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಸಾಧನೆ : ಶ್ರೀಯುತರು ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ಇಂದಿನವರೆಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ನಾಯಕರು, ರಾಜ್ಯ ರಾಜಕೀಯದಲ್ಲಿ ಪ್ರಮುಖರು ಆಗಿದ್ದಾರೆ. ತಮ್ಮ ಸುದೀರ್ಘ ರಾಜಕಾರಣದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಮೂಡದಂತೆ, ನಿಷ್ಠಾವಂತ, ಪ್ರಾಮಾಣಿಕ ರಾಜಕಾರಣಿ ಎನಿಸಿಕೊಂಡಿದ್ದಾರೆ. ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ ನಾಡಿಗೆ, ದೇಶಕ್ಕೆ ಶ್ರೀಯುತರು ನೀಡಿದ ಕೊಡುಗೆ ಅಪಾರ.
ಸುದೀರ್ಘ ಅವಧಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತರು ವಿಭಿನ್ನ, ಪ್ರಾಮಾಣಿಕ ರಾಜಕಾರಣಿ ಗಳು. ಸ್ಪರ್ಧಾರಹಿತ, ಅಧಿಕಾರದ ಮದವಿಲ್ಲದ ಅಧಿಕಾರದ ದುರುಪಯೋಗ ಪಡಿಸಿಕೊಳ್ಳದೆ ಸತ್ಯ-ಶುದ್ಧ ಪ್ರಾಮಾ ಣಿಕ ರಾಜಕಾರಣ ಮಾಡುತ್ತಿದ್ದಾರೆ.
ಶ್ರೀಯುತರ ಕುಟುಂಬ ಪರಿವಾರ : ಶಾಮನೂರು ಶಿವಶಂಕರಪ್ಪಾಜಿ ಯವರ ಕುಟುಂಬ ಪರಿವಾರ ಬಹಳ ದೊಡ್ಡದು. ಮೂವರು ಪುತ್ರರು, ನಾಲ್ವರು ಪುತ್ರಿಯರು, ಸೊಸೆ ಯಂದಿರು, ಅಳಿಯಂದಿರು, ಮೊಮ್ಮಕಳು, ಅಪಾರ ಸಂಖ್ಯೆಯಲ್ಲಿ ಕುಟುಂಬ ಸದಸ್ಯರನ್ನು ಹೊಂದಿದ್ದಾರೆ.
ಶ್ರೀಯುತರ ಹಿರಿಯ ಪುತ್ರ ಎಸ್.ಎಸ್. ಬಕ್ಕೇಶ್ ಅವರು ಚಿತ್ರದುರ್ಗ ಜಿಲ್ಲೆ ಇರುವಾಗಲೇ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ತಮ್ಮ ಕೈಗಾರಿಕೋದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ. ದ್ವಿತೀಯ ಪುತ್ರ ಎಸ್.ಎಸ್. ಗಣೇಶ್ ಅವರು ತಮ್ಮ ಕೈಗಾರಿಕೋದ್ಯಮವನ್ನು ನೋಡಿಕೊಳ್ಳುತ್ತಾ, ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿದ್ದಾರೆ. ತೃತೀಯ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಚಿಕ್ಕ ವಯಸ್ಸಿನಲ್ಲೇ ಕರ್ನಾಟಕ ಸರ್ಕಾರದ ಯುವ ಜನ ಮತ್ತು ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸಿ ರಾಜ್ಯದ ಹಾಗೂ ದಾವಣಗೆರೆಯ ಅಭಿವೃದ್ಧಿಯ ಮುನ್ನಡೆಗೆ ಮಾರ್ಗದರ್ಶಕರಾಗಿದ್ದಾರೆ.
ವ್ಯಕ್ತಿಯ ಜೀವನದಲ್ಲಿ 90 ವರ್ಷಗಳು ಬಹಳ ಮಹತ್ವದ ಅವಧಿ. ಪ್ರಾರಂಭಿಕ ಕಷ್ಟ, ಬೆಳವಣಿಗೆಯ ಸಂತೋಷ, ಸಾಧನೆಯ ಸಂತೃಪ್ತಿ ಎಲ್ಲವೂ ಈ ಕಾಲದಲ್ಲಿ ಹೆಪ್ಪುಗಟ್ಟಿರುತ್ತವೆ.
ಭವಿಷತ್ತಿನ ಜನಾಂಗದ ಹಿತದೃಷ್ಟಿಯಿಂದ ಶ್ರೀಯುತರ ಜೀವನ ಧಾರೆಯ ಕುರಿತು ಹೇಳುವುದು, ದಾಖಲಿಸುವುದು ಅತ್ಯಂತ ಅವಶ್ಯ…
ಎಸ್.ಎಸ್. ಮಲ್ಲಿಕಾರ್ಜುನ್ ಅವರು ಎರಡನೇ ಬಾರಿಗೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾಗಿ ಸೇವೆ ಸಲ್ಲಿಸಿ, ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದಾರೆ.
ದಾವಣಗೆರೆಯ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕರ್ನಾಟಕದ ಭರವಸೆಯ ಯುವ ನಾಯಕರಾಗಿ ಮುಂಚೂಣಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಉತ್ತಮ ಭವಿಷ್ಯವಿದ್ದು ನಾಡಿನ, ದೇಶದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಉತ್ಸಾಹದ ಚಿಲುಮೆಯಾಗಿ ದಾವಣಗೆರೆಯ ಅಭಿವೃದ್ಧಿಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ತಮ್ಮ ತಂದೆಯವರ ಭವ್ಯ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಇವರು ಕೂಡಾ ತಮ್ಮ ತಂದೆಯಂತೆ ದಿಟ್ಟ ಹೆಜ್ಜೆಯಿಟ್ಟು ಮುನ್ನಡೆಯುತ್ತಿದ್ದಾರೆ.
ದಾವಣಗೆರೆಯ ಜೀವನಾಡಿ ಬಾಪೂಜಿ ವಿದ್ಯಾಸಂಸ್ಥೆ : ಶ್ರೀಯುತರು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ನಂತರ ಸಂಸ್ಥೆಯನ್ನು ಉತ್ತಮ ಮಟ್ಟದಲ್ಲಿ ಬೆಳೆಸಲು ಮತ್ತು ಅತ್ಯಾವಶ್ಯಕ ಶಿಕ್ಷಣ ಮಹತ್ವಪೂರ್ಣವೆಂಬ ಕಾರ್ಯವನ್ನು ಮನಗಂಡು, ಶೈಕ್ಷಣಿಕ ಕ್ಷೇತ್ರದ ಪ್ರಮುಖ ಎಲ್ಲಾ ಕಾಲೇಜುಗಳನ್ನು ಆರಂಭಿಸಿದರು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೂ ಕಾಲೇಜ್‌ಗಳನ್ನು ಆರಂಭಿಸಿದ್ದಾರೆ.
ಬಾಪೂಜಿ ವಿದ್ಯಾಸಂಸ್ಥೆಯ ಕಾಲೇಜುಗಳಲ್ಲಿ ಅಧ್ಯಯನ ಮಾಡಿ ಹೊರ ಬಂದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯ ಪ್ರತಿಭೆಗಳಾಗಿ ಮಿಂಚುತ್ತಿರುವುದು ಅಭಿಮಾನಪಡುವ ಸಂಗತಿಯಾಗಿದೆ.
ಶ್ರೀಯುತರ 90ನೇ ವರ್ಷದ ಶುಭ ಸಂದರ್ಭ ದಲ್ಲಿ ಅನೇಕ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಜನರ ಶಿಕ್ಷಣಕ್ಕೆ ಅನುಕೂಲ ವಾಗಲಿ ಮತ್ತು ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಸಾಧಿಸುವಂತಾಗಲಿ. ಎಲ್ಲಾ ದಾನಗಳಲ್ಲಿ ವಿದ್ಯಾದಾನ ಬಹಳ ಶ್ರೇಷ್ಠವಂತೆ, ಶ್ರೀಯುತರು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಕೆಲಸ. ಇದನ್ನು ಬಹಳ ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಥೆಯಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ಬದುಕಿಗೆ ದಾರಿ ದೀಪವಾಗಲಿ, ಶ್ರೀಯುತರಿಗೆ ಭಗವಂತನು ಸಕಲ ಸಿರಿ ಸಂಪತ್ತನ್ನು, ಆಯುರಾ ರೋಗ್ಯವನ್ನು ದಯಪಾ ಲಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಅಥಣಿ ವೀರಣ್ಣ
ಚಾರ್ಟರ್ಡ್ ಅಕೌಂಟೆಂಟ್
ದಾವಣಗೆರೆ.