ಭಯ ಬೇಡ, ಇದೊಂದು ಸಾಮಾನ್ಯ ಸೋಂಕು..

ಕೊರೊನಾ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಕಾಯಿಲೆ ತೀವ್ರತೆಗಿಂತ ಪ್ರಚಾರ ಅತಿ ಹೆಚ್ಚು ಪಡೆದು ಮನುಷ್ಯನ ಮಾನಸಿಕ ಸ್ಥೈರ್ಯವನ್ನು ಅಲ್ಲಾಡಿಸಿ ಬಿಟ್ಟಿದೆ.

ದೃಶ್ಯ ಮಾಧ್ಯಮಗಳಲ್ಲಂತೂ 24 ಗಂಟೆ ಕಾಯಿಲೆ ಬಗ್ಗೆ ಪ್ರಚಾರ ಹೆಚ್ಚಾಗಿದೆ. ಶೀತ, ನೆಗ ಡಿಯ ಮಾದರಿಯ, ಸ್ವಲ್ಪ ಹೆಚ್ಚು ತೀವ್ರತೆ ಇದೆ ಎಂಬುದು ಬಿಟ್ಟರೆ ಕೊರೊನಾ ಕಾಯಿಲೆ ಸತ್ತ ವರ ಸಂಖ್ಯೆ ಅತೀ ಕಡಿಮೆ. ಸತ್ತವರಲ್ಲಿ ಮೊದಲೇ ಅನಾರೋಗ್ಯದಿಂದ ಬಳಲುತ್ತಿರುವವರು, ಈಗ ಲೋ, ಆಗಲೋ ಸಾವಿನ ಕದ ತಟ್ಟುತ್ತಿರುವವರೇ ಹೆಚ್ಚು. ಆದರೆ, ವಿಶ್ವಸಂಸ್ಥೆಯಿಂದ ಹಿಡಿದು ಸರ್ಕಾರ ಗಳೆಲ್ಲಾ ಇದರ ಹಿಂದೆ ಬಿದ್ದು, ಪ್ರಚಾರ ಗಳ ಮೇಲೆ ಪ್ರಚಾರ ನೀಡಿ ಜನರನ್ನು ಭಯಭೀತ ರನ್ನಾಗಿಸಿದೆ. ಇದಕ್ಕಿಂತ ತೀವ್ರವಾದ ವಾಸಿಯಾ ಗದ ಕಾಯಿಲೆಗಳಿವೆ. ಅವುಗಳ ಕುರಿತು ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ. ಉದಾಹರಣೆಗೆ ಏಡ್ಸ್‌ನಂತಹ ಮಹಾಮಾರಿ, ಕ್ಯಾನ್ಸರ್ ಇತ್ಯಾದಿ.

ಶೇ. 80 ಜನರಲ್ಲಿ ಕೊರೊನಾ ಕಾಯಿಲೆ ಲಕ್ಷಣಗಳು ಕಂಡು ಬರುವುದಿಲ್ಲ. ಗುಣಮುಖ ರಾಗುತ್ತಾರೆ. ದೇಶದ ಎಲ್ಲಾ ಜನರನ್ನು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಎಂದರೆ ಹತ್ತಾರು ವರ್ಷಗಳೇ ಬೇಕಾದೀತು. ಇದು ಮೂರ್ಖತನ. ಇದರ ಬದಲಾಗಿ ತೀವ್ರವಾಗಿ ಬಳಲುತ್ತಿರುವವರನ್ನು ಪರೀಕ್ಷಿಸುವುದು ಹಾಗೂ ಚಿಕಿತ್ಸೆ ನೀಡುವುದು ಉತ್ತಮ.

ಭಾರತ್‌ ಬಂದ್, 144ನೇ ಸೆಕ್ಷನ್ ಕರ್ಫ್ಯೂ, ಸೀಲ್‌ಡೌನ್, ಲಾಕ್‌ಡೌನ್, ಕಂಟೈನ್‌ ಮೆಂಟ್ ಜೋನ್, ರೆಡ್ ಜೋನ್, ಆರೆಂಜ್ ಜೋನ್, ಕ್ವಾರಂಟೈನ್, ಕೈಗೆ ಸೀಲ್ ಹಾಕುವು ದು ಇವೆಲ್ಲಾ ನಗೆಪಾಟಲಿಗೀಡು ಮಾಡುವಂತಹ ಸಂಗತಿ. ಇದರಿಂದ ಹೆದರಿದ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ನಡೆದವು. ಕೊರೊನಾ ಸೋಂಕಿತರನ್ನು ಅಪರಾಧಿಯನ್ನಾಗಿಯೂ ನೋಡಲಾಯಿತು.

ಇವೆಲ್ಲದರಿಂದ ದೇಶದ ಆರ್ಥಿಕತೆಗೆ ಧಕ್ಕೆ ಉಂಟು ಮಾಡಿದಂತಾಗಿದೆ. ಮಾಹಿತಿ ಪ್ರಕಾರ 10 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಣ್ಣ, ಪುಟ್ಟ ಉದ್ಯಮಗಳು ಮುಚ್ಚಿಕೊಂಡು ಬೀದಿಗೆ ಬರುವಂತಾಗಿದೆ. ಹೀಗೆ ಮುಂದುವರೆದರೆ ಭಾರತ ಬಡರಾಷ್ಟ್ರವಲ್ಲ, ಕಡುಬಡತನದ ರಾಷ್ಟ್ರವಾಗಬಹುದು. ಕೊರೊನಾ ಕಾಯಿಲೆಯನ್ನು ಕೆಲವರು ಬಂಡವಾಳ ಮಾಡಿಕೊಂಡರೆ ಮತ್ತೆ ಕೆಲವರು ಹೆದರಿಸುವ ಉದ್ಯಮವಾಗಿಸಿಕೊಂಡಿದ್ದಾರೆ. 

ಭಾರತೀಯರ ಆಹಾರ ಪದ್ಧತಿ, ಆಯುರ್ವೇದ ಬಳಕೆ ಇವುಗಳಿಂದ ರೋಗ ನಿರೋಧಕ ಶಕ್ತಿ ಅತಿ ಹೆಚ್ಚಾಗಿದೆ. ಇದರಿಂದ ಕೊರೊನಾ ನಮ್ಮನ್ನು ಏನೂ ಮಾಡಲಾಗದು. ಮೊದಲು ಭಯದ ವಾತಾವರಣದಲ್ಲಿ ಬದುಕುವುದನ್ನು ಬಿಟ್ಟು, ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಎಚ್ಚರಿಕೆ ವಹಿಸಿದರೆ ಸಾಕು. ಕೊರೊನಾ ಕಾಯಿಲೆಯಿಂದ ಸತ್ತವರ ಸಂಖ್ಯೆಗಿಂತ ಭಯದಿಂದ ಸತ್ತವರ ಸಂಖ್ಯೆ ಹೆಚ್ಚು. ಮನಸ್ಸಿನಿಂದ ಭಯವನ್ನು ತೆಗೆದು, ಮೊದಲಿನ ಹಾಗೆ ಸಾಮಾನ್ಯ ಜೀವನ ನಡೆಸಬೇಕಾಗಿದೆ.


ಹೆಲ್ಪ್‌ಲೈನ್ ಸುಭಾನ್
[email protected]

 

error: Content is protected !!