ಕೊರೊನಾ ವೈರಸ್‌ ಸೋಂಕು ರೋಗಕ್ಕೆ ಆಯುರ್ವೇದ ಅಸ್ತ್ರ

ಮನುಕುಲವನ್ನು ನಾಶ ಮಾಡಲು ಕೊರೊನಾವೆಂಬ ರಾಕ್ಷಸರು ನಮ್ಮ ಭೂಮಿಗೆ ಆಗಮಿಸಿವೆ. ಹೀಗೆ ನಾವು ಅದರ ಜೊತೆ ಯುದ್ಧ ಮಾಡುವ ಸಮಯ ಬಂದಿದೆ. ಈ ಯುದ್ಧದಲ್ಲಿ ನಮಗೆ ಸಾಕಷ್ಟು ಶಸ್ತ್ರಾಸ್ತ್ರಗಳು ಬೇಕಾಗಿವೆ. ಅದರಲ್ಲಿ ಬಹುಮುಖ್ಯವಾದ ಅಸ್ತ್ರ ಆಯುರ್ವೇದ.

ಆಯುರ್ವೇದ, ಒಂದು ಬಹು ಪ್ರಾಚೀನ ಮತ್ತು ವೈಜ್ಞಾನಿಕವಾದ ಭಾರ ತೀಯ ಪದ್ಧತಿ. ಆಯುರ್ವೇದದಲ್ಲಿ ಜನಪೋ ದ್ದೂಂಸ ಉಲ್ಲೇಖವನ್ನು ಕಾಣಬಹುದು. ಜನಪದ ಅಂದರೆ ಜನಸಮೂಹ ಮತ್ತು ಉದೂಂಸ ಅಂದರೆ ನಾಶ ಮಾಡುವುದು. ಇದರ ಅರ್ಥ ಮನುಕುಲವನ್ನು ಮಾರಣ ಹೋಮ ಮಾಡುವುದು. ಕೊರೊನಾ ರೋಗವನ್ನು ಈ ಜನಪೋದ್ದೂಂಸ ಕಾಯಿಲೆಗಳಿಗೆ ಹೋಲಿಸಬಹುದು.

ಜನಪೋದ್ದೂಂಸ ರೋಗಗಳಿಗೆ ಕಾರಣ ಗಳು ಕಲ್ಮಶವಾದ ಗಾಳಿ, ನೀರು, ಭೂಮಿ ಮತ್ತು ಕಾಲ. ಈ ರೋಗಗಳು ರೋಗಿಯನ್ನು ಸ್ಪರ್ಷ ಮಾಡುವುದರಿಂದ, ರೋಗಿಯ ಉಸಿರು ಕುಡಿಯುವುದರಿಂದ, ಆಹಾರ ಮತ್ತು ನಿದ್ದೆ ರೋಗಿಯ ಜೊತೆ ಮಾಡು ವುದರಿಂದ, ಜೊತೆಯಾಗಿ ಕಾಲ ಕಳೆಯುವು ದರಿಂದ, ರೋಗಿಯ ವಸ್ತ್ರ ಮತ್ತು ವಸ್ತುಗ ಳನ್ನು ಬಳಸುವುದರಿಂದ ಹರಡುವುದು.

ಕೊರೊನಾ ಎಂಬ ಹೆಸರು ಈಗ ಇಡೀ ವಿಶ್ವಾದ್ಯಂತ ಕೇಳಿ ಬರುತ್ತಿದೆ. ಈ ಹೆಸರು ಮೊದಲು ಹುಟ್ಟಿದ್ದು 1968ರ ಜೂನ್ ತಿಂಗಳಲ್ಲಿ. ಆಲ್ ಮ್ಹೆಡಾ ಹಾಗೂ ಡೇವಿಡ್ ಟ್ವೆರೆಲ್ ಎಂಬ ವಿಜ್ಞಾನಿಗಳು ಈ ವೈರಾಣುಗಳನ್ನು ಕಂಡು ಹಿಡಿದರು. ಈ ಕಾಯಿಲೆಯನ್ನು ಪೆನಂಡಮಿಕ್ ಎಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಹಾಗೂ ಇದನ್ನು ತೀವ್ರ ಉಸಿರಾಟದ ಕಾಯಿಲೆಯ ಅಡಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.

ಕೊರೊನಾ ಕಾಯಿಲೆಯ ಗುಣಲಕ್ಷಣಗಳು ಹೀಗಿರುತ್ತವೆ : ಕೆಲವರಿಗೆ ಕೆಮ್ಮು, ನೆಗಡಿ, ಹಲವರಿಗೆ ಜ್ವರ, ಮೈ-ಕೈ ನೋವು, ಗಂಟಲು ಕೆರೆತ, ವಾಂತಿ, ವಾಕರಿಕೆ, ಉಸಿರಾಡಲು ಕಷ್ಟವಾಗುವುದು, ಇತ್ತೀಚಿನ ಸಂಶೋಧನೆಯ ಪ್ರಕಾರ ಮುಖವು ನೀಲಿ ವರ್ಣವಾಗಿ ಬದಲಾಗುತ್ತದೆ.

ಆಯುರ್ವೇದ ಸಿದ್ಧಾಂತದಂತೆ ಮೊದಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಎರಡನೆಯದು ರೋಗ ಬಂದರೆ ಅದಕ್ಕೆ ಚಿಕಿತ್ಸೆ ನೀಡಬೇಕು.

ಆರೋಗ್ಯವೆಂದರೆ ತ್ರಿದೋಷ, ಸಪ್ತಧಾ ತುಗಳು ಮತ್ತು ಮಲಗಳು ಸಮಸ್ಥಿತಿಯಲ್ಲಿ ಇರಬೇಕು.  ಇವುಗಳಲ್ಲಿ ಯಾವುದಾದರೂ ಹೆಚ್ಚು ಕಡಿಮೆಯಾದರೆ ರೋಗ ಎಂದು ಕರೆಯುತ್ತೇವೆ. ಈ ಎಲ್ಲಾ ದೋಷಧಾತುಗಳು ಸಮಪ್ರಮಾಣದಲ್ಲಿ ಇದ್ದರೆ ಓಜಸ್ ಎಂಬುದು ಉತ್ಪತ್ತಿಯಾಗುತ್ತದೆ. ಓಜಸ್ ಎಂದರೆ ರೋಗ ನಿರೋಧಕ ಶಕ್ತಿ. ಇದರ ಅರ್ಥ ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡಿಕೊಂಡರೆ, ಕೊರೊನಾ ಎಂಬ ಕಾಯಿಲೆಯಿಂದ ಸುಲಭವಾಗಿ ಯುದ್ಧ ಮಾಡಬಹುದು. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒಳ್ಳೆಯ ಆಹಾರ, ದಿನಚರ್ಯ, ಯೋಗಾಸನ ಮತ್ತು ರಸಾಯನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಆಹಾರ : ಪದೇ ಪದೇ ಬಿಸಿ ನೀರನ್ನು ಕುಡಿಯಬೇಕು. 4-5 ಲೀಟರ್ ಅಥವಾ ದೇಹದ ತೂಕದಂತೆ ನೀರನ್ನು ಪ್ರತಿದಿನ ಕುಡಿಯಬೇಕು. ಬೇಯಿಸಿದ ಆಹಾರವನ್ನು ಸೇವಿಸಬೇಕು. ದಿನ ತಾಜಾ ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಸೇವಿಸಬೇಕು. ಹೆಸರುಕಾಳು, ತೊಗರಿ ಬೇಳೆ, ಪಡುವಲಕಾಯಿ ಹೆಚ್ಚಾಗಿ ಸೇವಿಸಬೇಕು. ಅಡುಗೆಯಲ್ಲಿ ಅರಿಶಿಣ, ಜೀರಿಗೆ, ದನಿಯಾ, ದಾಲ್ಚಿನ್ನಿ, ಬೆಳ್ಳುಳ್ಳಿ ಉಪಯೋಗ ಮಾಡಬೇಕು. ದಾಳಿಂಬೆ, ಬಾದಾಮಿ, ಗೋಡಂಬಿ, ಉತ್ತುತ್ತಿ ಬಳಸುವುದು, ಮಾಂಸ ಮತ್ತು ಜಂಕ್‌ಫುಡ್ ಸೇವನೆ ಬೇಡ. ಹಾಲಿನ ಉತ್ಪಾದನೆ ಮತ್ತು ಹುಳಿ ಕಡಿಮೆ ಮಾಡಿ.

ದಿನಚರ್ಯ ಅಥವಾ ಜೀವನ ಶೈಲಿ : ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಕೈ ಸಾಬೂನಿನಿಂದ ತೊಳೆಯುವುದು. ವಿಶ್ರಾಂತಿ ಜೊತೆಗೆ ರಾತ್ರಿ ಬೇಗ ಮಲಗಬೇಕು. ಸ್ನಾನಕ್ಕೆ ಬಿಸಿ ನೀರು ಬಳಸಿ. ಎರಡು ದಿನಕ್ಕೊಮ್ಮೆ ಸ್ನಾನಕ್ಕಿಂತ ಮುಂಚೆ ಲಘುವಾಗಿ ದೇಹಕ್ಕೆ ಮಸಾಜ್ ಮಾಡಿಕೊಳ್ಳಿ. ಬೆಳಿಗ್ಗೆ ಮೂಗಿಗೆ ಅಣು ತೈಲ ಅಥವಾ ಕೊಬ್ಬರಿ ಎಣ್ಣೆ ಎರಡು ಹನಿ ಹಾಕಿಕೊಳ್ಳಿ. ಹೊರಗಿನಿಂದ ಬಂದರೆ ಬಿಸಿನೀರಿನಲ್ಲಿ ಬೆಳ್ಳುಳ್ಳಿ ರಸ, ಉಪ್ಪು, ಅರಿಶಿನ ಬೆರೆಸಿ ಮುಕ್ಕಳಿಸಿ. ಹೆಚ್ಚು ತಿನ್ನುವುದು, ಟಿವಿ., ಮೊಬೈಲ್ ಬಳಕೆ ಕಡಿಮೆ ಮಾಡಿ, ಒಳ್ಳೆಯ ಪುಸ್ತಕ, ಸಂಗೀತ, ಮನೆಯ ಹಿರಿಯರೊಂದಿಗೆ ಬೆರೆಯಿರಿ.

ಯೋಗಾಸನ : ಬೆಳಿಗ್ಗೆ 6 ರಿಂದ 7 ಗಂಟೆಗೆ ಯೋಗಾಸನ ಅಭ್ಯಾಸ ಮಾಡಬೇಕು. 2 ರಿಂದ 3 ಸಾರಿ ಸೂರ್ಯ ನಮಸ್ಕಾರಗಳು, ವಜ್ರಾಸನ, ಭುಜಂಗಾಸನ, ತಾಡಸಾಸನ, ವಕ್ರಾಸನ, ಪದ್ಮಾಸನ, ಪ್ರಾಣಾಯಾಮ, ಶವಾಸನ ಅಭ್ಯಾಸ ಮಾಡಬೇಕು. ಈ ಎಲ್ಲಾ ಆಸನಗಳನ್ನು ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢತೆ ಕಾಯ್ದುಕೊಳ್ಳಬಹುದು.

ರಸಾಯನ : ಆಯುರ್ವೇದದಲ್ಲಿ ರಸಾಯನ ಚಿಕಿತ್ಸೆ ಎಂಬ ಅದ್ಭುತ ಭಾಗವಾಗಿದೆ. ಈ ರಸಾಯನಗಳನ್ನು ಸೇವಿಸುವುದರಿಂದ ಸಪ್ತಧಾತು ವೃದ್ಧಿಯಾಗುವುದು. ಅದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಿಸುತ್ತದೆ.

ಮಾರುಕಟ್ಟೆಯಲ್ಲಿ ವಿಧ-ವಿಧವಾದ ರಾಸಾಯನಗಳು ಲಭ್ಯವಿರುವವು. ವೈದ್ಯರ ಸಲಹೆ ಮೇರೆಗೆ ದೇಹದ ಪ್ರಕೃತಿ ಅನುಸಾರವಾಗಿ ರಸಾಯನ ಸೇವಿಸಬೇಕು.

ರೋಗ ನಿರೋಧಕ ಶಕ್ತಿ ಒಮ್ಮೆಲೇ ಬರುವುದಿಲ್ಲ. ಇದನ್ನು ತಪಸ್ಸಿನ ತರಹ ಈ ಮೇಲ್ಕಂಡ ಎಲ್ಲಾ ಅಭ್ಯಾಸಗಳನ್ನು ಮಾಡಿದರೆ ನಿಧಾನವಾಗಿ ವೃದ್ಧಿಯಾಗುವುದು.  ಹಾಗೆಯೇ ಕೊರೊನಾದಂತಹ ಸಾಂಕ್ರಾಮಿಕ ರೋಗಗಳನ್ನು ನಾವು ಧೈರ್ಯವಾಗಿ ಎದುರಿಸಬಹುದು. ಮತ್ತು ಆರೋಗ್ಯವಾಗಿ ಜೀವನ ಮಾಡಬಹುದು.


ಡಾ. ಎಲ್.ಎಂ. ಜ್ಞಾನೇಶ್ವರ, 
ಪ್ರಾಂಶುಪಾಲರು,  ಪಂಚಕರ್ಮ ತಜ್ಞರು, ಎಎಂಸಿ ಮತ್ತು ಪಿ.ಜೆ. ಸೆಂಟರ್,
ಜ್ಞಾನೇಶ್ವರ ಆಯುರ್ವೇದ ಕ್ಲಿನಿಕ್, ದಾವಣಗೆರೆ.
ಮೊ : 93410 11199

error: Content is protected !!